ನಗರ, ಗ್ರಾಮೀಣ ಮಟ್ಟದಲ್ಲಿ ಎರಡು ಹಂತದ ಸ್ವಚ್ಛತಾದ ಅಭಿಯಾನ: ಪ್ರಾಧ್ಯಾಪಕಿ ಶ್ರೀದೇವಿ
ನಗರ, ಗ್ರಾಮೀಣ ಮಟ್ಟದಲ್ಲಿ ಎರಡು ಹಂತದ ಸ್ವಚ್ಛತಾದ ಅಭಿಯಾನ: ಪ್ರಾಧ್ಯಾಪಕಿ ಶ್ರೀದೇವಿ
ಕಲಬುರ್ಗಿ ಹಿರೇಮಠ: ಸ್ವಚ್ಛತೆಯೇ ಎಲ್ಲರ ಸೇವೆಯಾಗಬೇಕು. ಆ ಹಿನ್ನೆಲೆಯಲ್ಲಿ ಮಹಾವಿದ್ಯಾಲಯದ ವತಿಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು ಎರಡು ಹಂತಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕನ್ನಡ ಪ್ರಾಧ್ಯಾಪಕಿ ಶ್ರೀಮತಿ ಶ್ರೀದೇವಿ ಹಿರೇಮಠ ಅವರು ಹೇಳಿದರು.
ನಗರದ ಎಂ.ಎನ್ ದೇಸಾಯಿ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಗಾಂಧೀಜಿ ಜಯಂತಿಯ ಪ್ರಯುಕ್ತ ನಗರದ ಗೋದುತಾಯಿ ಕಾಲೋನಿಯ ಶಿವಮಂದಿರದ ಸ್ಥಳದಲ್ಲಿ ಹಮ್ಮಿಕೊಂಡ ಸರ್ವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 2014ರ ಅಕ್ಟೋಬರ್ 2ರಂದು ಇಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೀಗಾಗಿ ದೇಶದೆಲ್ಲೆಡೆ ಸ್ವಚ್ಛತಾ ಅಭಿಯಾನ ಆರಂಭಗೊAಡಿದೆ ಎಂದರು.
ಮಹಾ ವಿದ್ಯಾಲಯವು ಎರಡು ಹಂತಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲು ಉದ್ದೇಶಿಸಿದೆ. ನಗರ ಸ್ವಚ್ಚತಾ ಅಭಿಯಾನ ಮೊದಲು ಆರಂಭಿಸಿ, ನಂತರ ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಇಂತಹ ಅಭಿಯಾನದಲ್ಲಿ ಕಾಲೇಜಿನ ಎಲ್ಲ ಅಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯವರೂ ಸಹ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಅವರು ಹೇಳಿದರು
ರಾಜ್ಯಶಾಸ್ತ್ರದ ಪ್ರಾಧ್ಯಾಪಕಿ ರೇಷ್ಮಾ ಚವ್ಹಾಣ್ ಅವರು ಮಾತನಾಡಿ, ಗ್ರಾಮೀಣ ಅಭಿವೃದ್ಧಿಯಾದರೆ ಇಡೀ ದೇಶವೇ ಅಭಿವೃದ್ಧಿ ಆಗುತ್ತದೆ ಎಂದು ಮಹಾತ್ಮಾ ಗಾಂಧೀಜಿ ಅವರು ಹೇಳಿದ್ದರು. ಅದೇ ರೀತಿ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಪ್ರತಿ ವರ್ಷ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಂದೀಪ್ ದೇಸಾಯಿ, ಕಾರ್ಯದರ್ಶಿ ಜಗನ್ನಾಥ್ ನಾನೂರ್ ಅವರು ಅಭಿಯಾನಕ್ಕೆ ಚಾಲನೆ ನೀಡಿದ
ರು.