ಕೇಂದ್ರ ಬಜೆಟ್ ನಲ್ಲಿ ಕಲ್ಯಾಣದ ಅಭಿವೃದ್ಧಿಗೆ ಕೆಕೆಆರಡಿಬಿ ಮತ್ತು ರಾಜ್ಯ ಸರ್ಕಾರದಿಂದ ಅಧಿಕೃತ ಒತ್ತಡಕ್ಕೆ ದುಂಡುಮೇಜಿನ ಸಭೆಯ ಒತ್ತಾಯ.
ಕೇಂದ್ರ ಬಜೆಟ್ ನಲ್ಲಿ ಕಲ್ಯಾಣದ ಅಭಿವೃದ್ಧಿಗೆ ಕೆಕೆಆರಡಿಬಿ ಮತ್ತು ರಾಜ್ಯ ಸರ್ಕಾರದಿಂದ ಅಧಿಕೃತ ಒತ್ತಡಕ್ಕೆ ದುಂಡುಮೇಜಿನ ಸಭೆಯ ಒತ್ತಾಯ.
ಕೇಂದ್ರ ಸರ್ಕಾರ ಬರುವ ಫೆಬ್ರುವರಿಯಲ್ಲಿ ಮಂಡಿಸಲಿರುವ ಬಜೆಟ್ ನಲ್ಲಿ ಕಲ್ಯಾಣದ ಅಭಿವೃದ್ಧಿಗೆ ಕೆಕೆಆರಡಿಬಿ ಮತ್ತು ರಾಜ್ಯ ಸರ್ಕಾರದಿಂದ ಅಧಿಕೃತ ಪ್ರಸ್ತಾವನೆಗಳು ಸಲ್ಲಿಸುವ ಮೂಲಕ ಒತ್ತಡ ತರಬೇಕೆಂದು ಪರಿಣಿತ ತಜ್ಘರ, ಅಭಿವೃದ್ಧಿ ಪರ ಚಿಂತಕರ, ಹೋರಾಟಗಾರರ ದುಂಡು ಮೇಜಿನ ಸಭೆ ಒತ್ತಾಯಿಸಿದೆ.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖರವರ ಅಧ್ಯಕ್ಷತೆಯಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೆಯ ಸಭಾಂಗಣದಲ್ಲಿ ನಿನ್ನೆ ದೀರ್ಘ ಕಾಲದವರೆಗೆ ಜರುಗಿದ ದುಂಡು ಮೇಜಿನ ಸಭೆಯಲ್ಲಿ ಕೇಂದ್ರ ಬಜೆಟ್ ನಲ್ಲಿ ಕಲ್ಯಾಣದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಆಗಬೇಕಾಗಿದ ಅಭಿವೃದ್ಧಿ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಬಗ್ಗೆ ಖಂಡನಾ ನಿರ್ಣಯ ಮಂಡಿಸಿ ಇದೆ ವರ್ತನೆ ಮುಂದುವರಿದರೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಉಗ್ರ ಹೋರಾಟ ನೆಡೆಸಲು ನಿರ್ಣಯಿಸಲಾಯಿತು.
ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷ್ಮಣ ದಸ್ತಿ, ಪ್ರೊ .ಆರ್ ಕೆ ಹುಡುಗಿ, ದೊಡ್ಡಪ್ಪ ನಿಷ್ಟಿ, ಪ್ರೊ.ಬಸವರಾಜ ಕುಮ್ನೂರ,ಡಾ.ಗುರುಬಸಪ್ಪ,ಪ್ರೊ.ಬಸವರಾಜ ಗುಲಶೆಟ್ಟಿ,
ಸಿಮೆಯಾನ ತುಮಕೂರಕರ್, ಡಾ. ಸದಾನಂದ ಪೆರ್ಲ,ಡಾ.ಮಾಜೀದ ದಾಗಿ,ಡಾ.ಸುರೇಶಕುಮಾರನಂದಗಾವ,ಡಾ.ದತ್ತಾತ್ರೆ ಇಕ್ಕಳಕಿ,ರಾಜೇ ಶಿವಶರಣ, ಉದಯಕುಮಾರ್ ಜೇವರ್ಗಿ,ಎಂ ಬಿ.ನಿಂಗಪ್ಪ, ಮುತ್ತಣ್ಣ ನಡಗೇರಿ ಅಬ್ದುಲ್ ರಹೀಂ, ಅಸ್ಲಂ ಚೌಂಗೆ,ದುಂಡು ಮೇಜಿನ ಸಭೆಗೆ ಕೇಂದ್ರ ಸರ್ಕಾರದಿಂದ ಆಗಬೇಕಾಗಿದೆ ಅಭಿವೃದ್ಧಿ ಯೋಜನೆಗಳಾದ ಮೆಗಾ ಟೆಕ್ಸ್ಟೈಲ್ ಪಾರ್ಕ್, ಕಲ್ಯಾಣ ಕರ್ನಾಟಕದಿಂದ ಬೆಂಗಳೂರಿಗೆ ಬೀದರದಿಂದ ಕಲಬುರಗಿ , ಯಾದಗಿರಿ, ರಾಯಚೂರು ಬಳ್ಳಾರಿ ಮೂಲಕ ರಾಜಧಾನಿವರೆಗ ಚತ್ಸುಪತ ರಸ್ತೆ ಕಾಲಮಿತಿಯಲ್ಲಿ ನಿರ್ಮಾಣ ಮಾಡಬೇಕು,ಉಡಾನ ಯೋಜನೆ ಮರು ಜಾರಿಗೆ ತಂದು ಬೆಂಗಳೂರು, ಹೈದ್ರಾಬಾದ, ತಿರುಪತಿ, ದೆಹಲಿ, ಮುಂಬಯಿ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ವಿಮಾನ ಸೇವೆ ನಿರಂತರ ನಡೆಯುವಂತೆ ಕ್ರಮ ಕೈಗೊಳ್ಳಬೇಕು, ಕಲ್ಯಾಣದಲ್ಲಿ ಉದ್ಯೋಗ ಸೃಷ್ಟಿಗೆ ಉದ್ದಿಮೆಗಳ ಸ್ಥಾಪನೆ, ಹೆದ್ದಾರಿಗಳ ನಿರ್ಮಾಣ, ಏಮ್ಸ್ ಸ್ಥಾಪನೆ, ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಬೀದರ ಕಲಬುರಗಿ , ಯಾದಗಿರಿ, ರಾಯಚೂರು, ಬಳ್ಳಾರಿ ಮಾರ್ಗವಾಗಿ ಕಿತ್ತೋರು ಕರ್ನಾಟಕ , ದಕ್ಷಿಣ ಕರ್ನಾಟಕದ ಜಿಲ್ಲೆಗಳ ಮೂಲಕ ರಾಜಧಾನಿ ಬೆಂಗಳೂರಿಗೆ ಕಲ್ಯಾಣ ಎಕ್ಸ್ಪ್ರೆಸ್ ಸೇರಿದಂತೆ ಬೆಂಗಳೂರಿಗೆ ಮೂರು ಹೊಸ ರೈಲುಗಳು ಆರಂಭಿಸಬೇಕು, ಅದರಂತೆ ಕೋರನಾ ಪೂರ್ವದಲ್ಲಿ ಚಾಲ್ತಿಯಲ್ಲಿರುವ ಹೈದ್ರಾಬಾದ, ರಾಯಚೂರು ಸೇರಿದಂತೆ ಐದು ರೈಲುಗಳು ಮತ್ತೆ ಆರಂಭಿಸಿ ಕಲ್ಯಾಣದ ಜನರಿಗೆ ಅನುಕೂಲ ಮಾಡಬೇಕು, ಕಲ್ಯಾಣದ ಜಿಲ್ಲೆಗಳಿಗೆ ಈ ಹಿಂದೆ ಕೇಂದ್ರ ಸರ್ಕಾರ ಘೋಷಿಸಿದೆ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು, ಕಲಬುರಗಿ ವರ್ತುಲ ರಸ್ತೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು, ಭಾರತ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀಡಿದ 371ನೇ ಜೇ ಕಲಂ ವಿಶೇಷ ಸ್ಥಾನಮಾನಕ್ಕೆ ಸ್ಪಂದಿಸಿ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಮತ್ತು ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಹಣ ನೀಡಬೇಕು ಎಂಬ ಹತ್ತಾರು ವಿಷಯಗಳು ಮಂಡಿಸಿದರು.ಸಭೆಯಲ್ಲಿ ಭಾಗವಹಿಸಿದ ಎಲ್ಲರ ಸರ್ವಾನುಮತದ ನಿರ್ಣಯ ದಂತೆ ಹನ್ನೆರಡು ಬೇಡಿಕೆಗಳ ಈಡೇರಿಕೆಗೆ ದುಂಡು ಮೇಜಿನ ಸಭೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಯಿತು ಅದರಂತೆ ಕೆಕೆಆರ್ ಡಿಬಿ, ರಾಜ್ಯ ಸರ್ಕಾರದಿಂದಲು ಅಧಿಕೃತವಾಗಿ ಕೇಂದ್ರದ ಮೇಲೆ ಒತ್ತಡ ತರಲು ದುಂಡು ಮೇಜಿನ ಸಭೆ ಆಗ್ರಹಿಸಿದೆ.ಈ ದುಂಡು ಮೇಜಿನ ಸಭೆಯಲ್ಲಿ ಖಾಜಿ ಹರ್ಷದ ಅಲಿ,ಡಾ.ಮಂಜೂರ್ ಡೆಕ್ಕನಿ,ಡಾ.ವೀರಶೆಟ್ಟಿ ಜಿ, ಬೀಮಶೆಟ್ಟಿ ಮುಕ್ಕಾ, ಮಲ್ಲಿನಾಥ ಎಸ್,ರಾಜು ಜೈನ,
ಶರಣಪ್ಪ. ಕೆ. ಡಾ.ರಾಜಕುಮಾರ್,ಡಾ.ಎಸ್.ಪಿ.ಅಶೋಕುಮಾರ ,ಡಾ.ಶರಣಪ್ಪ ಸಾಲಿ, ಸೋಮಶೇಖರ್ ಚೌವ್ಹಾಣ್, ವಿಷ್ಣು, ಸೇರಿದಂತೆ ನೂರಾರು ಸದಸ್ಯರು ಭಾಗವಹಿಸಿದ್ದರು.
ವರದಿ ,ನಾಗರಾಜ್ ದಂಡಾವತಿ