ಸಂವಿಧಾನ ಸಭೆಯು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ದಿನವೆ ಸಂವಿಧಾನ ದಿನವಾಗಿದೆ ಭಾರತೀಶ ಬಿ
ಸಂವಿಧಾನ ಸಭೆಯು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ದಿನವೆ ಸಂವಿಧಾನ ದಿನವಾಗಿದೆ ಭಾರತೀಶ ಬಿ
ಕಲಬುರ್ಗಿ ನ 26: ಸಂವಿಧಾನ ದಿನವು, ಸಂವಿಧಾನ ಸಭೆಯು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ಸ್ಮರಣಾರ್ಥವಾಗಿದೆ. ಇದರ ಕೊನೆಯ ಅಧಿವೇಶನವು ನವೆಂಬರ್ 26, 1949 ರಂದು ಕೊನೆಗೊಂಡಿತು. ಎರಡು ತಿಂಗಳ ನಂತರ, ಅಂದರೆ ಜನವರಿ 26, 1950 ರಂದು, 284 ಸದಸ್ಯರು ಸಹಿ ಮಾಡಿದ ನಂತರ ಸಂವಿಧಾನವು ಜಾರಿಗೆ ಬಂದಿತು ಎಂದು ನೂತನ ವಿದ್ಯಾಲಯದ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಭಾರತೀಶ ಬಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
1930ರಲ್ಲಿ ಕಾಂಗ್ರೆಸ್ಸಿನ ಪೂರ್ಣ ಸ್ವರಾಜ್ ನಿರ್ಣಯವನ್ನು ಅದೇ ದಿನಾಂಕದಂದು ಘೋಷಿಸಲಾಗಿದ್ದರಿಂದ, ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ಪರಿಣಾಮವಾಗಿ, ಜನವರಿ 26 ಅನ್ನು ಭಾರತದಲ್ಲಿ ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ. 2015 ರಿಂದ ನವೆಂಬರ್ 26ನೇ ದಿನಾಂಕದಂದು ವಾರ್ಷಿಕವಾಗಿ ಭಾರತದ ಸಂವಿಧಾನ ದಿನ ಅಥವಾ ಸಂವಿಧಾನ್ ದಿವಸ್ ಎಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಸಂವಿಧಾನದ ಮೌಲ್ಯಗಳ ಅರಿವು,ಭಾರತದ ಪ್ರಜೆಗಳಲ್ಲಿ ಸಂವಿಧಾನದಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಂತಹ ಮೂಲಭೂತ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು.ಕರ್ತವ್ಯಗಳ ನೆನಪುನಾಗರಿಕರಿಗೆ ಅವರ
ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ನೆನಪಿಸುವುದು.ಅಂಬೇಡ್ಕರ್‌ಗೆ ಗೌರವ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಪ್ರತಿಮ ಕೊಡುಗೆಯನ್ನು ಸ್ಮರಿಸುವುದು ಮತ್ತು ಅವರಿಗೆ ಗೌರವ ಸಲ್ಲಿಸುವು ಮುಖ್ಯ ಉದ್ದೇಶಗಳನ್ನು ಈ ದಿನ ಹೊಂದಿದೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಶಿಲ್ಪಾ ಅಲ್ಲದ ವಹಿಸಿದ್ದರು, ಉಪನ್ಯಾಸಕಿ ವಿಜಯಲಕ್ಷ್ಮಿ ಶಾಬಾದಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆ ಬೋಧಿಸಿದರು ಹಿರಿಯ ಉಪನ್ಯಾಸಕರಾದ ಚಂದ್ರಶೇಖರ ಪಟ್ಟಣಕರ ವೇದಿಕೆಯ ಮೇಲೆ ಉಪಸ್ಥಿತರಿದ್ದರು, ಸಂಗೀತಾ ಸಡಕೀನ ಕಾರ್ಯಕ್ರಮ ನಿರೂಪಿಸಿದರು ಶ್ವೇತಾ ಶೆಟ್ಟಿ ಸ್ವಾಗತಿಸಿದರು ಅಶ್ವಿನಿ ವಂದಿಸಿದರು
