ಸಮಾಜ ವಿಜ್ಞಾನ ವಿಷಯ ಸಂಘ ಸ್ಥಾಪನೆ.
ಸಮಾಜ ವಿಜ್ಞಾನ ವಿಷಯ ಸಂಘ ಸ್ಥಾಪನೆ.
ದಿನಾಂಕ 5.10.2024 ರಂದು ಶನಿವಾರ ಮಧ್ಯಾಹ್ನ 3:೦೦ ಗಂಟೆಗೆ ನೂತನ ವಿದ್ಯಾಲಯ ಬಾಲಕರ ಪ್ರೌಢ ಶಾಲೆ ಕಲ್ಬುರ್ಗಿಯಲ್ಲಿ ಜಿಲ್ಲಾ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ಸಭೆ. ನಡೆಸಲಾಯಿತು.
ಸಭಾ ಸೂಚನೆಯಲ್ಲಿ ತಿಳಿಸಿದ ಅಜೆಂಡಾದಂತೆಚ ರ್ಚಿಸಿತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು
1.ಸಮಾಜ ವಿಜ್ಞಾನ ವಿಷಯ ಪ್ರಶ್ನೆ ಪತ್ರಿಕೆ ವಿನ್ಯಾಸದ ಬದಲಾವಣೆಯ ಕುರಿತು ಶಿಕ್ಷಕರಿಂದ ಸಲಹೆಯನ್ನು ಪಡೆಯಲಾಯಿತು.
2, ಆಯುಕ್ತರ ವರ್ಗಾವಣೆಯಾದ
ಕಾರಣ 8. 10 .2024
ರಂದು ಪ್ರಶ್ನೆ ಪತ್ರಿಕೆ ವಿನ್ಯಾಸ ಬದಲಾವಣೆ ಕುರಿತು ನಡೆಯಬೇಕಾಗಿದ್ದ ಸಭೆ ರದ್ದಾಗಿರುವುದು ತಿಳಿಸಲಾಯಿತು.
3,ಸಮಾಜ ವಿಜ್ಞಾನ ವಿಷಯದ ಸಂಘ ರಚನೆಯ ಮೂಲ ಉದ್ದೇಶಗಳು ಹಾಗೂ ಸಂಘ ಕೈಗೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ
ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಯಿತು.
ಉದ್ದೇಶಗಳು:
1.ಸಮಾಜ ವಿಜ್ಞಾನ ವಿಷಯದ ಸಂಪದೀಕರಣ ಆಗಬೇಕು,
2, ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ಕ್ರೂಡೀಕರಣ ಮಾಡಲು,
3, ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪೂರಕ ಸಾಹಿತ್ಯ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯಲ್ಲಿ ಹಂಚಿಕೊಳ್ಳುವುದು
4,ವಿಷಯ ಬೋಧನೆಯಲ್ಲಾಗುವ ತೊಂದರೆಗಳನ್ನು, ಪಠ್ಯದಲ್ಲಿನ ಜಟಿಲ ಸಮಸ್ಯೆಗಳನ್ನು ನಮ್ಮಲ್ಲಿಯೇ (ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯಲ್ಲಿ) ಸಮಾಲೋಚನೆ ಮಾಡಿ ಬಗೆಹರಿಸಿಕೊಳ್ಳುವುದು.
5, ತಮ್ಮ ತಮ್ಮ ಶಾಲೆಯಲ್ಲಿ ಮಾಡಿದ
ವಿಷಯಕ್ಕೆ ಸಂಬಂಧಿಸಿದ
ವಿನೂತನ ಕಾರ್ಯಕ್ರಮಗಳನ್ನು
ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯ ಗುಂಪಿನಲ್ಲಿ ಹಂಚಿಕೊಳ್ಳಬೇಕು.
ಸಂಘದ ಚಟುವಟಿಕೆಗಳು
1, ಪ್ರತಿವರ್ಷ ಜಿಲ್ಲೆಯಲ್ಲಿ ಒಂದು ಸಮಾಜ ವಿಜ್ಞಾನ ವಿಷಯದ ಸಮಾವೇಶ ನಡೆಸಬೇಕು.
2, ಜಿಲ್ಲಾ ಹಂತದಲ್ಲಿ, ತಾಲೂಕು ಹಂತದಲ್ಲಿ, ಕ್ಲಸ್ಟರ್ ಹಂತದಲ್ಲಿ, ಕಾರ್ಯಾಗಾರಗಳನ್ನು ನಡೆಸಬೇಕು.
3, ನಮ್ಮ ಜಿಲ್ಲೆಯ ಸಮಾಜ ವಿಜ್ಞಾನ ವಿಷಯದಲ್ಲಿನ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ಪಠ್ಯಕ್ಕೆ ಸಂಬಂಧಿಸಿದ ಪೂರಕ ಸಾಹಿತ್ಯ ರಚಿಸಲು ಅನುವು ಮಾಡಿಕೊಡು ವುದು.
4, ಸಮಾಜ ವಿಜ್ಞಾನ ವಿಷಯದಲ್ಲಿ
ವಿಶೇಷ ಸಾಧನೆಗೈದ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು, ಪ್ರೋತ್ಸಾಹಿಸುವುದರ ಜೊತೆಗೆ ಸನ್ಮಾನಿಸುವುದು
ಈ ಮೇಲಿನ ಸಂಘದ ಉದ್ದೇಶ ಮತ್ತು ಸಂಘದ ಚಟುವಟಿಕೆಗಳನ್ನು ಇಟ್ಟುಕೊಂಡು
ಒಂದು ಕ್ರಿಯಾಶೀಲ ಜಿಲ್ಲಾ ಸಮಾಜ ವಿಜ್ಞಾನ ಸಂಘವನ್ನು" ಪ್ರಜಾಪ್ರಭುತ್ವ ಮಾದರಿಯಲ್ಲಿ"ಒಂದು ಮಾದರಿ ವಿಷಯ ಶಿಕ್ಷಕರ ಸಂಘ ರಚಿಸಬೇಕೆಂಬ ತೀರ್ಮಾನಕ್ಕೆ ಬರಲಾಯಿತು.
ಅದರಂತೆ ಚರ್ಚಿಸಿ ಅವಿರೋಧವಾಗಿ ಸರ್ವಾನುಮತದಿಂದ ಸಂಘದ ಸದಸ್ಯರನ್ನುಆಯ್ಕೆಮಾಡಲಾಯಿತು.ಪದಾಧಿಕಾರಿಗಳ ಪಟ್ಟಿಯನ್ನು ಅವಿರೋಧವಾಗಿ ಅಂತಿಮಗೊಳಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು
ಗೌರವ ಸಲಹೆಗಾರರಾಗಿ:
ಶ್ರೀ ಸಿ ಬಿ ಪಾಟೀಲ್
ಡಿ ವೈ ಪಿ ಸಿ
ಸಲಹೆಗಾರರಾಗಿ:
ಶ್ರೀ ವಿಜಯಕುಮಾರ್ ಪಾಟೀಲ್
ಮುಖ್ಯ ಗುರುಗಳು
ಶ್ರೀ ರಾಜು ವಿ ಪಾಯದ
ಮುಖ್ಯ ಗುರುಗಳು
ಶ್ರೀ ರಾಜಕುಮಾರ್ ಪಾಟೀಲ್
ಮುಖ್ಯ ಗುರುಗಳು
ಶ್ರೀ ಕರಬಸಯ್ಯ ಮಠ
ಮುಖ್ಯ ಗುರುಗಳು
ರವರನ್ನು ನೇಮಕ ಮಾಡಲಾಯಿತು.
ಪದಾಧಿಕಾರಿಗಳ ಪಟ್ಟಿ ಕೆಳಗಿನಂತಿದೆ
1,ಶ್ರೀ ಬಾಬರ್ ಪಟೇಲ್
ಗೌರವಾಧ್ಯಕ್ಷರು
2, ಶ್ರೀ ಸಂತೋಷ್ ಹೂಗಾರ್
ಅಧ್ಯಕ್ಷರು
3, ಶ್ರೀ ಶಂಕರ ಬಿರಾದಾರ್
ಉಪಾಧ್ಯಕ್ಷರು
4, ಶ್ರೀಮತಿ ಸಪ್ನಾ ಪಾಟೀಲ್
ಉಪಾಧ್ಯಕ್ಷರು
5, ಶ್ರೀ ನಾಗಣ್ಣ ಶಹಬಾದಿ
ಪ್ರಧಾನ ಕಾರ್ಯದರ್ಶಿಗಳು
6, ಶ್ರೀ ಮೋಹನ್ ಕಾನಕುರ್ತ
ಕೋಶಾಧ್ಯಕ್ಷರು
9, ಶ್ರೀ ಶರಣಬಸಪ್ಪ ನಾಟಿಕರ್
ಸಂಘಟನಾ ಕಾರ್ಯದರ್ಶಿ
8, ಶ್ರೀ ರಾಜಕುಮಾರ ಪಾಟೀಲ್
ಸಂಘಟನಾ ಕಾರ್ಯದರ್ಶಿ
9, ಶ್ರೀ ಭೀಮಶಂಕರ್
ಸಂಘಟನಾ ಕಾರ್ಯದರ್ಶಿ
10, ಶ್ರೀ ಶಿವಪುತ್ರಪ್ಪ ಗುಡ್ಡದ
ಸಂಘಟನಾ ಕಾರ್ಯದರ್ಶಿ
11, ಶ್ರೀ ವಿಜಯಕುಮಾರ್ ಕಂದಳ್ಳಿ
ಸಹ ಕಾರ್ಯದರ್ಶಿ
12, ಶ್ರೀ ಬಾಳಸಾಬ
ಸಹ ಕಾರ್ಯದರ್ಶಿ
13, ಶ್ರೀ ಚಂದ್ರಕಾಂತ್ ಗೋಣಗಿಮಠ
ಮಾಧ್ಯಮ ಕಾರ್ಯದರ್ಶಿ
14, ಶ್ರೀ ಪ್ರವೀಣ್ ಕುಮಾರ್
ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯದರ್ಶಿ
15, ಶ್ರೀಮತಿ ವಾಣಿಶ್ರೀ ಪಾಟೀಲ್
ಮಹಿಳಾ ಪ್ರತಿನಿಧಿ
16, ಶ್ರೀಮತಿ ಭಾರತಿ ಧೋತ್ರೆ
ಮಹಿಳಾ ಪ್ರತಿನಿಧಿ
ಸಾಯಂಕಾಲ 5:00 ಗಂಟೆಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು
ಶ್ರೀ ಚಂದ್ರಕಾಂತ್ ಗೊಣಗಿಮಠ
ಮಾಧ್ಯಮ ಕಾರ್ಯದರ್ಶಿಗಳು,*
ಸಮಾಜ ವಿಜ್ಞಾನ ವಿಷಯ ಶಿಕ್ಷಕರ ಸಂಘ ಕಲ್ಬುರ್ಗಿ