ಬಸವಣ್ಣನವರ ಕ್ರಾಂತಿ, ಇಂದಿನ ಡಿಜಿಟಲ್ ಕ್ರಾಂತಿಕ್ಕಿಂತ ದೊಡ್ಡದು : ಬಸವಣ್ಣನ ಕ್ರಾಂತಿ ಮನಸ್ಸುಗಳು ಜೋಡಣೆ ಮಾಡಿದರೆ, ಇಂದಿನ ಡಿಜಿಟಲ್ ಕ್ರಾಂತಿಗಳು ಮನಸ್ಸುಗಳು ಕೆಡುಸುವ ಕ್ರಾಂತಿಗಳಾಗಿವೆ ಡಾ. ಪಂಡಿತ್

ಬಸವಣ್ಣನವರ ಕ್ರಾಂತಿ, ಇಂದಿನ ಡಿಜಿಟಲ್ ಕ್ರಾಂತಿಕ್ಕಿಂತ ದೊಡ್ಡದು :
ಬಸವಣ್ಣನ ಕ್ರಾಂತಿ ಮನಸ್ಸುಗಳು ಜೋಡಣೆ ಮಾಡಿದರೆ, ಇಂದಿನ ಡಿಜಿಟಲ್ ಕ್ರಾಂತಿಗಳು ಮನಸ್ಸುಗಳು ಕೆಡುಸುವ ಕ್ರಾಂತಿಗಳಾಗಿವೆ ಡಾ. ಪಂಡಿತ್
ಚಿಂಚೋಳಿ : ಬಸವಣ್ಣನವರ ಕ್ರಾಂತಿ, ಇಂದಿನ ಡಿಜಿಟಲ್ ಕ್ರಾಂತಿಕ್ಕಿಂತ ದೊಡ್ಡದು. ಇವತ್ತಿನ ಡಿಜಿಟಲ್ ಕ್ರಾಂತಿಗಳು ಮನಸ್ಸುಗಳು ಕೆಡುಸುತ್ತಿವೆ. ಆದರೆ ಬಸವಣ್ಣನ ಕ್ರಾಂತಿಗಳು ಮನಸ್ಸು ಜೋಡಿಸುತ್ತಿದವು ಬಸವಣ್ಣನವರ ವಚನಗಳಲಿ ಬಹು ದೊಡ್ಡ ಶಕ್ತಿ ಅಡಗಿವೆ ಎಂದು ಸೇಡಂನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಪಂಡಿತ್ ಜಿ.ಕೆ ಅವರು ಹೇಳಿದರು.
ತಾಲೂಕ ಆಡಳಿತ ಬಸವಣ್ಣನ 892ನೇ ಜಯಂತಿ ಪ್ರಯುಕ್ತ ಹಮಿಕೊಂಡಿದ್ದ ಕಾರ್ಯಕ್ರಮ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು. ಎಲ್ಲರನ್ನು ಅಪ್ಪಿಕೊಳ್ಳುವ ದೊಡ್ಡ ಗುಣ ಬಸವಣ್ಣನವರದಾಗಿತ್ತು.
ಶರಣರು ಆಡಿದ ಮಾತುಗಳು ಸಾವಿಲ್ಲದ ಮಾತುಗಳಾಗಿವೆ. ಸ್ವಾಮಿಗಳು ಶರಣರು ಅಲ್ಲ. ಶರಣು ಅಂದರೆ ಜಾತಿಯನ್ನು ಬಿಟ್ಟವರು, ಲಿಂಗ ಭೇದ ಮಾಡೆದೆ ಇರುವವರು, ಶಾಂತಿ ನೇಮದಿಗೆ ಪ್ರೇರಣೆ ನೀಡುವವರು. ಬಸವಣ್ಣನವರ ಅಧ್ಯಾಯಾನ ಮಾಡಿದಾಗ ಅಂತರಂಗ ಶುದ್ಧವಾಗಲಿದೆ. .
ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರ ಫೋಟೋ ಗಳು ತಲೆ ಮೇಲೆ ಇಟ್ಟುಕೊಂಡು ಜಯಂತಿ ಮಾಡುವ ಕಾಲ ಹೋಗಿವೆ. ಅವರ ವಿಚಾರಗಳನ್ನು ತಲೆಯಲಿಟ್ಟುಕೊಂಡು ಜಯಂತಿ ಮಾಡುವ ಕಾಲ ಇದು. ಶತಮಾನಗಳಿಂದ ಆರ್ಥಿಕ, ಸಾಮಾಜಿಕವಾಗಿ ಸತ್ತಂತ ಇದ್ದ ಜನತೆಗೆ ಚೈತನ್ಯ ತುಂಬಿ ಮೇಲೆತ್ತಿದವರು ಬಸವಣ್ಣನವರು ಎಂದರು.
ಅಧ್ಯಕ್ಷತೆ ವಹಿಸಿ, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,
ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಇಒ ಶಂಕರ ರಾಠೋಡ, ವೆಂಕಟೇಶ ದುಗ್ಗನ್, ಡಾ. ಗಫಾರ್, ಬಸವರಾಜ ಬೈನೂರ್, ಗಿರಿ ಸಜ್ಜನ, ಚಂದುಲಾಲ್ ರಾಠೋಡ್, ಪ್ರೊ. ಮಲ್ಲಿಕಾರ್ಜುನ ಪಾಲಾಮೂರ, ಸಾಹಿತಿ ಬಸವರಾಜ ಐನೋಳಿ, ಸೂರ್ಯಕಾಂತ ಹುಲಿ, ಚಿತ್ರಶೇಖರ ಪಾಟೀಲ್ ಅವರು ಉಪಸ್ಥಿತರಿದ್ದರು.
ಹಿರಿಯರಿಗೆ ಸನ್ಮಾನದ ಗೌರವ :
ಬಸವಣ್ಣನವರ 892ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನಿಯ ಸಾಧನೆ ಮಾಡಿರುವ ವಿಶ್ವನಾಥ ಪಾಟೀಲ್ ಪೋಲಕಪಳ್ಳಿ, ಬಸವರಾಜ ಮಾಸ್ಟರ್ ಬೆಳಕೇರಿ, ಚಿತ್ರಶೇಖರ ಪಾಟೀಲ್, ಪ್ರೊ. ಮಲ್ಲಿಕಾರ್ಜುನ ಪಾಲಾಮೂರ್ ಸೇರಿದಂತೆ ಸಮಾಜಕ್ಕೆ ಸೇವೆ ಸಲ್ಲಿಸಿ ಕೊಡುಗೆ ನೀಡಿರುವ ಹಿರಿಯ ಮುಖಂಡರನ್ನು ಸನ್ಮಾನಿಸಿ ಗೌರವಿಸಿ, ಪ್ರಮಾಣ ಪತ್ರ ನೀಡಲಾಯಿತು.