ಮಂದಕನಳ್ಳಿ ಪಿಕೆಪಿಎಸ್ ನೂತನ ಸದಸ್ಯರಿಗೆ ಅಕ್ಕಮಹಾದೇವಿ ಮಹಿಳಾ ಮಂಡಳ ವತಿಯಿಂದ ಸನ್ಮಾನಿಸಲಾಯಿತು.
ಮಂದಕನಳ್ಳಿ ಪಿಕೆಪಿಎಸ್ ನೂತನ ಸದಸ್ಯರಿಗೆ ಅಕ್ಕಮಹಾದೇವಿ ಮಹಿಳಾ ಮಂಡಳ ವತಿಯಿಂದ ಸನ್ಮಾನಿಸಲಾಯಿತು.
ಬೀದರ್: ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಕಂಗನಕೋಟ್ ಗ್ರಾಮದ ನಯ್ಯೂಮ್ ಪಟೇಲ್ ಹಾಗೂ ಕಂಟೆಪ್ಪಾ ಓತಿ ಅವರಿಗೆ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಅಕ್ಕಮಹಾದೇವಿ ಮಹಿಳಾ ಮಂಡಳ ವತಿಯಿಂದ ಸನ್ಮಾನಿಸಲಾಯಿತು.
ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ಓಂಕಾರ ಪಾಟೀಲ ಮಾತನಾಡಿ,' ನೂತನ ಸದಸ್ಯರು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಲ್ಲದೇ ತಕ್ಷಣ ಪರಿಹಾರ ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು' ಎಂದು ಮನವಿ ಮಾಡಿದರು.
ಮುಖಂಡ ಗಣಪತಿ ಶಂಭು ಮಾತನಾಡಿದರು. ಪ್ರಮುಖರಾದ ಶಾಂತಕುಮಾರ ಶಂಭು, ಸೋಮನಾಥ ಶಂಭು, ಅರವಿಂದ ಭುಳ್ಳಾ, ಚಂದು ಓತಿ, ಚೆನಪ್ಪ ನೀಲಪನವರ್, ಓಂಕಾರ ನೀಲಪನವರ್, ಅಕ್ಕಮಹಾದೇವಿ ಮಹಿಳಾ ಮಂಡಳಿಯ ಸಂಗೀತಾ, ನಿರ್ಮಲಬಾಯಿ, ಪ್ರೇಮಲತಾ, ಪ್ರಭಾವತಿ, ಮಹಾನಂದಾ, ಪುತಳಾಬಾಯಿ ಇದ್ದರು.
ಶರಣಬಸಪ್ಪ ಸ್ವಾಗತಿಸಿದರು. ಕೇದಾರನಾಥ ಶಂಭು ನಿರೂಪಿಸಿದರು. ಸಂತೋಷ ತೊರಣೆ ವಂದಿಸಿದರು.
ವರದಿ ಮಛಂದ್ರನಾಥ ಕಾಂಬ್ಳೆ ಬೀದರ್