ಹಜ್ ಹೌಸ್ ಹಾಗೂ ಉರ್ದು ಭವನ ನಿರ್ಮಾಣಕ್ಕೆ 15.00 ಕೋಟಿ ಮಂಜೂರು ಮಾಡಬೇಕೆಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ

ಹಜ್ ಹೌಸ್ ಹಾಗೂ ಉರ್ದು ಭವನ ನಿರ್ಮಾಣಕ್ಕೆ 15.00 ಕೋಟಿ ಮಂಜೂರು ಮಾಡಬೇಕೆಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ

   ಹಜ್ ಹೌಸ್ ಹಾಗೂ ಉರ್ದು ಭವನ ನಿರ್ಮಾಣಕ್ಕೆ 15.00 ಕೋಟಿ ಮಂಜೂರು ಮಾಡಬೇಕೆಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ

  ಕಲಬುರಗಿ : ದಕ್ಷಿಣ ಮತಕ್ಷೇತ್ರದಲ್ಲಿ ಹಜ್ ಹೌಸ್‌ಕ್ಕೆ 10.ಕೋಟಿ ಹಾಗೂ ಉರ್ದು ಭವನಕ್ಕೆ 5 ಕೋಟಿ ಮಂಜೂರು ಮಾಡಿಸಿಕೊಡಬೇಕೆಂದು ನಯಾ ಸವೇರ ಸಂಘಟನೆಯ ಅಧ್ಯಕ್ಷ ಮೊದಿನ್ ಪಟೇಲ್ ಅಣಬಿ ಅವರು ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ದಕ್ಷಿಣ ಮತಕ್ಷೇತ್ರದಲ್ಲಿ ಸುಮಾರು 63 ಸಾವಿರ ಮುಸ್ಲಿಂ ಮತದಾರರು ಇದ್ದು, ಸುಮಾರು 2000 ಕ್ಕೂ ಹೆಚ್ಚು ಜನ ಪ್ರತಿ ವರ್ಷ ಹಜ್‌ಗೆ ಯಾತ್ರೆಯನ್ನು ಕೈಗೊಳ್ಳುತ್ತಿರುತ್ತಾರೆ. ಕಾರಣ ಸದರಿ ಜನಾಂಗವವರಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ಕಲಬುರಗಿ ಹಜ್ ಹೌಸ್ ನಿರ್ಮಾಣ ಮಾಡುವುದರಿಂದ ಹಜ್ ಯಾತ್ರಿಗಳಿಗೆ ತುಂಬಾ ಅನುಕೂಲವಾಗುತ್ತದೆ. ದಕ್ಷಿಣ ಮತಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಜನಾಂಗದವರು ವಾಸಿಸುತ್ತಿದ್ದು, ಸುಮಾರು 40% ಉರ್ದು ಮಾತನಾಡುವವರು ಹಾಗೂ ಪಿ.ಹೆಚ್.ಡಿ. ಹೊಂದಿದ ಅನೇಕ ಉರ್ದು ಸಾಹಿತಿಗಳು ಇರುತ್ತಾರೆ. ಇವರಿಗೆ ಕಾರ್ಯಕ್ರಮಗಳನ್ನು ಮಾಡಲ್ಲು ಯಾವುದೇ ರೀತಿಯ ಭವನವಿರುವುದಿಲ್ಲ. ಆದ್ದರಿಂದ ಕಲಬುರಗಿ ನಗರದಲ್ಲಿ ಹಜ್ ಹೌಸ್ ಹಾಗೂ ಉರ್ದು ಭವನ ನಿರ್ಮಾಣ ಮಾಡಲು ರೂ. 15.00 ಕೋಟಿ ಮಂಜೂರು ಮಾಡಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.