ಬಸವೇಶ್ವರ ಆಸ್ಪತ್ರೆಯಿಂದ ಯಶಸ್ವಿ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳು ಡಾ ಆನಂದ ಗಾರಂಪಳ್ಳಿ

ಬಸವೇಶ್ವರ ಆಸ್ಪತ್ರೆಯಿಂದ ಯಶಸ್ವಿ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳು ಡಾ ಆನಂದ ಗಾರಂಪಳ್ಳಿ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ನೇತ್ರ ವಿಜ್ಞಾನ ವಿಭಾಗದಿಂದ ಆಳಂದ ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಉಚಿತ ನೇತ್ರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಎರಡು ದಿನಗಳ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ 17 ಜನರಿಗೆ ಯಶಸ್ವಿ ಯಾಗಿ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ನೆರವೇರಿಸಲಾಯಿತು ಈ ನೇತ್ರ ಚಿಕಿತ್ಸಾ ಶಿಬಿರದಲ್ಲಿ ನೇತ್ರ ತಜ್ಞ ವೈದ್ಯರಾದ ಡಾ ರಹೀಲಾ, ಡಾ ರಾಜಶ್ರಿ ರೆಡ್ಡಿ, ಡಾ ಮಂಜುಳಾ ಮಂಗಾಣೆ, ಡಾ ಸುನೀತ ದೇಶಪಾಂಡೆ, ಡಾ ನಾಗವೇಣಿ ಗುಬ್ಬೆವಾಡ,ಡಾ ಶಶಾಂಕ್ ಸಜ್ಜನ ಶೆಟ್ಟಿ ಭಾಗವಹಿಸಿ ಚಿಕಿತ್ಸೆ ನೀಡಿದರು.
ನಂತರ ಮಾತನಾಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ ಆನಂದ ಗಾರಂಪಳ್ಳಿಯವರು ಮಾತನಾಡಿ ಸಂಸ್ಥೆಗೆ ಶಶೀಲ್ ಜಿ ನಮೋಶಿಯವರ ನೇತೃತ್ವದ ಆಡಳಿತ ಮಂಡಳಿ ಬಂದ ನಂತರ ಬಸವೇಶ್ವರ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ , ವಿಧ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ ಯೋಜನೆಯ ಅಡಿಯಲ್ಲಿ ಹಲವರು ಉಚಿತ ಆರೋಗ್ಯ ಕಾರ್ಯಾಗಾರಗಳನ್ನು ಶಿಬಿರಗಳನ್ನು ಏರ್ಪಡಿಸಲಾಗಿದೆ ಇದರಿಂದ ಅನೇಕ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ 2025 ರ ಜನೇವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಬೇರೆ ಬೇರೆ ಗ್ರಾಮಗಳಿಗೆ ತೆರಳಿ ಸುಮಾರು 500 ಕ್ಕಿಂತಲೂ ಹೆಚ್ಚು ಜನರಿಗೆ ಉಚಿತವಾಗಿ ನೇತ್ರ ಚಿಕಿತ್ಸೆ ಮಾಡಲಾಗಿದೆ ಸುಮಾರು 136 ಜನರಿಗೆ ಕಣ್ಣಿನ ಪೊರೆ, ಡಿಸಿಟಿ, ಕಾರ್ನಿಯಲ್ ಟ್ರಾನ್ಸ್ ಪ್ಲಾಂಟ್ ಸರ್ಜರಿಯನ್ನು ಸಂಪೂರ್ಣವಾಗಿ ಉಚಿತವಾಗಿ ನೆರವೇರಿಸಿ ನೇತ್ರ ರೋಗಿಗಳಿಗೆ ಅವಶ್ಯಕತೆ ಇರುವ ಔಷಧಿ,ಮಾತ್ರೆ, ಕಪ್ಪು ಕನ್ನಡಕ ಸಂಸ್ಥೆಯ ವತಿಯಿಂದ ನೀಡಲಾಗಿದೆ. ಆಡಳಿತ ಮಂಡಳಿಯ ನಮಗೆ ಬೆನ್ನೆಲುಬುಗಿ ಇಂತಹ ಎಲ್ಲ ಕಾರ್ಯಗಳಿಗೆ ಪ್ರೋತ್ಸಾಹಿಸಿರುವದರಿಂದಲೆ ಈ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದು ಹೇಳಿದರು.