ಸಗರದಲ್ಲಿ ಕಾರ್ಗಿಲ್ ವಿಜಯೋತ್ಸವ

ಸಗರದಲ್ಲಿ ಕಾರ್ಗಿಲ್ ವಿಜಯೋತ್ಸವ

ಸಗರದಲ್ಲಿ ಕಾರ್ಗಿಲ್ ವಿಜಯೋತ್ಸವ 

ಶಹಪುರ : ಕಾರ್ಗಿಲ್ ಯುದ್ಧದಲ್ಲಿ ನಮ್ಮ ನೆಚ್ಚಿನ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ನಮ್ಮ ದೇಶದ ಘನತೆ,ಗೌರವ,ಸಾಹಸ ಎತ್ತಿ ಹಿಡಿದಿದ್ದಾರೆ ಅವರ ತ್ಯಾಗ,ಬಲಿದಾನ ನಮ್ಮ ನಿಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಮಾಜಿ ಸಚಿವರಾದ ರಾಜುಗೌಡ ನರಸಿಂಹ ನಾಯಕ ಹೇಳಿದರು.

ತಾಲೂಕಿನ ಸಗರ ಗ್ರಾಮದ ವೀರ ಮರಣ ಹೊಂದಿದ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ವೀರ ಯೋಧರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸಿ ಮಾತನಾಡಿದರು.ತಮ್ಮ ಜೀವನವನ್ನೇ ಬದಿಗೊತ್ತಿ ಹಗಲಿರುಳು ಲೆಕ್ಕಿಸದೆ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರ ಸೇವೆ ಅಮೋಘವಾದದ್ದು ಎಂದು ನುಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ 1999 ರಲ್ಲಿ ಜರುಗಿದ ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರನ್ನು ಸ್ಮರಿಸಿ ಒಂದು ನಿಮಿಷಗಳ ಕಾಲ ಮೌನಚರಣೆ ಸಲ್ಲಿಸಿ ನಂತರ ಸಸಿ ನೆಟ್ಟು ವಿಜಯೋತ್ಸವ ಆಚರಿಸಲಾಯಿತು,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿರುಪತಿ ಹತ್ತಿಕಟಗಿ ಮಾತನಾಡಿ ಅವರ ಶೌರ್ಯ ಸಾಹಸ ಪ್ರತಿಯೊಬ್ಬ ಯುವಕರು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರೀಶ್ ಶಿದ್ರಾ,ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜಪ್ಪ ಗೌಡ ವಿಭೂತಿಹಳ್ಳಿ, ಬಿಜೆಪಿಯ ಹಿರಿಯ ಮುಖಂಡರಾದ ರಾಜಾ ಹನುಮಪ್ಪ ನಾಯಕ, ಯುವ ಮುಖಂಡರಾದ ತಿರುಪತಿ ಸೇರಿ ಗ್ರಾಮ ಪಂಚಾಯತಿ ಸದಸ್ಯರಾದ ಗಣೇಶ್ ಜಾಯಿ,

ವಿ.ಎಸ್.ಎಸ್.ಎನ್ ಅಧ್ಯಕ್ಷ ಮಲ್ಲಿಕಾರ್ಜುನ ವಿರುಪಾಪುರ, ಶಿವಶರಣ ಕೂಡ್ಲೂರು,ಶರಣಪ್ಪ ಟೋಕಾಪುರ,ಸೇರಿದಂತೆ ನೂರಾರು ಹಲವಾರು ಗ್ರಾಮಸ್ಥರು ಹಾಜರಿದ್ದರು.