ಮ್ಯಾನ್ಯುಯಲ್ ಸ್ಯಾವೆಂಜರ್ಸ್ ಕುರಿತು ಒಂದು ದಿನದ ಕಾರ್ಯಾಗಾರ

ಮ್ಯಾನ್ಯುಯಲ್ ಸ್ಯಾವೆಂಜರ್ಸ್ ಕುರಿತು ಒಂದು ದಿನದ ಕಾರ್ಯಾಗಾರ
ಕಲಬುರಗಿ: ನಗರದ ಜಿಲ್ಲಾ ಪಂಚಾಯತ ಸಭಾಗಂಣದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಕಲಬುರಗಿ ಜಿಲ್ಲೆ ಮಾನ್ಯ ಆಯುಕ್ತರು, ಮಹಾನಗರ ಪಾಲಿಕೆ ಕಲಬುರಗಿ ರವರ ಅಧ್ಯಕ್ಷತೆಯಲ್ಲಿ ಮ್ಯಾನ್ಯುಯಲ್ ಸ್ಯಾವೆಂಜರ್ಸ್ ಫಲಾನುಭವಿಗಳಿಗೆ ಒಂದು ದಿನದ ಕಾರ್ಯಾಗಾರದಲ್ಲಿ ನವದೆಹಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಜಗದೀಶ್ ಹಿರೇಮನಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿ.ಪಂ. ಯೋಜನಾ ನಿರ್ದೇಶಕ ಜಗದೇವಪ್ಪ, ರಾಜ್ಯ ಮೇಲ್ವಿಚಾರಣೆ ಸಮಿತಿ ಸದಸ್ಯೆ ನರ್ಮದಾ ಸೌಧ, ಸಂಪನ್ಮೂಲ ವ್ಯಕ್ತಿಗಳು ಕೌಶಲ್ಯಾಭಿವೃದ್ಧಿ ಇಲಾಖೆಯ ಅಬ್ದುಲ್ ರಹೀಮ್, ಜಾಗೃತಿ ಸಮಿತಿಯ ಸದಸ್ಯ ಆಕಾಶ ಎಸ್.ಪಾರ್ಚಾ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.