"ದಿಶಾ ಪಿಯು ವಿಜ್ಞಾನ ಕಾಲೇಜಿನಲ್ಲಿ ಯಶಸ್ವಿಯಾಗಿ ಸಾಗಿದ ಇಂಗ್ಲಿಷ್ ಮೌಲ್ಯಮಾಪನ"

"ದಿಶಾ ಪಿಯು ವಿಜ್ಞಾನ ಕಾಲೇಜಿನಲ್ಲಿ ಯಶಸ್ವಿಯಾಗಿ ಸಾಗಿದ ಇಂಗ್ಲಿಷ್ ಮೌಲ್ಯಮಾಪನ"

"ದಿಶಾ ಪಿಯು ವಿಜ್ಞಾನ ಕಾಲೇಜಿನಲ್ಲಿ ಯಶಸ್ವಿಯಾಗಿ ಸಾಗಿದ ಇಂಗ್ಲಿಷ್ ಮೌಲ್ಯಮಾಪನ"

ಕಲ್ಬುರ್ಗಿ ನಗರದ ದಿಶಾ ಪಿಯು ವಿಜ್ಞಾನ ಕಾಲೇಜಿನಲ್ಲಿ 2025 ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯದ ಮೌಲ್ಯಮಾಪನ ಕೇಂದ್ರದಲ್ಲಿ ವಯೋನಿವೃತ್ತ ಉಪನ್ಯಾಸಕರಿಗೆ ಹಾಗೂ ಪ್ರಾಚಾರ್ಯರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕಲ್ಬುರ್ಗಿಯ ಡಿಡಿಪಿಯು ಅಶೋಕ್ ಶಾಸ್ತ್ರಿ ಅವರು ಉಪನ್ಯಾಸಕ ವೃತ್ತಿಯು ಪವಿತ್ರವಾದದ್ದು. ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಮಾಣ ಮಾಡುವ ಜವಾಬ್ದಾರಿಯು ಉಪನ್ಯಾಸಕರ ಮೇಲಿದೆ. ಪ್ರತಿಯೊಂದು ಮಗುವಿನ ಪ್ರತಿಯೊಂದು ಅಂಕದ ಹಿಂದೆ ಶ್ರಮ ಇರುತ್ತದೆ. ಮೌಲ್ಯಮಾಪನ ಕಾರ್ಯ ಸೂಕ್ಷ್ಮ ಮತ್ತು ಜವಾಬ್ದಾರಿಯುತ ಕಾರ್ಯವಾಗಿದೆ. ಅನ್ನದಾಸೋಹ, ಶಿಕ್ಷಣದ ಕಾಳಜಿ ಮತ್ತು ಸಾಮಾಜಿಕ ಕಳಕಳಿಯಿಂದ ಹಲವರಿಗೆ ಶಿವಾನಂದ್ ಖಜುರ್ಗಿ ಮಾದರಿಯಾಗಿದ್ದಾರೆ ಎಂದು ಹೇಳಿದರು. ಈ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ ದಿಶಾ ಪಿಯು ವಿಜ್ಞಾನ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಶಿವಾನಂದ ಖಜುರ್ಗಿ ಅವರು ಇಂಗ್ಲಿಷ್ ಭಾಷೆ ಇಪ್ಪತ್ತಾರು ಅಕ್ಷರ ಹೊಂದಿದರು ಪ್ರಪಂಚ ಆಳುತ್ತಿದೆ ಇದಕ್ಕೆ ಕಾರಣ ಅದು ಅನ್ನದ ಭಾಷೆಯಾಗಿರುವುದೇ ಆಗಿದೆ. ಯಾವುದೇ ಭಾಷೆ ಉಳಿಯಲು ಮತ್ತು ಬೆಳೆಯಲು ನಾವು ಅದನ್ನು ಅನ್ನದ ಭಾಷೆಯನ್ನಾಗಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು. ಕಲ್ಯಾಣ ಕರ್ನಾಟಕ ಶರಣರ ಸಂತರ ಪವಿತ್ರ ನೆಲವಾಗಿದೆ ಈ ಅನ್ನದಾಸೋಹ ಅವರ ಪಥದಲ್ಲಿ ನಡೆಯುವುದೇ ಆಗಿದೆ. ಉಪನ್ಯಾಸಕರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಷ್ಟಾದರೂ ಪ್ರೀತಿಸಬೇಕು ನಮ್ಮ ಮಕ್ಕಳು ಭವಿಷ್ಯದಲ್ಲಿ ಅನ್ನ ಹಾಕುತ್ತಾರೆ ಎನ್ನುವ ಭರವಸೆ ನಮಗಿಲ್ಲ ಇಂದು ಈ ಮಕ್ಕಳಿಂದ ಅನ್ನವನ್ನು ತಿನ್ನುತ್ತಿರುವುದು ನಾವು ಮರೆಯುವಂತಿಲ್ಲ. ಈ ಆಧುನಿಕತೆಯ ವೇಗದ ಪಯಣದಲ್ಲಿ ಉಪನ್ಯಾಸಕ ಮತ್ತು ವಿದ್ಯಾರ್ಥಿಗಳ ಅಧ್ಯಯನದ ಕೊರತೆ ಕಾಣುತ್ತಿದೆ ಇದನ್ನು ಸುಧಾರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕಲ್ಯಾಣ ಕರ್ನಾಟಕ ಸಾಂಸ್ಕೃತಿಕವಾಗಿ ಶ್ರೀಮಂತವಾದ ನೆಲವಾಗಿದೆ. ನಮ್ಮಲ್ಲಿ ಬೌದ್ಧಿಕತೆಯ ಕೊರತೆ ಇಲ್ಲ ಅದನ್ನು ಸಾಧ್ಯ ಮಾಡಲು ನಾವು ನೀವೆಲ್ಲರೂ ಒಟ್ಟುಗೂಡಿ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಇಂಗ್ಲಿಷ್ ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥರಾದ ಶ್ರೀಶೈಲಪ್ಪ ಬೋನಾಳ ಅವರು ಮೌಲ್ಯಮಾಪನ ಕಾರ್ಯವು ಜವಾಬ್ದಾರಿಯುತ ಕಾರ್ಯವಾಗಿದೆ. ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡುವುದರ ಮೂಲಕ ಮಕ್ಕಳಿಗೆ ನ್ಯಾಯವನ್ನು ಒದಗಿಸಿ ಕೊಡಬೇಕೆಂದು ಹೇಳಿದರು. ದಿಶಾ ಪಿಯು ವಿಜ್ಞಾನ ಕಾಲೇಜು ಕುರಿತು ಮಾತನಾಡಿದ ಅವರು ನಾನು ನನ್ನ ಮೂವತ್ತು ವರ್ಷಗಳ ಕಾಲದ ಮೌಲ್ಯಮಾಪನ ಕಾರ್ಯದ ಅನುಭವದಲ್ಲಿ ವಿಶೇಷವಾಗಿದೆ. ಈ ಸಂಸ್ಥೆಯ ಅಧ್ಯಕ್ಷರಾದ ಶಿವಾನಂದ ಖಜುರ್ಗಿ ಅವರ ಸಹಾಯ ಸಹಕಾರ ಮತ್ತು ಪ್ರೀತಿ ಮೌಲ್ಯಮಾಪಕರನ್ನು ಗೌರವಿಸುವ ಅವರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುವ ಹಾಗೂ ಮೌಲ್ಯಮಾಪನದ ಪ್ರಾರಂಭದಿಂದಲೂ ಊಟವನ್ನು ನೀಡುವುದರ ಮೂಲಕ ವಿಶೇಷ ವ್ಯಕ್ತಿಯಾಗಿ ಕಾಣುತ್ತಾರೆ. ಈ ಎಲ್ಲಾ ಕಾರಣಕ್ಕೆ ಈ ಮೌಲ್ಯಮಾಪನ ಕೇಂದ್ರ ನನ್ನ ನೆನಪಿನ ಭಾಗವಾಗಿರುತ್ತದೆ ಎಂದು ಹೇಳಿದರು. ಮೌಲ್ಯಮಾಪನ ಪರೀಕ್ಷೆ ಪರಿವೀಕ್ಷಕರಾದ ಸುರೇಶ ಅಕ್ಕಣ್ಣನವರು ಮೌಲ್ಯಮಾಪನವು ಪ್ರಾರಂಭದಿಂದಲೂ ಯಾವುದೇ ಅಡೆತಡೆಗಳಿಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ. ಮೌಲ್ಯಮಾಪಕರು ಹಾಗೂ ಸಹಾಯಕ ಮೌಲ್ಯಮಾಪಕರು ಶಿಸ್ತು ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾರಂಭದಿಂದಲೂ ಎಲ್ಲಾ ಮೌಲ್ಯಮಾಪಕರಿಗೆ ಊಟದ ವ್ಯವಸ್ಥೆ. ದಿನವಿಡಿ ಚಹಾ ಹಾಗೂ ತಂಪಾದ ನೀರಿನ ಈ ವ್ಯವಸ್ಥೆವು ಕರ್ನಾಟಕದ ಯಾವುದೇ ಮೌಲ್ಯಮಾಪನ ಕೇಂದ್ರದಲ್ಲಿ ದೊರಕುವುದಿಲ್ಲ ಇದೊಂದು ನಮಗೆ ಹೊಸ ಅನುಭವ ಆಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಿವೃತ್ತಿ ಹೊಂದಲ್ಲಿರುವ ಅಶೋಕ್ ಶಾಸ್ತ್ರಿ ಡಿಡಿಪಿಯು. ಸುರೇಶ ಅಕ್ಕಣ್ಣ ಪ್ರಾಚಾರ್ಯರಾದ ಶ್ರೀಶೈಲಪ್ಪ ಬೋನಾಳ್. ಪಂಡಿತರಾವ್ ಪವರ್. ಇಮ್ಯಾನುವಲ ರಾಜ್. ರಾಜೇಂದ್ರ ರಂಗದಾಳ. ಗಿರಿಧರ ಜೋಶಿ. ಇವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ದಿಶಾ ಕಾಲೇಜಿನ ಪ್ರಾಚಾರ್ಯರಾದ ಸಂತೋಷ ಜಕಾಪೂರೆ.ಪಂಡಿತ್ ಪವಾರ್. ಇಮ್ಯಾನೇವಲ್ ರಾಜ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಂದಿನಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಮಲ್ಲಿಕಾರ್ಜುನ್ ಆನಂದಕ್ಕರ್ ನಿರೂಪಿಸಿದರು. ಸುನಿಲ್ ವಲ್ಲಾಪುರೆ ವಂದಿಸಿದರು.

ವರದಿ ಡಾ. ಅವಿನಾಶ್ s ದೇವನೂರ ಆಳಂದ.