ಸ್ಲಂ ಜನಾಂದೋಲನ ಜಿಲ್ಲಾ ಘಟಕದಿಂದ ಸಿಎಂ ಅವರಿಗೆ ಮನವಿ
ಸ್ಲಂ ಜನಾಂದೋಲನ ಜಿಲ್ಲಾ ಘಟಕದಿಂದ ಸಿಎಂ ಅವರಿಗೆ ಮನವಿ
ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿರುವ ಜಿಲ್ಲೆಗಳಲ್ಲಿರುವ ಸ್ಲಂಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ಎಚ್ಚರ ನೀಡಲು ಮತ್ತು ಗುತ್ತಿಗೆದಾರರ ಲೈಸನ್ಸ್ಗಳು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಸ್ಲಂ ಜನಾಂದೋಲನ ಜಿಲ್ಲಾ ಘಟಕದಿಂದ ಸಿಎಂ ಅವರಿಗೆ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕದಲ್ಲಿ ಭಾಗದಲ್ಲಿ ಬರುವ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ, ಬಳ್ಳಾರಿ, ರಾಯಚೂರ, ಕೊಪ್ಪಳ ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಸ್ಲಂ ಜನರು ವಾಸವಾಗಿದ್ದು ಸರ್ಕಾರದ 2020ರಲ್ಲಿ ಸ್ಲಂ ಜನರಿಗೆ ಹಕ್ಕುಪತ್ರ ನೀಡುವಂತೆ ಆದೇಶ ಆಗಿದ್ದರು ಸಹ ಇಲ್ಲಿಯವರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಲಬುರಗಿ, ಚಿತ್ತಾಪೂರ, ರಾಯಚೂರ, ದೇವದುರ್ಗ, ಆಳಂದ, ಸೇಡಂ ಸೇರಿದಂತೆ 9 ಸಾವಿರ ಹಕ್ಕು ಪತ್ರ ನೀಡಿರುತ್ತಾರೆ. ಇನ್ನು ಉಳಿದ ಜಿಲ್ಲೆಗಳಿಗೆ ಡಿ.ಡಿ. ಕಟ್ಟಿ ಒಂದು ವರ್ಷ ಗತಿಸಿದರೂ ಸಹ ಚುನಾವಣೆ ನೆಪ ಹೇಳುತ್ತಿದ್ದು ಸ್ಲಂ ಜನರನ್ನು ಗೋಳಾಡಿಸುತ್ತಿದ್ದಾರೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ವರ್ಷಗಳಿಂದ Pಒಂಙ, ಊಇಂ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಮನೆಗಳು 5 ವರ್ಷ ಗತಿಸಿದರೂ ಸಹ ಗುತ್ತಿಗೆದಾರರು ಸ್ಲಂ ಜನರ ಹತ್ತಿರ ಹಣವನ್ನು ವಸೂಲಿ ಮಾಡುವುದಲ್ಲದೇ ಮನೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಲಬುರಗಿಯಲ್ಲಿ ಫಲಾನುಭವಿಗಳ ಮನೆ ಸಂಪೂರ್ಣವಾಗಿದೆ ಎಂದು ಬಿಲ್ಲು ಸಹ ಎತ್ತಿಕೊಂಡಿದ್ದಾರೆ.
ಯಾದಗಿರಿ, ರಾಯಚೂರು, ಕಲಬುರಗಿ, ಬೀದರ, ಹುಮನಾಬಾದ, ಬಸವಕಲ್ಯಾಣ, ದೇವದುರ್ಗ ಎಲ್ಲಾ ಗುತ್ತಿಗೆದಾರರು ಕರ್ನಾಟಕ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಕೈಜೋಡಿಸಿ ಸ್ಲಂ ಜನರನ್ನು ಗೋಳಾಡಿಸುತ್ತಿದ್ದಾರೆ. ಇಂತಹ ಗುತ್ತಿಗೆದಾರರ ಲೈಸನ್ಸ್ನ್ನು ಕುಲಂಕುಷವಾಗಿ ತನಿಖೆ ಮಾಡಿ ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಲಬುರಗಿಯ ಅಧಿಕಾರಿಗಳಿಗೆ ಸ್ಲಂ ಜನರನ್ನು ಗೋಳಾಡಿಸದೇ ಜನರ ಕೆಲಸ ಮಾಡುವಂತೆ ಎಚ್ಚರ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಉಪಾಧ್ಯಕ್ಷೆ ಗೌರಮ್ಮ ಮಾಕಾ, ಮುಖಂಡ ಭಾಗ್ಯವಂತರಾವ ಸೋನಕಾಂಬಳೆ ಇದ್ದರು.