ಬೆಳೆ ನಷ್ಟವಾದ ರೈತರಿಗೆ ಸರ್ಕಾರ ಬೆಳೆ ಪರಿಹಾರ ಧನ ವಿತರಣೆ ಮಾಡಲಿ ಶಿವಶಂಕರ್ ಗುಂಡುಗುರ್ತಿ ಸರ್ಕಾರಕ್ಕೆ ಮನವಿ...

ಬೆಳೆ ನಷ್ಟವಾದ ರೈತರಿಗೆ  ಸರ್ಕಾರ ಬೆಳೆ ಪರಿಹಾರ ಧನ ವಿತರಣೆ ಮಾಡಲಿ ಶಿವಶಂಕರ್ ಗುಂಡುಗುರ್ತಿ ಸರ್ಕಾರಕ್ಕೆ ಮನವಿ...

ಬೆಳೆ ನಷ್ಟವಾದ ರೈತರಿಗೆ ಸರ್ಕಾರ ಬೆಳೆ ಪರಿಹಾರ ಧನ ವಿತರಣೆ ಮಾಡಲಿ ಶಿವಶಂಕರ್ ಗುಂಡುಗುರ್ತಿ ಸರ್ಕಾರಕ್ಕೆ ಮನವಿ...

 ರಾಜ್ಯದಲ್ಲಿ ಅತಿಯಾದ ನೆರೆ ಹಾವಳಿಯಿಂದ ರೈತರು ಬೆಳೆದ ಬೆಳೆಗಳು ನಿರುಪಾಲಾಗಿ ಕೊಳೆತು ಹೋಗಿರುತ್ತವೆ ಇದರಿಂದ ರಾಜ್ಯದ ರೈತರಿಗೆ ಅತಿಯಾದ ನಷ್ಟ ಉಂಟಾಗಿರುತ್ತದೆ . ಅದೇ ರೀತಿಯಾಗಿ ರಾಜ್ಯದ ಕೆಲವು ಕಡೆ ಅತಿವೃಷ್ಟಿಯಿಂದ ಹಾಗೂ ಅನಾವೃಷ್ಟಿಯಿಂದ ಇನ್ನಿತರ ಬೆಳೆಗಳು ನೇಟೆ ರೋಗದಿಂದ ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿರುತ್ತವೆ ಸರ್ಕಾರ ಈ ವಿಷಯದ ಕುರಿತು ರಾಜ್ಯದ ರೈತರ ಬಗ್ಗೆ ಕಾಳಜಿ ವಹಿಸಿ. ರೈತರ ಬೆಳೆದ ಬೆಳೆಯನ್ನು ಸಮೀಕ್ಷೆ ಮಾಡಿ. ರಾಜ್ಯದ ರೈತರಿಗೆ ಬೆಳೆ ಪರಿಹಾರ ಧನ ಬಿಡುಗಡೆ ಮಾಡಬೇಕು ಯಾಕೆಂದರೆ ಹಲವಾರು ವರ್ಷಗಳಿಂದ ರಾಜ್ಯದ ರೈತರು ಬರಗಾಲದ ಹೊಡೆತಕ್ಕೆ ಸಿಕ್ಕು ಸಾಲ ಸೋಲ ಮಾಡಿಕೊಂಡು ರಾಜ್ಯದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಕಾರಣ ಈ ಕೂಡಲೇ ಜಿಲ್ಲಾಡಳಿತಕ್ಕೆ ಸರ್ಕಾರ ಬೆಳೆ ಪರಿಹಾರ ಧನವನ್ನೂ ಹಾಗೂ ಬೆಳೆ ಇನ್ಸೂರೆನ್ಸ್ ಹಣವನ್ನು ಬಿಡುಗಡೆಗೊಳಿಸಬೇಕು ಎಂದು ಯಡ್ರಾಮಿ ತಾಲೂಕ ಅಹಿಂದ ಸಂಘಟನೆಯ ತಾಲೂಕ ಅಧ್ಯಕ್ಷರಾದ ಶಿವಶಂಕರ್ ಗುಂಡುಗುರ್ತಿ ಬಳಬಟ್ಟಿಯವರು ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ 

 ವರದಿ ಜೆಟ್ಟಪ್ಪ ಎಸ್ ಪೂಜಾರಿ