ಬ್ರಷ್ಟಾಚಾರ ಖಂಡಿಸಿ ದೇಶ ಉಳಿಸಿ, ಕೆ.ಆರ್.ಎಸ್ ಪಕ್ಷದ ಜಾತಾ
ಬ್ರಷ್ಟಾಚಾರ ಖಂಡಿಸಿ ದೇಶ ಉಳಿಸಿ, ಕೆ.ಆರ್.ಎಸ್ ಪಕ್ಷದ ಜಾತಾ
ಯಡ್ರಾಮಿ ತಾಲೂಕಿನಲ್ಲಿ ಪಾರದರ್ಶಕ ಆಡಳಿತಕ್ಕಾಗಿ ಭ್ರಷ್ಟಾಚಾರವನ್ನು ಖಂಡಿಸೋಣ ದೇಶವನ್ನು ಉಳಿಸೋಣ ಕೆ ಆರ ಎಸ್ ಪಕ್ಷದಿಂದ ಜನ ಜಾಗೃತಿ ಜಾಥಾ ಅಭಿಯಾನ ಕಾರ್ಯಕ್ರಮ ಅತಿ ಶೀಘ್ರದಲ್ಲಿ. ರಿಯಾಜ್ ಕೇ ಬಿಳವಾರ ......
ಯಡ್ರಾಮಿ ತಾಲೂಕಿನಲ್ಲಿ ಕೆ ಆರ್ ಎಸ್ ಪಕ್ಷದ ವತಿಯಿಂದ ಭ್ರಷ್ಟಾಚಾರವನ್ನು ಖಂಡಿಸೋಣ ದೇಶವನ್ನು ಉಳಿಸೋಣ ಎಂಬ ಜನಜಾಗೃತಿ ಜಾಥಾ ಅಭಿಯಾನ ಕಾರ್ಯಕ್ರಮವನ್ನು ಅತಿ ಶೀಘ್ರದಲ್ಲಿ ಯಡ್ರಾಮಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಿದ್ದೇವೆ ಎಂದು ಯಡ್ರಾಮಿ ತಾಲೂಕ ಕೆ ಆರ್ ಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ರಿಯಾಜ್ ಕೇ ಬಿಳವಾರ ಅವರು ಈ ಸಂದರ್ಭದಲ್ಲಿ ಹೇಳಿದರು.
ರಾಜಕೀಯ ರಂಗದಿಂದ ಹಿಡಿದು ಪ್ರತಿಯೊಂದು ಸರ್ಕಾರಿ ಇಲಾಖೆಗಳಲ್ಲಿ ಕಾನೂನು ಬಾಹಿರ ಬ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದ್ದು ಈ ಅವ್ಯವಸ್ಥೆಯ ವಿರುದ್ಧ ಯಡ್ರಾಮಿ ಪಟ್ಟಣದಲ್ಲಿ ಭ್ರಷ್ಟಾಚಾರ ಕಂಡಿಸೋಣ ದೇಶವನ್ನು ಉಳಿಸೋಣ ಎಂಬ ಶೀರ್ಷಿಕೆಯೊಂದಿಗೆ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಅಲ್ಲದೇ ಅತಿ ಶೀಘ್ರದಲ್ಲಿ ಪ್ರತಿಯೊಂದು ಇಲಾಖೆಯ ಅವ್ಯವಸ್ಥೆಯ ಕರ್ಮಕಾಂಡವನ್ನು ಪತ್ರಿಕಾಗೋಷ್ಠಿಯ ಮುಖಾಂತರ ಎಳೆ ಎಳೆಯಾಗಿ ವಿವರಿಸಲಾಗುವುದು ಎಂದು ಕೆ ಆರ್ ಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ರಿಯಾಜ್ ಕೇ ಬಿಳವಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ