ಆಳಂದ ಎ.ವಿ. ಪಾಟೀಲ ಮಹಾವಿದ್ಯಾ ಲಯದಲ್ಲಿ ಒಂದು ದಿನದ ಕಾರ್ಯಗಾರ

ಆಳಂದ ಎ.ವಿ. ಪಾಟೀಲ ಮಹಾವಿದ್ಯಾ ಲಯದಲ್ಲಿ  ಒಂದು ದಿನದ ಕಾರ್ಯಗಾರ

ಆಳಂದ ಎ.ವಿ. ಪಾಟೀಲ ಮಹಾವಿದ್ಯಾ ಲಯದಲ್ಲಿ ಒಂದು ದಿನದ ಕಾರ್ಯಗಾರ 

ಆಳಂದ: ಪಟ್ಟಣದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ 

 ಎ. ವಿ ಪಾಟೀಲ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ ಸೋಮವಾರ ಒಂದು ದಿನದ ಕಾರ್ಯಗಾರ "New Methodology Of NAAC Binary Accreditation" ಎಂಬ ವಿಷಯದ ಮೇಲೆ ಕಾರ್ಯಗಾರ ನಡೆಯಿತು ಈ ಕಾರ್ಯಗಾರದಲ್ಲಿ 

  ಮುಖ್ಯ ಅತಿಥಿಗಳಾಗಿ ಹಾಗೂ ಪ್ರತಿಷ್ಠಿತ ಭಾಷಣಕಾರರಾಗಿ ಆಗಮಿಸಿದ

ಡಾ.ಧರ್ಮಾಧಿಕಾರಿ. ಎನ್.ಎಸ್. ಶಿಕ್ಷಣ ತಜ್ಞರು ಪುಣೆ, NAAC ಮತ್ತು UGC ಕಮಿಟಿಯ ಸದಸ್ಯರು. ಇವರು ಕಾರ್ಯಗಾರವನ್ನು ಉದ್ದೇಶಿಸಿ NAAC ಗೆ ಸಂಬಂಧಪಟ್ಟಂತಹ ವಿಷಯಗಳಾದ ರಾಷ್ಟ್ರೀಯ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನಗಳ ಬಳಕೆ, ಉನ್ನತ ಭಾರತ ಅಭಿಯಾನ, ಹಾಗೂ ಬೋಧನೆಯ 5 ಮಾದರಿಗಳಾದ ಗುಂಪು ಕಲಿಕೆ, ಸ್ವಯಂ ಕಲಿಕೆ, ಆಟದ ಮೂಲಕ ಕಲಿಕೆ, ತಂತ್ರಜ್ಞಾನದ ಮೂಲಕ ಕಲಿಕೆ, ವಿಷಯ ತಜ್ಞರಿಂದ ಕಲಿಕೆ. ಇತ್ಯಾದಿ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು.

 ಕಾರ್ಯಕ್ರಮದ ಅಧ್ಯಕ್ಷತೆಯ ಸ್ಥಾನವನ್ನು ವಹಿಸಿದಂತಹ ಪ್ರಾಂಶುಪಾಲರಾದ ಡಾ. ಎಸ್. ಎಚ್. ಹೊಸಮನಿ ರವರು  

  ಪ್ರಾಧ್ಯಾಪಕರು ಕಾಲೇಜಿನಲ್ಲಿ NAAC ಗೆ ಸಂಬಂಧಪಟ್ಟಂತಹ ವಿಷಯಗಳು ಯಾವ ರೀತಿಯಾಗಿ ಕ್ರೂಢೀಕರಿಸಬೇಕು,ಅದನ್ನು ಹೇಗೆ ತಯಾರು ಮಾಡಿಕೊಳ್ಳಬೇಕು ಹೀಗೆ ಅನೇಕ NAAC ಗೆ ಸಂಬಂಧಪಟ್ಟಂತಹ ವಿಷಯಗಳನ್ನು ಮಾತನಾಡಿದರು.

 ವೇದಿಕೆಯ ಮೇಲೆ ಡಾ. ರಮೇಶ್ ಮಸರುಬೋ, ಡಾ. ರಾಜಶೇಖರ್ ಬಾಬುನೂರ್, ಡಾ. ವೆಂಕಟೇಶ್ ಪೂಜಾರಿ, ಡಾ. ಟೀಕಪ್ಪ ಉಪಸ್ಥಿತರಿದ್ದರು. ಶ್ರೀಮತಿ ಸಂಗೀತಾ ಅಷ್ಟಗಿ ಪ್ರಾರ್ಥನಾ ಗೀತೆಯನ್ನು ಹಾಡಿದರು.

 ಕಾರ್ಯಕ್ರಮದ ನಿರೂಪಣೆಯನ್ನು ಡಾ. ಬಬ್ರುವಾಹನ ಮಾಡಿದರು. ಡಾ. ಜೈಪ್ರಕಾಶ್ ಭಾವಿಮನಿ ವಂದಿಸಿದರು. ಕಾರ್ಯಗಾರದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು .

ವರದಿ ಡಾ ಅವಿನಾಶ .ಎಸ್ ದೇವನೂರ ಆಳಂದ .