ನಿವೃತ್ತಿ ಹೊಂದಿದ ಸಚಿವಾಲಯದ ಅಧಿಕಾರಿ/ನೌಕರರಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಿತು.
ನಿವೃತ್ತಿ ಹೊಂದಿದ ಸಚಿವಾಲಯದ ಅಧಿಕಾರಿ/ನೌಕರರಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಿತು.
ಬೆಂಗಳೂರು : ಸೇವೆಯಲ್ಲಿ ಕರ್ತವ್ಯ ನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊಂಡು ನಿವೃತ್ತಿ ಹೊಂದುತ್ತಿರುವ ನೌಕರರ ಜೀವನ ಸುಖಮಯವಾಗಿರಲಿ ಎಂದ ಅಧ್ಯಕ್ಷರಾದ ಶ್ರೀ ರಮೇಶ್ ಸಂಗಾ ಹೇಳಿದರು.
ಡಿಸೆಂಬರ್ 2024 ರಲ್ಲಿ ನಿವೃತ್ತಿ ಹೊಂದಿದ ಸಚಿವಾಲಯದ ಅಧಿಕಾರಿ/ನೌಕರರಿಗೆ ಬೀಳ್ಕೊಡುಗೆ ಸಮಾರಂಭವನ್ನು ಕರ್ನಾಟಕ ಸರ್ಕಾರ ಸಚಿವಾಲಯ ನೌಕರ ಸಂಘದ ವತಿಯಿಂದ ಇಂದು ಮಧ್ಯಾಹ್ನ ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರಮೇಶ್ ಸಂಗಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಸಚಿವಾಲಯದ ಅಧಿಕಾರಿ ನೌಕರರು ಹಾಗೂ ನಿವೃತ್ತರ ಕುಟುಂಬ ವರ್ಗದವರು ಹಾಗೂ ಸ್ನೇಹಿತರು ಸದರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವಾಲಯ ನೌಕರ ಸಂಘದ ಅಧ್ಯಕ್ಷರಾದ ಶ್ರೀ ರಮೇಶ್ ಸಂಗಾರವರು ಮಾತನಾಡಿ ನಿವೃತ್ತ ಅಧಿಕಾರಿ ನೌಕರರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದವರು ಉಪಸ್ಥಿತರಿದ್ದರು.