ಸಿದ್ದರಾಮನಂದಪುರಿ ಸ್ವಾಮೀಜಿ ನಿಧನ : ಕುರುಬ ಸಮಾಜದಿಂದ ಶ್ರದ್ದಾಂಜಲಿ
ಸಿದ್ದರಾಮನಂದಪುರಿ ಸ್ವಾಮೀಜಿ ನಿಧನ : ಕುರುಬ ಸಮಾಜದಿಂದ ಶ್ರದ್ದಾಂಜಲಿ
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಕಲಬುರಗಿ ವಿಭಾಗದ ತಿಂಥಿನಿ ಬ್ರಿಜ್ ಕಾಗಿನೇಲೆ ಕನಕ ಗುರುಪೀಠದ
ಪೀಠಾಧಿಪತಿ ಪೂಜ್ಯರಾದ ಸಿದ್ದರಾಮನಂದಪುರಿ ಸ್ವಾಮೀಜಿ (55) ಅವರು ಗುರುವಾರ ಬೆಳಗಿನ ಜಾವ ನಿಧನರಾದ ಹಿನ್ನಲೆಯಲ್ಲಿ ಕುರುಬ ಸಮಾಜದ ವತಿಯಿಂದ ಬೀರಪ್ಪನ ಬೆಟ್ಟದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕುರುಬ ಸಮಾಜದ ಅಧ್ಯಕ್ಷ ನಿಂಗಣ್ಣ ಪೂಜಾರಿ ಮಾತನಾಡಿ, ಶ್ರೀಗಳು ಕಾಗಿನೆಲೆ ಕನಕ ಗುರುಪೀಠ ತಿಂತಿಣಿ ಬ್ರಿಡ್ಜ್ ನಲ್ಲಿ ಮೂರು ದೀನಗಳ ಕಾಲ ಹಾಲುಮತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮೇಳನವನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿ ಹಾಲುಮತ ಕಲೆ ಸಾಹಿತ್ಯ ಸಂಸ್ಕೃತಿ ಪರಂಪರೆ ಇತಿಹಾಸವನ್ನು ಹಾಲುಮತದ ಧರ್ಮಕ್ಕೆ ಪರಿಚಯಸಿ ಅಂತ್ಯತ ಪಾದರಸದಂತೆ ಒಡಾಡಿದ್ದರು ಎಂದರು.
ಆದರೆ ಜ.15 ರಂದು ಬೆಳಗ್ಗೆ 3.45ಕ್ಕೆ ನಮನ್ನು ಆಗಲಿದ್ದರಿಂದ ನಮಗೆ ಅತೀವ ದುಃಖ ಆಗಿದೆ ಕರ್ನಾಟಕ ಹಾಲುಮತ ಧರ್ಮಕ್ಕೆ ತುಂಬಲಾರದಂತ ನಷ್ಟವಾಗಿದೆ, ಪೂಜ್ಯರ ಆತ್ಮಕ್ಕೆ ಗೌರವ ನಮನಗಳು ಸಲಿಸುತ್ತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಜಗದ್ಗುರು ರೇವಣಸಿದ್ದೇಶ್ವರ ಬೀರಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿ, ಶೋಕ ವ್ಯಕ್ತಪಡಿಸಿದರು.
ಶಹಾಬಾದ್ ಕರ್ನಾಟಕ ಪ್ರದೇಶ ಕುರುಬರ ಸಂಘ ಅಧ್ಯಕ್ಷ ನಿಂಗಣ್ಣ ಪೂಜಾರಿ, ಸಾಬಣ್ಣ ಕೊಲ್ಲೂರ, ಅಶೋಕ ದೇವರಮನಿ, ಸುರೇಶ ಗಿರಿಣಿ, ವಿಜಯಕುಮಾರ ಕಂಠೀಕರ, ಕಲ್ಯಾಣಿ ಪೂಜಾರಿ, ರಮೇಶ ಪೂಜಾರಿ, ಪ್ರಜ್ವಲ್ ಬೆಳಗುಂಪಿ, ಯಲ್ಲಾಲಿಂಗ ಪೂಜಾರಿ, ಬಸವರಾಜ ಪೂಜಾರಿ, ರಾಜಶೇಖರ ದೇವರಮನಿ ಇದ್ದರು
