ಬಸ್ ಟಿಕೆಟ್ ದರ ಏರಿಕೆ ಎಸ್ ಯುಸಿಐ ಖಂಡನೆ
ಬಸ್ ಟಿಕೆಟ್ ದರ ಏರಿಕೆ ಎಸ್ ಯುಸಿಐ ಖಂಡನೆ
ಶಹಾಬಾದ್: ಬಸ್‌ಗಳ ಟಿಕೆಟ್ ದರವನ್ನು ಶೇ 15ರಷ್ಟು ಏರಿಕೆ ಮಾಡಿದ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯಾಗಿದೆ ಎಂದು ಎಸ್ ಯು ಸಿ ಐ (ಸಿ) ಕಾರ್ಯದರ್ಶಿ ಗಣಪತರಾವ ಕೆ ಮಾನೆ ಆರೋಪಿಸಿದ್ದಾರೆ.
ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಜನರು ಇಗಾಗಲೆ ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಚಾರ ಇನ್ನೂ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ರಾಜ್ಯ ಸರಕಾರವು ಏಕಾಏಕಿ ರಾಜ್ಯ ಬಸ್ ದರವನ್ನು ಶೇಕಡ 15ರಷ್ಟು ಹೆಚ್ಚಳ ಮಾಡಿರುವುದನ್ನು ನಮ್ಮ ಪಕ್ಷ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್) ಎಸ್.ಯು.ಸಿ.ಐ (ಸಿ) ಉಗ್ರವಾಗಿ ಖಂಡಿಸುತ್ತದೆ.
ಪಕ್ಷದ ಸದಸ್ಯರಾದ ರಾಘವೇಂದ್ರ ಎಂಜಿ ಮಾತನಾಡಿ ಶಕ್ತಿ ಯೋಜನೆಯ ನಂತರ ಬಸ್ಸಿನಲ್ಲಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆಯು ಹೆಚ್ಚಾದಾಗ ಅಗತ್ಯಕ್ಕೆ ತಕ್ಕಂತೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಿ, ಚಾಲಕ-ನಿರ್ವಾಹಕರನ್ನು ನೇಮಕಾತಿ ಮಾಡಿಕೊಂಡು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಬದಲಾಗಿ ಏಕಾಏಕಿ ಬಸ್ಸಿನ ಪ್ರಯಾಣದರವನ್ನು ಹೆಚ್ಚಳ ಮಾಡಿರುವುದು ಅತ್ಯಂತ ಜನವಿರೋಧಿ ನೀತಿಯಾಗಿದೆ. ಒಂದು ಕಡೆ ಕೊಟ್ಟಂತೆ ಮಾಡಿ, ಮತ್ತೊಂದೆಡೆ ಕಸಿದುಕೊಳ್ಳುವ ಸರ್ಕಾರದ ಈ ನಡೆಯು ಜನಾಕ್ರೋಶಕ್ಕೆ ಕಾರಣವಾಗಿದ್ದು, ಜನರ ಜೇಬಿಗೆ ಕತ್ತರಿ ಹಾಕುವ ಈ ನಿರ್ಧಾರದಿಂದ ಸರ್ಕಾರವು ಈ ಕೂಡಲೇ ಹಿಂದೆ ಸರಿಯಬೇಕು. ಹಾಗೂ ಜನಸಾಮಾನ್ಯರ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿಯಾಗಿ ಬಸ್ಸುಗಳನ್ನು ಓಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಜನರ ಈ ಬೇಡಿಕೆಯನ್ನು ಈಡೇರಿಸದಿದ್ದರೆ ಅನಿವಾರವಾಗಿ ಜನರನ್ನು ಸಂಘಟಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗುಂಡಮ್ಮ ಮಡಿವಾಳ ರಾಜೇಂದ್ರ ಅತನೂರ, ರಮೇಶ್ ದೇವಕರ, ರಘು ಪವಾರ, ಸಿದ್ದು ಚೌದ್ರಿ ಮಹಾದೇವಿ ಮಾನೆ, ಮಹಾದೇವಿ ಅತನೂರ, ರಾಧಿಕಾ ಚೌದ್ರಿ, ಸೇರಿದಂತೆ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ