ಬೀದರ ದಾಡಗಿ ಬಸವೇಶ್ವರರ ಪುತ್ಥಳಿಗೆ ಅವಮಾನಿಸಿರುವುದನ್ನು ಖಂಡಿಸಿ, ಬ.ಸಂಘಟನೆಗಳು ಪ್ರತಿಭಟನೆ
ಬೀದರ ದಾಡಗಿ ಬಸವೇಶ್ವರರ ಪುತ್ಥಳಿಗೆ ಅವಮಾನಿಸಿರುವುದನ್ನು ಖಂಡಿಸಿ, ಬ.ಸಂಘಟನೆಗಳು ಪ್ರತಿಭಟನೆ
ಪುತ್ಥಳಿ ಭಗ್ನಗೊಳಿಸಿದ ಕಿಡಿಗಡೆಗಳನ್ನು ಬಂಧಿಸಿ, ರೌಡಿಶೀರ್ ಪಟ್ಟಿಗೆ ಸೇರಿಸಲು ಆಗ್ರಹ
ಚಿಂಚೋಳಿ : ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ, ದಾಡಗಿ ಗ್ರಾಮದಲ್ಲಿನ ಸಾಂಸ್ಕೃತಿಕ ನಾಯಕ
ವಿಶ್ವಗುರು ಬಸವೇಶ್ವರ ರವರ ಪುತ್ಥಳಿ ಭಗ್ನ ಗೊಳಿಸಿದ್ದನ್ನು ಖಂಡಿಸಿ, ತಾಲೂಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಾಗೂ ಬಸವ ಪರ ಸಂಘಟನೆಗಳ ಒಕ್ಕೂಟ ಚಿಂಚೋಳಿ ಘಟಕವು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಕೈಗೊಂಡು, ಟೈರಿಗೆ ಬೆಂಕಿ ಹಚ್ಚಿ ಘಟನೆಗೆ ಆಕ್ರೋಶ ವ್ಯಕ್ತಪಡಿಸಿತು.
ಚಿಂಚೋಳಿ ತಹಸೀಲ್ದಾರರ ಮುಖಾಂತರ ಸರಕಾರದ ಗೃಹ ಮಂತ್ರಿಗಳಿಗೆ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಅವರು ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಪ್ರತಿಭಟನೆಕಾರರು, ವಿಶ್ವಗುರು ಬಸವೇಶ್ವರರ ಪುತ್ಥಳಿಗೆ ಭಗ್ನ ಗೊಳಿಸುತ್ತಿರುವ ಘಟನೆ ಇದು ಎರಡನೇ ಬಾರಿಯಾಗುತ್ತಿರುವುದಕ್ಕೆ ಸಮುದಾಯದ ಮತ್ತು ಬಸವೇಶ್ವರರ ಅನುಯಾಯಿಗಳ ಆತ್ಮಗಳಿಗೆ ನೋವುಂಟು ಮಾಡಿದೆ., ಅವಮಾನಿಸಿರುವ ಕಿಡಿಗೆಡಿಗಳು ಯಾರೆ ಆಗಿದ್ದರು ಸರಿ ಅವರನ್ನು ಪತ್ತೆ ಹಚ್ಚಿ, ಬಂಧನಗೊಳಿಸಿ, ರೌಡಿಶಿಟರ್ ಪಟ್ಟಿಗೆ ಸೇರಿಸುವ ಮೂಲಕ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಸಿದರು. ಈ ತರಹದ ಘಟನೆಗಳು ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಪದೇ ಪದೇ ಮರು ಕಳುಹಿಸದಂತೆ ಎಲ್ಲಾ ಮಹಾಪುರುಷರ ಪುತ್ಥಳಿ ಬಳಿ, ಸರಕಾರ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಿ, ನಿಗಾವಹಿಸಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿತು.
ಅ.ಭಾ.ವೀ.ಮ.ಸ. ಚಿಂಚೋಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ, ವಿಶ್ವನಾಥ ಪಾಟೀಲ ಪೋಲಕಪಳ್ಳಿ, ಬಸವಣ್ಣಪ್ಪ ಪಾಟೀಲ್ ಹುಡದಳ್ಳಿ, ಸುಭಾಶ ಸೀಳಿನ್, ಸೂರ್ಯಕಾಂತ ಹುಲಿ, ಗೌತಮ್ ಪಾಟೀಲ, ಚಿತ್ರಶೇಖರ ಪಾಟೀಲ, ಸಂತೋಷ ಪಾಟೀಲ್, ಜಗನ್ನಾಥ ಇದ್ಲಾಯಿ, ವಿರೇಶ ಯಂಪಳ್ಳಿ, ಶಿವಕುಮಾರ ಜಾಬಶೆಟ್ಟಿ, ನಾಗೇಶ ಗುಣಾಜಿ, ಕಾಶಿನಾಥ ಹುಣಜೆ, ಸುರೇಶ ಸುಂಕದ, ಮಲ್ಲಿಕಾರ್ಜುನ ಭೂಶೆಟ್ಟಿ ಅಣವಾರ, ಮಲ್ಲಿಕಾರ್ಜುನ ಉಡುಪಿ, ಅನೀಲ ಜಮದಾರ ಹುಡದಳ್ಳಿ, ಸೋಮಶೇಖರ ಕರಕಟ್ಟಿ, ಲೋಕೆಶ ಶೇಳಗಿ, ಸಂಜು ಪಾಟೀಲ ಯಂಪಳ್ಳಿ, ಶಾಂತವೀರ ಯಂಪಳ್ಳಿ, ಗಣೇಶ ಹೂಗಾರ, ಸಂತೋಷ ಕಶೆಟ್ಟಿ, ವಿಜಯಕುಮಾರ, ಹಣಮಂತ ಪೂಜಾರಿ, ಲಕ್ಷ್ಮಣ ಆವಂಟಿ, ಹಣಮಂತ ಭೋವಿ, ರಾಜು ನವಲೆ, ಜಗನ್ನಾಥ ಗುತ್ತೇದಾರ, ರಾಮರೆಡ್ಡಿ ಪಾಟೀಲ, ಅಮರ ಲೋಡನೂರ್, ಅಮೃತ ಕೊಡ್ಲಿ, ಕಾಶಿನ್ನಾಥ ನಾಟಿಕಾರ, ಜಗನ್ನಾಥ ಭೀರನಲ್ಲಿ, ರವಿ ಹೊಸಬಾವಿ, ವಿಠಲ್ ಕುಸಾಳೆ, ಬಸಯ್ಯಸ್ವಾಮಿ ಸೇರಿ ಅನೇಕ ಅನುಯಾಯಿಗಳು ಇದ್ದರು.