ಶಾಸಕ ಡಾ. ಅವಿನಾಶ ಜಾಧವರಿಂದ ಹೊಲಿಗೆ ಯಂತ್ರ ವಿತರಣೆ ಯಂತ್ರ ಪಡೆದು ಮಹಿಳೆಯರು ಸ್ವಾಲಂಬಿಗಳಾಗಿ ಬದುಕು ಸಾಗಿಸಬೇಕು
ಶಾಸಕ ಡಾ. ಅವಿನಾಶ ಜಾಧವರಿಂದ ಹೊಲಿಗೆ ಯಂತ್ರ ವಿತರಣೆ
ಯಂತ್ರ ಪಡೆದು ಮಹಿಳೆಯರು ಸ್ವಾಲಂಬಿಗಳಾಗಿ ಬದುಕು ಸಾಗಿಸಬೇಕು
ಚಿಂಚೋಳಿ : ಮಹಿಳೆಯರು ಅಭಿವೃದ್ಧಿಗೊಂಡರೆ ದೇಶ ಅಭಿವೃದ್ಧಿಯಾಗುತ್ತದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋಧಿಯವರು ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಜಾರಿಗೆ ತಂದಿದ್ದಾರೆ ಎಂದು ಶಾಸಕ ಡಾ. ಅವಿನಾಶ ಜಾಧವ ಹೇಳಿದರು.
ಪಟ್ಟಣದ ಚಂದಾಪೂರದ ಶಾಸಕ ಕಾರ್ಯಾಲಯದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಆಯ್ಕೆಗೊಂಡ 20 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರರೋಪಕರಣಗಳನ್ನು ವಿತರಿಸಿ ಮಾತನಾಡಿದರು.
ಮಹಿಳೆಯರು ಸ್ವಾಲಂಭಿಗಳಾಗಿ ಅಭಿವೃದ್ಧಿಗೊಂಡರೆ ದೇಶಕ್ಕೆ ಒಳೆದಾಗುತ್ತದೆ ಎಂಬುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ. ಆ ಹಿನ್ನಲೆಯಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮುನ್ನುಗಲು ಶೇ. 33 ಮೀಸಲಾತಿಯನ್ನು ಕಲ್ಪಿಸಿದ್ದಾರೆ. ಅದರಂತೆ ಮಹಿಳೆಯರು ಹೊಲಿಗೆಯಂತ್ರಗಳನ್ನು ಪಡೆದು ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಂಡು ಸ್ವಾಲಂಬಿಗಳಾಗಿ ನಿಲ್ಲಬೇಕೆಂಬ ಸದುದ್ದೇಶದಿಂದ ಸರಕಾರ ಯೋಜನೆಗಳು ಜಾರಿಗೆ ತಂದಿದೆ. ಪ್ರತಿಯೊಬ್ಬ ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ನಾವು ಯಾರಿಗಿಂತಲೂ ಕಡಿಮೆ ಇಲ್ಲ. ಎಂದು ಸಾಬೀತು ಪಡಿಸಬೇಕೆಂದರು.
ಡಿ. ದೇವರಾಜ ಅರಸು ನಿಗಮದ ಅಧಿಕಾರಿ ಹಣಮಂತ ಅವರು ಮಾತನಾಡಿ, 2022-2023 ನೇ ಸಾಲಿನಲ್ಲಿ ಹೊಲಿಗೆ ಯಂತ್ರಗಳಿಗೆ 37 ಫಲಾನುಭವಿಗಳು ಆಯ್ಕೆಗೊಂಡಿದ್ದಾರೆ. ಎಲ್ಲವೂ ಶಾಸಕರ ಅಧ್ಯಕ್ಷತೆಯಲ್ಲಿಯೇ ಆಯ್ಕೆ ಪ್ರಕ್ರಿಯೆ ನಡೆದಿವೆ. ಆಯ್ಕೆಗೊಂಡ 37 ಫಲಾನುಭವಿಗಳಲ್ಲಿ 20 ಜನರಿಗೆ ಮಾತ್ರ ಯಂತ್ರಗಳು ವಿತರಿಸಲಾಗಿದೆ. ಇನ್ನೂ ಉಳಿದ 17 ಫಲಾನುಭವಿಗಳಿಗೆ ಯಂತ್ರಗಳು ಕಲಬುರಗಿಯಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಂಖಡ ಗೋಪಾಲರಾವ ಕಟ್ಟಿಮನಿ, ಕೆ. ಎಂ. ಬಾರಿ, ಭೀಮಶೆಟ್ಟಿ ಮುರುಡ, ವಿಜಯಕುಮಾರ, ಅಶೋಕ ಚವ್ಹಾಣ, ಸತೀಶರೆಡ್ಡಿ, ಆಕಾಶ ಕೊಳ್ಳೂರ, ಗುಂಡಪ್ಪ ಅವರಾದಿ, ಹಣಮಂತ ಭೋವಿ ಸೇರಿ ಅನೇಕರು ಉಪಸ್ಥಿತರಿದ್ದರು.