ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪ್ರದಾನ ಡಾ. ಎಚ್.ಎಸ್. ಸುರೇಶ್, ಮಿತ್ರ ವೆಂಕಟ್ರಾಜು,ಡಾ. ಬಿ. ಎಸ್. ಶೈಲಜಾ ಭಾಜನ

ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪ್ರದಾನ   ಡಾ. ಎಚ್.ಎಸ್. ಸುರೇಶ್, ಮಿತ್ರ ವೆಂಕಟ್ರಾಜು,ಡಾ. ಬಿ. ಎಸ್. ಶೈಲಜಾ ಭಾಜನ

ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪ್ರದಾನ 

 ಡಾ. ಎಚ್.ಎಸ್. ಸುರೇಶ್, ಮಿತ್ರ ವೆಂಕಟ್ರಾಜು,ಡಾ. ಬಿ. ಎಸ್. ಶೈಲಜಾ ಭಾಜನ 

 ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಿದ್ದ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜವಾಹರ್ ಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ. ಬಿ. ಆರ್. ಗುರುಪ್ರಸಾದ್ ಉದ್ಘಾಟಿಸಿದರು.

 ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನ್ಯಾ ರಾಜೇಂದ್ರ ಬಾದಾಮಿಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅನ್ನಪೂರ್ಣ ಪಬ್ಲಿಸಿಂಗ್ ಹೌಸ್ ಪ್ರಕಟಿಸಿರುವ ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ. ಹೆಚ್. ಎಸ್. ಸುರೇಶ್ ಬರೆದಿರುವ ಪಾತಕ ಲೋಕದಿಂದ ಗಾಂಧಿಯಾನದೆಡೆಗೆ ( ಮುಂಬೈನ ಲಕ್ಷ್ಮಣ್ ತುಕಾರಾಂ ಗೋಲೆ ಜೀವನಾಧಾರಿತ ಕಥನ ) ಕೃತಿಗೆ 2025ನೇ ಸಾಲಿನ ಎ. ಆರ್. ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರವಟ್ಟು ದತ್ತಿ ಪ್ರಶಸ್ತಿ, ಮಿತ್ರ ವೆಂಕಟ್ರಾಜುರವರಿಗೆ ಪಂಕಜಶ್ರೀ ಸಾಹಿತ್ಯದತ್ತಿ ಹಾಗೂ ಖ್ಯಾತ ವಿಜ್ಞಾನ ಬರಹಗಾರ್ತಿ ಡಾ. ಬಿ.ಎಸ್. ಶೈಲಜಾ ರವರಿಗೆ ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಡಲ ತೀರದ ಭಾರ್ಗವ ಡಾ.ಶಿವರಾಮಕಾರಂತ ಮತ್ತು ಸಾಹಿತಿ ಸಾಲಿ ರಾಮಚಂದ್ರ ರಾಯರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ ಮಾತನಾಡುತ್ತಾ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಪರಿಷತ್ ನಲ್ಲಿ 2200 ಅಧಿಕ ದತ್ತಿಗಳಿದ್ದು ನಾಡು ನುಡಿಗೆ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುತ್ತಾ ಬರುವ ಮೂಲಕ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿದೆ ಎಂದು ತಿಳಿಸಿದರು .

 ದತ್ತಿ ದಾನಿಗಳಾದ ಎ. ಆರ್.ನಾರಾಯಣ ಘಟ್ಟ ಮತ್ತು ಟಿ.ಎಸ್ ಶೈಲಜ, ಗೌ. ಕೋಶಾಧ್ಯಕ್ಷ ಡಿ. ಆರ್.ವಿಜಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌ ಕಾರ್ಯದರ್ಶಿ ಹೆಚ್. ಜಿ. ಮದನ್ ಗೌಡ ಸ್ವಾಗತಿಸಿದರು, ಬಿ ಎಂ.ಪಟೇಲ್ ಪಾಂಡು ಕಾರ್ಯಕ್ರಮ ನಿರೂಪಿಸಿದರು, ಪ್ರಕಟನಾ ವಿಭಾಗದ ಸಂಚಾಲಕ ಎನ್.ಎಸ್. ಶ್ರೀಧರಮೂರ್ತಿ ಪುರಸ್ಕೃತರನ್ನು ಪರಿಚಯಿಸಿದರು.