ಎಂ.ಡಿ. ಮುಕ್ರಂ ಗೆ ಕುವೆಂಪು ಪ್ರಶಸ್ತಿ

ಎಂ.ಡಿ. ಮುಕ್ರಂ ಗೆ ಕುವೆಂಪು ಪ್ರಶಸ್ತಿ

ಎಂ.ಡಿ. ಮುಕ್ರಂ ಗೆ ಕುವೆಂಪು ಪ್ರಶಸ್ತಿ

ಶಹಾಪುರ : ತಾಲೂಕಿನ ವನದುರ್ಗ ಗ್ರಾಮದ ಯುವ ಕಲಾವಿದ,ಶಿಕ್ಷಕ ಎಂ.ಡಿ.ಮುಕ್ರಂ ಅವರಿಗೆ ಯಾದಗಿರಿ ಜಿಲ್ಲಾ ಉತ್ಸವದಲ್ಲಿ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯಾದಗಿರಿ ಜಿಲ್ಲಾ ಘಟಕದ ಜಯ ಕರ್ನಾಟಕ ವತಿಯಿಂದ 51ನೇ ಸುವರ್ಣ ಕರ್ನಾಟಕ ಮಹೋತ್ಸವ ಅಂಗವಾಗಿ ನಮ್ಮ ಯಾದಗಿರಿ ಜಿಲ್ಲಾ ಉತ್ಸವದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸಾಧಕ ಎಂ.ಡಿ.ಮುಕ್ರಂ ಅವರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಪ್ಪಟ ಗ್ರಾಮೀಣ ಪ್ರತಿಭೆಯಾದ ಎಂ.ಡಿ. ಮುಕ್ರಂ ಇನಾಮದಾರ ಅವರ ಮನೆಯಲ್ಲಿ ಉರ್ದು,ಹಿಂದಿ ಮಾತನಾಡಿದರು,ಕನ್ನಡದ ಮೇಲೆ ಅಪಾರ ಪ್ರೀತಿ,ಅಭಿಮಾನ, ಇರುವುದರಿಂದ ಅತಿ ಹೆಚ್ಚಾಗಿ ಡಾ. ರಾಜಕುಮಾರ್ ಕನ್ನಡ ಗೀತೆಗಳ ಹಾಡುವುದರ ಜೊತೆಗೆ ಎಲ್ಲರನ್ನೂ ರಂಜಿಸುವ ಕಲೆಯನ್ನು ಕರಗತ ವಾಗಿಸಿಕೊಂಡಿದ್ದಾರೆ.

ಇವರ ಕನ್ನಡದ ಮೇಲಿನ ಪ್ರೀತಿ ಅಭಿಮಾನವನ್ನು ಗುರುತಿಸಿ ಇಂದು ಇವರಿಗೆ ಕುವೆಂಪು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು,ಈ ಸಂದರ್ಭದಲ್ಲಿ. ಮುಖಂಡರಾದ ಮಲ್ಲಿಕಾರ್ಜುನ್ ಮೇಟಿ,ಮಹೇಶ್ ಅವಂಟಿ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ್ ಸೇರಿದಂತೆ ಇನ್ನಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.