ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ
ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ
ಕಲಬುರಗಿ: ಬಿಜೆಪಿ ಪಕ್ಷದ ಮುಖಂಡರು ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಾಮಾಜಿಕ ಸೇವೆಯನ್ನೇ ತಮ್ಮ ಜೀವಾಳದ ಗುರಿಯನ್ನಾಗಿ ಇಟ್ಟುಕೊಂಡಿರುವ ಜನಪ್ರಿಯ ಸಚಿವ ಪ್ರಿಯಾಂಕ ಖರ್ಗೆ ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿ ಅವರ ರಾಜೀನಾಮೆ ಕೇಳುತ್ತಿರುವ ಬಿಜೆಪಿಯ ಮುಖಂಡರು ಮೊದಲು ತಮ್ಮ ಪಕ್ಷದ ಅಭಿವೃದ್ಧಿಯ ಕಡೆಗೆ ಗಮನ ಕೊಡಬೇಕೆಂದು ಕಾಂಗ್ರೆಸ್ ನಾಯಕ ಪವನಕುಮಾರ ವಳಕೇರಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕ ಹೇಳಿಕೆ ಒಂದನ್ನು ನೀಡಿರುವ ಅವರು, ಇಡೀ ಭಾರತದಲ್ಲಿಯೇ ಖರ್ಗೆ ಕುಟುಂಬ ಜನಪ್ರಿಯತೆಯನ್ನು ಗಳಿಸುತ್ತಾ ಬಂದಿರುತ್ತದೆ. ಅವರ ರಾಜಕೀಯ ವರ್ಚಸ್ಸನ್ನು ಕುಗ್ಗಿಸಲು ಬಿಜೆಪಿಯ ಮುಖಂಡರು ರಾಜೀನಾಮೆ ಕೇಳುತ್ತಿರುವುದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಬಿಜೆಪಿ ಪಕ್ಷದಲ್ಲಿಯೇ ಅನೇಕ ಅಮಾನವೀಯ ಘಟನೆಗಳು ನಡೆದು ಹೋಗಿವೆ. ಅವುಗಳನ್ನು ಲೆಕ್ಕ ಹಾಕದ ಬಿಜೆಪಿ ಮುಖಂಡರು ಸರಳ ಸಜ್ಜನಿಕೆ ಹೆಸರಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುತ್ತಿರುವುದು ನಾಚಿಕೆಗೇಡಿ ವಿಷಯ ಆಗಿದೆ ಪವನಕುಮಾರ ಬಿ ವಳಕೇರಿ ತಿಳಿಸಿದ್ದಾರೆ.
ಶ್ರೀ ಮಲ್ಲಿಕಾರ್ಜುನ್ ಖರ್ಗೆ ಜಿ ಕುಟುಂಬಸ್ಥರು ಯಾವುದೇ ರೀತಿಯಿಂದ ಕಪ್ಪಚುಕ್ಕೆ ಹಾಗೂ ಮೋಸ ವಂಚನೆ ಜೀವ ಬೆದರಿಕೆ ಮಾಡಿದವರಲ್ಲ. ಸಚಿನ ಪಾಂಚಾಳ ಆತ್ಮಹತ್ಯೆಗು ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಯಾವುದೇ ಸಂಬಂಧವಿರುವುದಿಲ್ಲ.