ಕುಸನೂರ ಗ್ರಾ.ಪಂ.ಕಟ್ಟಡ ಶಿಥಿಲ ಕಿರಿದಾದ, ಶಿಥಿಲವಾದ ಪಂಚಾಯಿತಿ ಕಟ್ಟಡ ತೆರವಿಸಿ ಹೊಸ ಕಟ್ಟಡ ನಿರ್ಮಿಸಲು ಕರವೇ ಆಗ್ರಹ

ಕುಸನೂರ ಗ್ರಾ.ಪಂ.ಕಟ್ಟಡ ಶಿಥಿಲ ಕಿರಿದಾದ, ಶಿಥಿಲವಾದ ಪಂಚಾಯಿತಿ ಕಟ್ಟಡ ತೆರವಿಸಿ ಹೊಸ ಕಟ್ಟಡ ನಿರ್ಮಿಸಲು ಕರವೇ ಆಗ್ರಹ

ಕುಸನೂರ ಗ್ರಾ.ಪಂ.ಕಟ್ಟಡ ಶಿಥಿಲ ಕಿರಿದಾದ, ಶಿಥಿಲವಾದ ಪಂಚಾಯಿತಿ ಕಟ್ಟಡ ತೆರವಿಸಿ ಹೊಸ ಕಟ್ಟಡ ನಿರ್ಮಿಸಲು ಕರವೇ ಆಗ್ರಹ

ಕಲಬುರಗಿ: ಶಿಥಿಲಾವಸ್ಥೆಯಲ್ಲಿ ಇರುವ ಹಾಗೂ ಸೂಕ್ತ ಕೊಠಡಿ ವ್ಯವಸ್ಥೆಯೂ ಇಲ್ಲದ ಕಿರಿದಾಗಿರುವ ಗ್ರಾಮ ಪಂಚಾ ಯಿತಿ ಕಟ್ಟಡವನ್ನು ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಾಣ ಮಾಡಲು, ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯ ನೆರವು ನೀಡಬೇಕು ಎಂದು ಕರವೇ(ಪ್ರವೀಣ ಶೆಟ್ಟಿ) ಬಣದ ಜಿಲ್ಲಾ ಗೌರವಾಧ್ಯಕ್ಷ ಮಂಜು ಕುಸನೂರ ಒತ್ತಾಯಿಸಿದ್ದಾರೆ.

    1995 ರಲ್ಲಿ ಮಂಡಲ ಪಂಚಾಯಿತಿ ಇದ್ದಾಗ ಪಂಚಾಯಿತಿ ಕಟ್ಟಡ ನಿರ್ಮಾಣ ಗೊಂಡಿತ್ತು.ಅಂದಿನ ಪರಿಸ್ಥಿತಿಗೆ ಅನು ಗುಣವಾಗಿ ರೂಪುಗೊಂಡಿರುವ ಪಂಚಾಯಿತಿ ಕಟ್ಟಡ ಕೇವಲ ಸಭಾಂಗಣ ಮತ್ತು ದಾಸ್ತಾನು ಕೊಠಡಿಯನ್ನು ಹೊಂದಿತ್ತು. ಈಗಲೂ ಇರುವ ಅಷ್ಟೇ ಕಿರಿದಾದ ಸ್ಥಳದಲ್ಲಿ ಸಭಾಂಗಣ ಹಾಗೂ ದಾಖಲೆ ಗಳ ದಾಸ್ತಾನು ಜತೆಗೆ ಕಂಪ್ಯೂಟರ್ ಇರಿಸಲಾಗಿದೆ.ಮಳೆಗಾಲದಲ್ಲಿ ಸೋರುವ, ಸಭೆ-ಸಮಾರಂಭಕ್ಕೆ, ವಿವಿಧ ಕಾರ್ಯಗಳಿಗಾಗಿ ಪಂಚಾಯಿತಿ ಬರುವ ಜನಸಾಮಾನ್ಯರಿಗೆ, ಮಾಹೇವಾರು ಸರ್ವ ಸದಸ್ಯರ ಸಭೆ ನಡೆಸಲೂ ಸ್ಥಳಾವಕಾಶದ ಕೊರತೆ ಎದುರಿಸುತ್ತಿರುವ ಹಾಗೂ ಶಿಥಿಲ ಗೊಂಡಿರುವ ಪಂಚಾಯಿತಿ ಕಟ್ಟಡವನ್ನು ತೆರವುಗೊಳಿಸಬೇಕು ಎಂದರು. ಹಾಗೂ ವಿಶಾಲ ಸಭಾಂಗಣ,ಅಧ್ಯಕ್ಷ, ಪಿಡಿಒ, ಕಾರ್ಯದರ್ಶಿ, ಕಂಪ್ಯೂಟರ್, ದಾಖಲೆ ಇರಿಸಲು ದಾಸ್ತಾನು ಕೊಠಡಿ, ಶೌಚಾಲಯ ಸೇರಿದಂತೆ ಹಲವು ಪ್ರತ್ಯೇಕ ಕೊಠಡಿ ಗಳನ್ನು ಒಳಗೊಂಡ ವ್ಯವಸ್ಥಿತ ಪಂಚಾಯಿತಿ ಕಟ್ಟಡವನ್ನು ನಿರ್ಮಿಸಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಅವರು ಅವರು ಆಗ್ರಹಿಸಿದ್ದಾರೆ.