ಶಿವಪ್ಪ ನಾಯಕ ಗೆ ಜನಪದ ಕಲಾರತ್ನ ಪ್ರಶಸ್ತಿ.

ಶಿವಪ್ಪ ನಾಯಕ ಗೆ ಜನಪದ ಕಲಾರತ್ನ ಪ್ರಶಸ್ತಿ.

 ಶಿವಪ್ಪ ನಾಯಕ ಗೆ ಜನಪದ ಕಲಾರತ್ನ ಪ್ರಶಸ್ತಿ.

ಶಹಾಪುರ : ಸಗರನಾಡಿನ ಕೀರ್ತಿಯನ್ನು ಅಂತರ್ ಜಿಲ್ಲೆಗಳಿಗೆ ಪಸರಿಸಿ,ಜನಪದ ಕಲೆಯನ್ನು ನಾಡಿನ ಜನರೇ ಬೆರಗುಗೊಳಿಸುವಂತೆ ಜಾನಪದ ಶೈಲಿಯ ಹಂತಿ ಪದಗಳನ್ನು ಹಾಡುತ್ತಾ ರೈತಾಪಿ ವರ್ಗದ ಜನರನ್ನು ರಂಜಿಸುತ್ತ ಕಲಾ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಸಗರ ಗ್ರಾಮದ ಶಿವಪ್ಪ ನಾಯಕ ಗೆ ಜನಪದ ಕಲಾರತ್ನ ಪ್ರಶಸ್ತಿ ಲಭಿಸಿದೆ.

ಕಲಬುರಗಿಯ ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ ಎಸ್,ಎಂ,ಪಂಡಿತ್ ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಗರದ ಶಿವಪ್ಪ ನಾಯಕ ಅವರ ಕಲಾ ಸೇವೆಯನ್ನು ಪರಿಗಣಿಸಿ ಇಂದು ಜನಪದ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನೀಲಕಂಠ ಹಳೆಮನೆ,ಶ್ರೀದೇವಿ ದಾಸ್,ಪವನ್ ಕಲಬುರಗಿ,ಸುರೇಶ್ ನಾಗನಹಳ್ಳಿ ಅಶೋಕ್ ದಿವಟೆ ಸೇರಿದಂತೆ ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕಾಳೆ ಕಾರ್ಯದರ್ಶಿ ವಿಜಯಲಕ್ಷ್ಮಿ ಕಾಳೆ ಉಪಸ್ಥಿತರಿದ್ದರು.