ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಹಾಗೂ ಸಂಕ್ರಾಂತಿ ಹಬ್ಬ ಆಚರಣೆ ದಂಪತಿಗಳಿಗೆ ಸನ್ಮಾನ.

ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಹಾಗೂ ಸಂಕ್ರಾಂತಿ ಹಬ್ಬ ಆಚರಣೆ ದಂಪತಿಗಳಿಗೆ ಸನ್ಮಾನ.

ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಹಾಗೂ ಸಂಕ್ರಾಂತಿ ಹಬ್ಬ ಆಚರಣೆ ದಂಪತಿಗಳಿಗೆ ಸನ್ಮಾನ.

ಕಮಲನಗರ :ತಾಲೂಕಿನ ಡಾ|| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ ಹಾಗೂ ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿ ಹಬ್ಬ ಹಾಗೂ ಸ್ವಾಮಿ ವಿವೆಕಾನಂದರ ಜಯಂತಿ ಆಚರಣೆ ಹಮ್ಮಿಕೊಳಲಾಯಿತು.

 ಕ್ರಾಯಕ್ರಮದಲ್ಲಿ ಐದು ಶರಣ ದಂಪತಿಗಳಿಗೆ ವಿಶೇಷ ಆಹ್ವಾನಿಸಲಾಗಿತ್ತು ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು.

 ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಚನ್ನಬಸವ ಘಾಳೆಯವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಕ್ಕಳನ್ನು ಉದ್ದೇಶಿಸಿ ಮನುಷ್ಯನಿಗೆ ಶಾಂತಿ ,ನೆಮ್ಮದಿಯನ್ನು ತರುವುದೇ ಧರ್ಮದ ಉದ್ದೇಶ ಎಂದಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಅವರು ಅಮೇರಿಕಾದ ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಅಂದು ಮಾಡಿದ ಐತಿಹಾಸಿಕ ಭಾಷಣಕ್ಕೆ 125 ವರ್ಷ ತುಂಬುತ್ತಿದೆ ಹತ್ತೊಂಭತ್ತನೆ ಶತಮಾನದಲ್ಲಿ ಜಗತ್ತಿನ ಸನಾತನ ಧರ್ಮವನ್ನು ಎತ್ತಿಹಿಡಿಯಲು ಭಾರತದಲ್ಲಿ ಅವತರಿಸಿದ ಮಹಾ ಪುರುಷ ಸ್ವಾಮಿ ವಿವೇಕಾನಂದರು ಎಂದು ಹೇಳಿದರು. ಎಂದು ಮಾತನಾಡುತ್ತಾ ಸಂಕ್ರಾಂತಿ ಹಬ್ಬವನ್ನು ನಮ್ಮ ಶಾಲೆಯಲ್ಲಿ ಆಚರಿಸುವ ಮುಖಾಂತರ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಹೇಳಿದರು.

 ನಿತೀನ ಪಾಂಡ್ರೆ ಉದ್ಯಮೀಗಳಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಯೋಗೇಶ್ವರಿ ಮಳ್ಳಾ ಹಾಗೂ ಶ್ರೀ ಗಜಾನಂದ ಮಳ್ಳಾ ಬಸವ ಪೂಜೆಯನ್ನು ಮಾಡಿದರು. ಅದೇ ರೀತಿ ಬೋಗಿ ಪ್ರಜ್ವಲಿಸುವುದನ್ನು ಶ್ರೀಮತಿ ಸವಿತಾ ಸೋಲಾಪೂರೆ ಹಾಗೂ ಶ್ರೀ ಸೂರ್ಯಕಾಂತ ಸೋಲಾಪೂರೆ ನೆರವೆರಿಸಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುವರ್ಣಾ ಮಡಿವಾಳ ಹಾಗೂ ಶ್ರೀ ಮಹಾದೇವ ಮಡಿವಾಳ, ಶ್ರೀಮತಿ ಸುನಿತಾ ನಿಟ್ಟೂರೆ ಮತ್ತು ಶ್ರೀ ವಿಜಯಕುಮಾರ ನಿಟ್ಟೂರೆರವರು ಉಪಸ್ಥಿತಿಯಲ್ಲಿದ್ದರು.

 ಶಾಲೆಯ ವಿದ್ಯಾರ್ಥಿಗಳಾದ ಸಮೀಕ್ಷಾ ಸಂತೋಷ , ಲಕ್ಷ್ಮೀ, ಸ್ವಾಗತ ಗೀತೆ ಹಾಡಿದರು. 

 ಶಾಲೆಯ ವಿದ್ಯಾರ್ಥಿಗಳಾದ ವೈಷ್ಣವಿ ಶಿವಕುಮಾರ, ಸೋನಿ ಮಲ್ಲಿಕಾರ್ಜುನ ಹಾಗೂ ಶಿಕ್ಷಕರಾದ ಹಾವಗಿರಾವ ಮಠಪತಿ ನಿರೂಪಣೆ ಮಾಡಿದರು. 

ಪಲ್ಲವಿ ನಾಯ್ಕ, ರಾಜೇಶ್ವರಿ ಬಿರಾದರ, ಪೂಜಾ ಬಿರಾದರ, ದಿವ್ಯಾ ನಾಯ್ಕ, ವಿಜಯಲಕ್ಷ್ಮೀ ಎಕಲಾರೆ, ರಾಗಿಣಿ ದೇಶಮುಖ, ಕಪಿಲ ಹೂಗಾರ, ಸುಭಾಷ ಧರಣೆ, ನಿಜಲಿಂಗಯ್ಯಾ ಸ್ವಾಮಿ , ವಿಶಾಲ ಸೋಲಾಪುರೆ, ಶಿವಕುಮಾರ ಎಕಲಾರೆ, ಸಿಬ್ಬಂದಿ ವರ್ಗದವರು ಉಪಸ್ಥಿತರಿದರು.

ಕೊನೆದಾಗಿ ಸೃಷ್ಟಿ ಅನೂಪ ವಂದನಾರ್ಪಣೆ ಮಾಡಿದರು.