ಹೊಸ ಬಡಾವಣೆಗಳ ನಗರ ಸಾರಿಗೆ ಬಸ್ ಸಂಚಾರ ಸೇವೆಗೆ ಚಾಲನೆ

ಹೊಸ ಬಡಾವಣೆಗಳ ನಗರ ಸಾರಿಗೆ ಬಸ್ ಸಂಚಾರ ಸೇವೆಗೆ ಚಾಲನೆ

ಹೊಸ ಬಡಾವಣೆಗಳ ನಗರ ಸಾರಿಗೆ ಬಸ್ ಸಂಚಾರ ಸೇವೆಗೆ ಚಾಲನೆ

ಚಾಲನೆ ನೀಡಿ ಬಸ್ ನಲ್ಲೇ ಸಂಚರಿಸಿದ ಶಾಸಕ ಅಲ್ಲಮಪ್ರಭು ಪಾಟೀಲ್

ಕಲಬುರಗಿ: ನಗರದ ಹೊಸ ಬಡಾವಣೆಗಳಾದ ನ್ಯೂ ಓಝಾ ಲೇ ಔಟ್, ಕುಬೇರ ನಗರ, ಜಿಡಿಎ ಬಡಾವಣೆ, ಔಷಧ ಭವನ ಸೇರಿ ಇತರ ಬಡಾವಣೆಗಳಿಗೆ ನಗರ ಬಸ್ ಸಂಚಾರ ಸೇವೆಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು.

ನಗರದ ರಾಮ ಮಂದಿರ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ನೂತನ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ್, ನಾಲ್ಕು ದಿನಗಳ ಹಿಂದೆ ನ್ಯೂ ಓಝಾ ಲೇ ಔಟ್ ಬಡಾವಣೆಯ ಓಝಾ ಅವರ ಮನೆ ಆವರಣದಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಮಹಿಳೆಯರು ನಗರ ಬಸ್ ಸಂಚಾರಕ್ಕೆ ಮನವಿ ಮಾಡಿದ್ದರಿಂದ ನೂತನ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಈ ನೂತನ ಬಸ್ ಸಂಚಾರದಿAದ ನಾಗರಿಕರಿಗೆ ಮಾರ್ಕೆಟ್‌ಗೆ ಹೋಗಲು ಹಾಗೂ ವಿದ್ಯಾರ್ಥಿ ಗಳಿಗೆ ಶಾಲಾ - ಕಾಲೇಜ್ ಗೆ ಹೋಗಲು ಅನುಕೂಲವಾಗಲಿದೆ ಎಂದು ಶಾಸಕರು ಹೇಳಿದರು.

ಹೊಸ ಬಡಾವಣೆಗಳಿಗೆ ಅಗತ್ಯ ಮೂಲ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಒಳಚರಂಡಿ ಹಾಗೂ ಇತರ ಕಾರ್ಯ ಗಳನ್ನು ಆದ್ಯತೆ ಮೇರೆಗೆ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಬಸವರಾಜ ಬಿರಾಳ, ಪ್ರಮುಖರಾದ ರವಿ ವಿಭೂತಿ, ಬಡಾವಣೆಯ ಪ್ರಮುಖರಾದ ಅಂಕಿತ್ ಓಝಾ, ಮೇಘಾ ಓಝಾ, ಭಾರತಿ ಸರಡಗಿ, ಗೋಧಾವರಿ ಪಾಟೀಲ್, ಪ್ರಶಾಂತ ಪಾಟೀಲ್, ಸುನೀಲ ನಾಗನಹಳ್ಳಿ, ಪ್ರಶಾಂತ ನಾಗನಹಳ್ಳಿ, ಶರಣಬಸವ ಹಿರೇಮಠ, ಗುರುಲಿಂಗಪ್ಪಗೌಡ ಆಲೂರ, ದೇವು ಸರಡಗಿ , ಸಂಗೀತಾ ಅಲ್ದಿ, ಕೃಷ್ಣಾ ಹಿರೇಕಲ್, ಸಂಗಮೇಶ ಕೆಂಗನಾಳ, ಶರಣಗೌಡ ಪಾಟೀಲ್, ಪ್ರಭಾವತಿ ರೆಡ್ಡಿ, ರಾಜ ಲಕ್ಷ್ಮೀ ಬಿರಾದಾರ, ಮಲ್ಲಿಕಾರ್ಜುನ ಸರಡಗಿ, ಪದ್ಮಾಕರ ಕುಲಕರ್ಣಿ, ಬಾಬುರಾವ ಕುಲಕರ್ಣಿ, ನಾಗಣ್ಣ ಮಚೆಟ್ಡಿ, ನಾಗೇಂದ್ರಪ್ಪ, ಶಿವಾಜಿ ಜಿ.ಕೆ, ಬಸನಗೌಡ ಪಾಟೀಲ್, ರಮೇಶ ಸಿಂಪಿ, ಕೃಷ್ಣಾ ನಾಯಕ, ಕೆಕೆಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದು ಜೆ, ವಿಭಾಗೀಯ ಸಂಚಾರ ಅಧಿಕಾರಿ ಈಶ್ವರ ಹೊಸಮನಿ, ಎಟಿಎಸ್ ಗೊಲ್ಲಾಳಪ್ಪ ಬಿರಾದಾರ, ಡಿಪೋ ಮ್ಯಾನೇಜರ್ ಮಂಜುನಾಥ ಮಾಯನ್ನವರ್ ಸೇರಿದಂತೆ ಮುಂತಾದವರಿದ್ದರು.