ಆಳಂದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಹಕಾರ-ತಹಶೀಲ್ದಾರ ಅಣ್ಣಾರಾವ ಪಾಟೀಲ
ಆಳಂದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಹಕಾರ-ತಹಶೀಲ್ದಾರ ಅಣ್ಣಾರಾವ ಪಾಟೀಲ
ಆಳಂದ: ತಾಲೂಕಿನ ಗಡಿಗ್ರಾಮ ಹಿರೋಳಿಯಲ್ಲಿ ಹಮ್ಮಿಕೊಂಡಿರುವ ಆಳಂದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕು ಆಡಳಿತದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಆಳಂದ ತಹಶೀಲ್ದಾರ ಅಣ್ಣಾರಾಯ ಪಾಟೀಲ ಹೇಳಿದರು.
ಮಂಗಳವಾರ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ತಾಲೂಕಿನ ಸಾಹಿತ್ಯಿಕ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಮೂಲಕ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಯಶಸ್ವಿಗೊಳಿಸಲು ಉತ್ತಮ ವೇದಿಕೆ. ಸಮ್ಮೇಳನ ಯಶಸ್ವಿಯಾಗಿ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಸಮ್ಮೇಳನ ಬರಿ ಸಾಹಿತ್ಯದ ಜಾತ್ರೆಯಾಗದೆ ನಾಡಿನ ಕಲೆ, ಸಂಸ್ಕೃತಿ ಹಾಗೂ ತಾಲೂಕಿನ ಸಮಸ್ತ ವಿಚಾರಗಳನ್ನು ನಾಡಿಗೆ ತಿಳಿಸುವ ರೀತಿ ಸಮರ್ಥ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಪಕ್ಷಭೇದ ಮರೆತು ನಾಡು ನುಡಿಯ ತೇರನ್ನು ಎಳೆಯಲು ಕೈಜೋಡಿಸಬೇಕು ಎಂದರು.
ಕಸಾಪ ಅಧ್ಯಕ್ಷ ಹಣಮಂತ ಶೇರಿ ಮಾತನಾಡಿ, ಸಮ್ಮೇಳನವನ್ನು ಒಂದು ದಿನ ಅರ್ಥಪೂರ್ಣವಾಗಿ ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ. ಸಮ್ಮೇಳನ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ ಕನ್ನಡ ತಾಯಿ ತೇರನ್ನು ಸಂಭ್ರಮ, ಸಡಗರದಿಂದ ಎಳೆಯೋಣ ಎಂದು ಸಮ್ಮೇಳನದ ರೂಪ ರೇಷೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಕಸಾಪ ಸಂಘಟನಾ ಕಾರ್ಯದರ್ಶಿ ಸುಧಾಕರ ಖಾಂಡೇಕರ್, ರವಿ ಪಟ್ಟಣಶೆಟ್ಟಿ, ಆಕಾಶ ಅಂಕಲಗಿ ಸೇರಿದಂತೆ ಇತರರು ಇದ್ದರು.
ಜ.13ಕ್ಕೆ ಸಾಹಿತ್ಯ ಸಮ್ಮೇಳನ:
ತಾಲೂಕಿನ ಮಾದನಹಿಪ್ಪರಗಾ ವಲಯದ ಗಡಿನಾಡಿನ ಹಿರೋಳಿ ಗ್ರಾಮದಲ್ಲಿ ಜ. 13ರಂದು ಆಯೋಜಿಸಲಾದ ಕನ್ನಡ ಸಾಹಿತ್ಯ 12ನೇ ತಾಲೂಕು ಸಮ್ಮೆಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಧರ್ಮಣ್ಣ ಎಚ್. ಧನ್ನಿ ಕಡಗಂಚಿ ಅವರನ್ನು ಆಯ್ಕೆಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಹಣಮಂತ ಶೇರಿ ತಿಳಿಸಿದ್ದಾರೆ.
ಅಂದು ಬೆಳಗಿನ 8:30ಕ್ಕೆ ಮಾದನಹಿಪ್ಪರಗಾ ಪಿಎಸ್‌ಐ ಸವಿತಾ ಕಲೂರ ರಾಷ್ಟçಧ್ಜಜಾ ವಲಯ ಕಸಾಪ ಅಧ್ಯಕ್ಷ ಸಿದ್ರಾಮ ಅಷ್ಟಗಿ ನಾಡಧ್ವಜವನ್ನು ಭಾರತ ಸೇವಾದಳ ಶರಣಬಸಪ್ಪ ವಡಗಾಂವ, ವೀರಭದ್ರಪ್ಪ ಹಾರಕೆ, ಸ್ಕೌಟ್ಸ್ ಗೈಡ್ಸ್ನ ವೆಂಕಟೇಶ ಮರಾಠೆ ಉಪಸ್ಥಿತಯಲ್ಲಿ ನೆರವರಿಸುವರು.
9:00ಗಂಟೆಗೆ ಸಮ್ಮೆಳನ ಅಧ್ಯಕ್ಷರ ಮೆರವಣಿಗೆಯನ್ನು ತಹಶೀಲ್ದಾರ ಅಣ್ಣರಾವ್ ಪಾಟೀಲ ಚಾಲನೆ ನೀಡುವರು. ಈ ಸಂದರ್ಭಧಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮುಖಂಡರು ಪಾಲ್ಗೊಳ್ಳುವರು ಎಂದು ಹೇಳಿದರು.
11:00ಗಂಟೆಗೆ ಜಾಗೃತ ಸೋಮೇಶ್ವರ ವೇದಿಕೆಯಲ್ಲಿ ನಾಡದೇವಿ ಭುವನೇಶ್ವರಿ ಭಾವಚಿತ್ರ ಪೂಜೆಯನ್ನು ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಉದ್ಘಾಟನೆ ನೆರವೇರಿಸುವರು. ಸಾನ್ನಿಧ್ಯವನ್ನು ಹಿರೋಳಿಯ ಶ್ರೀ ಶಿವಬಸವ ಶಿವಾಚಾರ್ಯರು ಮತ್ತು ಆಳಂದ ಶರಣಮಂಟಪದ ಶ್ರೀ ಚನ್ನಬಸವ ಪಟ್ಟದೇವರು ವಹಿಸಲಿದ್ದಾರೆ. ಸಮ್ಮೇಳನವನ್ನು ಸಿಯುಕೆ ಕನ್ನಡ ಪ್ರಾಧ್ಯಕ್ಷ ವಿಕ್ರಂ ವಿಸಾಜಿ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ಆಶಯ ನುಡಿ ಮಂಡಿಸುವರು. ಸಮ್ಮೇಳನಾಧ್ಯಕ್ಷ ಧರ್ಮಣ್ಣ ಧನ್ನಿ ಮತ್ತು ನಿಕಟಪೂರ್ವ ಅಧ್ಯಕ್ಷ ಪ್ರಭುಲಿಂಗ ನಿಲ್ಲೂರೆ ಉಪಸ್ಥಿತಿಯಲ್ಲಿ ಶ್ರೀ ಧರ್ಮರಾಯ ಜವಳಿ ಸಂಪಾದಿತ ಸ್ಮರಣ ಸಂಚಿಕೆ ಬಿಡುಗಡೆ ನಡೆಯಲಿದೆ.
ಮಧ್ಯಾಹ್ನ 2:00ಗಂಟೆಗೆ ಗಡಿನಾಡು ಆಳಂದ ತಾಲೂಕಿನ ಸಂಕೀರ್ಣ ವಿಚಾರ ಘೋಷ್ಠಿ ಅಧ್ಯಕ್ಷತೆ ನಿವೃತ್ತ ಪ್ರಾಚಾರ್ಯ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ವಹಿಸುವರು. ತಾಲೂಕಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆ, ಹೋರಾಟದ ಹೆಜ್ಜೆ ಗುರುತುಗಳು ಕೃಷಿ ನೀರಾವರಿ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ಕುರಿತು ಉಪನ್ಯಾಸ ನಡೆಯಲಿದೆ. ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಉಪನ್ಯಾಸ ನಡೆಯಲಿದೆ.
3:30ಕ್ಕೆ ನಡೆಯುವ ಕವಿಗೋಷ್ಠಿ ನಡೆಯುವುದು. 4:30ಕ್ಕೆ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ವಹಿಸುವರು. ನಾಗಣಸೂರ ಮಠದ ಶ್ರೀಕಂಠ ಶಿವಾಚಾರ್ಯರು ನೇತೃತ್ವ ವಹಿಸುವರು, ಅಧ್ಯಕ್ಷತೆಯನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ ವಹಿಸುವರು ಎಂದು ಅಧ್ಯಕ್ಷ ಶೇರಿ ಅವರು ಪ್ರಕಟಿಸಿದ್ದಾರೆ.