ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಿಇಒ ರಿಂದ ಕಾಕೋಳು ಸರ್ಕಾರಿ ಶಾಲೆಯ ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು ನಗರ ಜಿಲ್ಲಾ ಪಂಚಾಯತ್  ಸಿಇಒ ರಿಂದ ಕಾಕೋಳು ಸರ್ಕಾರಿ ಶಾಲೆಯ ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಿಇಒ ರಿಂದ ಕಾಕೋಳು ಸರ್ಕಾರಿ ಶಾಲೆಯ ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸಿಎಸ್ಆರ್ ಅನುದಾನದಡಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಂಬಂಧ ಮಾನ್ಯ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೊನ್ನೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಾಕೋಳು ಗ್ರಾಮದ ಪಿಎಂ ಶ್ರೀ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ದತ್ತು ಪಡೆದುಕೊಂಡಿರುವ ಪಾಂಚಜನ್ಯ ಪ್ರತಿಷ್ಠಾನ ಹೊರ ತಂದಿರುವ 2025 ನೇ ಸಾಲಿನ ಕ್ಯಾಲೆಂಡರ್ ಅನ್ನು ಸಿಇಒ ಕೆ ಎಸ್ ಲತಾ ಕುಮಾರಿ ಐಎಎಸ್ ಬಿಡುಗಡೆಗೊಳಿಸಿದರು.

 ಶಿಕ್ಷಣ ಇಲಾಖೆಯ ಡಿಡಿಪಿಐ ಹನುಮಂತರಾಯಪ್ಪ ಮತ್ತು ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 ಸುಮಾರು 150 ಕಂಪನಿಗಳ/ ಪ್ರತಿಷ್ಠಾನದ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಪಾಂಚಜನ್ಯ ಪ್ರತಿಷ್ಠಾನದ ಸ್ಥಾಪಕ ಟ್ರಸ್ಟ್ ಮುರಳಿ ಕಾಕೋಳು ಭಾಗವಹಿಸಿ ಶಾಲೆಯ ಮಕ್ಕಳ ಮತ್ತು ಪೋಷಕರಿಗೆ ಶಾಲೆಯ ಬಗ್ಗೆ ಗೌರವ ಹಾಗೂ ಹೆಮ್ಮೆ ತರಲು ಈ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದರು.