ಗೋಡೆ ಗಡಿಯಾರ ಪುನಃ ಅಳವಡಿಸಲು ಒತ್ತಾಯ.

ಗೋಡೆ ಗಡಿಯಾರ ಪುನಃ ಅಳವಡಿಸಲು ಒತ್ತಾಯ.
ಚಿಟಗುಪ್ಪ: ಇತಿಹಾಸ ಪ್ರಸಿದ್ಧ ಅಗಸಿ ಎಂದೇ ಹೆಸರು ಮಾಡಿದ ಪಟ್ಟಣದ ಗೋಡೆ ಗಡಿಯಾರ ನೋಡುವುದೇ ಅಂದವಾಗಿತ್ತು. ಅನೇಕರಿಗೆ ಸಮಯ ನೋಡಲು ತುಂಬಾ ಅನುಕೂಲ ಮಾಡಿಕೊಟ್ಟ ಕೀರ್ತಿ ಈ ಗೋಡೆ ಗಡಿಯಾರಕ್ಕೆ ಸಲ್ಲುತ್ತದೆ. ಇಂತಹ ಐತಿಹಾಸಿಕ ಗಡಿಯಾರ ಸಧ್ಯ ಇಲ್ಲದಿರುವುದು ನಾಗರಿಕರಿಗೆ ತುಂಬಾ ನೋವಾಗುತ್ತಿದೆ. ಕಾರಣ ಈ ಕೂಡಲೇ
ಪಟ್ಟಣದ ಅಗಸಿಗೆ (ಬೇಸ್) ಗೋಡೆ ಗಡಿಯಾರ ಪುನಃ ಅಳವಡಿಸಲು ಕನ್ನಡ ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ಪರವಾಗಿ ಆಗಮಿಸಿದ ಅಧಿಕಾರಿಗೆ ಒತ್ತಾಯಿಸಿ, ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಪವನ ಪೂಜಾರಿ ಮಾತನಾಡಿ ಅತ್ಯಂತ ಪುರಾತನ ಕಾಲದಿಂದಲೂ ಅಗಸಿಯ ಗೋಡೆ ಗಡಿಯಾರ ಪಟ್ಟಣದ ಪ್ರಮುಖ ಐತಿಹಾಸಿಕ ಸ್ಥಳವಾಗಿದೆ. ನೋಡಲು ಈ ಸ್ಥಳಕ್ಕೆ ದಿನನಿತ್ಯ ನೂರಾರು ಜನರು ಬರುತ್ತಿದ್ದರು. ಇಂಥ ಸ್ಥಳದಲ್ಲಿ ಇದೀಗ ಗೋಡೆ ಗಡಿಯಾರ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಆದಷ್ಟು ಬೇಗನೆ ಗೋಡೆ ಗಡಿಯಾರ ಅಳವಡಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ನಿಗದಿಪಡಿಸಿದ ಸಮಯದೊಳಗೆ ಆಗದೇ ಇದ್ದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ಈ ಸಮಯದಲ್ಲಿ ತಾಲೂಕು ಉಪಾಧ್ಯಕ್ಷರು ನಾಗರಾಜ್ ಹುಡುಗಿ.
ನಗರ ಅಧ್ಯಕ್ಷ ಕಾಶಿನಾಥ್ ರೇಕುಳಗಿ, ಮೊಷಿನ್ ಜಮಾದಾರ್, ಯುನೋಸ್ ಖಾದ್ರಿ, ಕಬೀರ್ ಖಾನ್, ತಿಪ್ಪಣ್ಣ ಇಟಗಾ, ಹುಸೇನಪ್ಪ, ವಿದ್ಯಾರ್ಥಿ ಒಕ್ಕೂಟದ ತಾಲೂಕು ಉಪಾಧ್ಯಕ್ಷ ಸಿದ್ದು ಸೋನಾರ್, ವೇಣು ಕೊಂಡ, ಅಭಿ ಆರ್ಯ, ಲಕ್ಷ್ಮಣ್, ರಾಜು, ರವಿ, ಕೃಷ್ಣ, ಗಣೇಶ್ ಬಾಬು, ಮಕ್ದುಮ್ 96 ಲಾಖ್ . ಶಿವರಾಜ್ ಸ್ವಾಮಿ ,ಗುಂಡು ಪೂಜಾರಿ ಸೇರಿದಂತೆ
ತಾಲೂಕು ಕನ್ನಡ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ - ಸಂಗಮೇಶ ಎನ್ ಜವಾದಿ