ತ್ರಿವಿಧ ದಾಸೋಹಿಯ ಪುಣ್ಯ ಸ್ಮರಣೋತ್ಸವ
ತ್ರಿವಿಧ ದಾಸೋಹಿಯ ಪುಣ್ಯ ಸ್ಮರಣೋತ್ಸವ
ಬೆಂಗಳೂರಿನ ಡಾ. ಶ್ರೀಶ್ರೀ ಶಿವಕುಮಾರಸ್ವಾಮಿ ಚಾರಿ ಟೇಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ,ಶಿವಯೋಗಿ, ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಕಂಚಿನ ಪ್ರತ್ಥಳಿಗೆ ಮಾಲಾರ್ಪಣೆ 6ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು
ದಿನಾಂಕ 21/01/ 2025ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ , ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಪ್ರತಿಮೆ ರಾಜಾಜಿ ನಗರ ಎಂಟ್ರನ್ಸ್ ಡಾ. ರಾಜಕುಮಾರ ರಸ್ತೆ ರಾಜಾಜಿನಗರ ಬೆಂಗಳೂರುನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಾಲನೇತ್ರ ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪೂಜ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು ಶ್ರೀ ಮೋಟಗಿ ಮಠ, ಅಥಣಿ ವಹಿಸಲಿದ್ದಾರೆ ,ಪೂಜ್ಯರ ಪ್ರತಿಮೆಗೆ ಮಾಲಾರ್ಪಣೆಯನ್ನು ಡಾ. ಶಂಕರ ಬಿದರಿ ಐ.ಪಿ.ಎಸ್ (ನಿ) ಅಧ್ಯಕ್ಷರು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ, ಕರ್ನಾಟಕ ರಾಜ್ಯ ಘಟಕ ಮಾಡಲಿದ್ದಾರೆ.
ಶ್ರೀ ಛಲವಾದಿ ನಾರಾಯಣಸ್ವಾಮಿ ವಿರೋಧ ಪಕ್ಷದ ನಾಯಕರು, ಕರ್ನಾಟಕ ವಿಧಾನ ಪರಿಷತ್ತು, ಶ್ರೀ ಎಸ್ .ಸುರೇಶಕುಮಾರ್ ಶಾಸಕರು, ಮಾಜಿ ಸಚಿವರು,ಶ್ರೀ ಬಿ.ಆರ.ನವೀನಕುಮಾರ್ ಅಧ್ಯಕ್ಷರು ವೀರಶೈವ- ಲಿಂಗಾಯತ ಮಹಾಸಭಾ ಬೆಂಗಳೂರು ಮಹಾನಗರ ಘಟಕ ಭಾಗವಹಿಸಲಿದ್ದಾರೆ.
ಪಾಲನೇತ್ರೆ ಸಲಹೆಗಾರರು, ಕ್ರಾಂತಿರಾಜು ಉಪಾಧ್ಯಕ್ಷರು ಬಿ ದೇವರಾಜು ಸಂಚಾಲಕರು ಟಿ ವೆಂಕಟೇಶ್ವರ ಗೌಡ ಅಧ್ಯಕ್ಷರು ಸುಸ್ವಾಗತ ಕೋರುವರು ಎಂದು ಹೇಳಿದರು.