ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ 2026ರ ಕ್ಯಾಲೆಂಡರ್ ಬಿಡುಗಡೆ
ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ 2026ರ ಕ್ಯಾಲೆಂಡರ್ ಬಿಡುಗಡೆ
ಕಲಬುರಗಿ, ಫೆ.18: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಲಬುರಗಿ ನಗರ ಯುವ ಘಟಕದ ವತಿಯಿಂದ 2026ನೇ ವರ್ಷದ ಕ್ಯಾಲೆಂಡರ್ ಅನ್ನು ಇಂದು ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತಿಪೂರ್ವಕವಾಗಿ ಬಿಡುಗಡೆ ಮಾಡಲಾಯಿತು.
ಕಲಬುರಗಿ ಶ್ರೀ ಶರಣ ಬಸವೇಶ್ವರ ಮಹಾಸಂಸ್ಥಾನದ ಮಹಾಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರು ಮಹಾಸಂಸ್ಥಾನದಲ್ಲಿ ಕ್ಯಾಲೆಂಡರ್ ಅನಾವರಣಗೊಳಿಸಿ, ಸಮಾಜ ಸಂಘಟನೆ ಮತ್ತು ಯುವಕರ ಸಕ್ರಿಯ ಭಾಗವಹಿಸುವಿಕೆಯ ಅಗತ್ಯತೆಯನ್ನು ಒತ್ತಿಹೇಳಿದರು.
ಈ ಸಂದರ್ಭದಲ್ಲಿ ಡಾ.ಅಲ್ಲಮಪ್ರಭು ದೇಶಮುಖ್, ಕಲಬುರಗಿ ನಗರ ಅಧ್ಯಕ್ಷ ಶಾಂತರೆಡ್ಡಿ ಪೇಟಶಿರೂರ್, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಭಾವಿಕಟ್ಟಿ, ಉಪಾಧ್ಯಕ್ಷರಾದ ಮಹಾಂತೇಶ್ ರೋಜೆ, ಮಂಜುನಾಥ ಅಣಕಲ್, ಪ್ರಶಾಂತ ರೆಡ್ಡಿ, ಶಿವಯ್ಯ ಮೂರ್ತಿ, ಸಂಘಟನಾ ಕಾರ್ಯದರ್ಶಿ ಮಹಾದೇವ್ ಶಾಬಾದಿ, ಸಿದ್ದರಾಮ ರೆಡ್ಡಿ, ಅಭಿಜಿತ್ ಪಡಶಟಿ, ದಯಾನಂದ ಮನೋಕರ್ ಸೇರಿದಂತೆ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಧಾರ್ಮಿಕ ಮತ್ತು ಸಾಮಾಜಿಕ ಒಗ್ಗಟ್ಟಿನ ಸಂದೇಶವನ್ನು ಸಾರಿತು.
