ಸಿದ್ದಲಿಂಗ ಸ್ವಾಮೀಜಿ ಅವರಿಗೆ ಕೊಲೆ ಸಂಚು. ರಾಜು ಕಪನೂರ ಬಂಧನಕ್ಕೆ ಮಲ್ಕಣ್ಣ ಹಿರೇ ಪೂಜಾರಿ ಗೃಹ ಮಂತ್ರಿಗಳಿಗೆ ಮನವಿ
ಸಿದ್ದಲಿಂಗ ಸ್ವಾಮೀಜಿ ಅವರಿಗೆ ಕೊಲೆ ಸಂಚು. ರಾಜು ಕಪನೂರ ಬಂಧನಕ್ಕೆ ಮಲ್ಕಣ್ಣ ಹಿರೇ ಪೂಜಾರಿ ಗೃಹ ಮಂತ್ರಿಗಳಿಗೆ ಮನವಿ
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸಿದ್ದಲಿಂಗ್ ಸ್ವಾಮೀಜಿ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಕೊಲೆ ಸಂಚುರೂಪಿಸಿದ ಆರೋಪಿಗಳನ್ನು ಕೂಡಲೇ
ಬಂದಿಸಬೇಕೆಂದು ಆಗ್ರಹಿಸಿ ಕಲ್ಬುರ್ಗಿ ಜಿಲ್ಲಾಧಿಕಾರಿಗಳ ಕಾರ್ಯಲಯದ ಮುಖಾಂತರ ಜೇವರ್ಗಿ ತಾಲೂಕ ಶ್ರೀರಾಮ ಸೇನಾ ಸಂಘಟನೆಯ ತಾಲೂಕ ಅಧ್ಯಕ್ಷರಾದ ಮಲ್ಕಣ್ಣ ಹಿರೇ ಪೂಜಾರಿ ಅವರು ಶ್ರೀ ರಾಮ ಸೇನೆಯ ಕಾರ್ಯಕರ್ತರೊಂದಿಗೆ ಮನವಿ ಪತ್ರ ಸಲ್ಲಿಸಿದರು ಅದೇ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪಂಚಾಳ ಅವರ ಮರಣ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ ಖರ್ಗೆ ಅವರ ಆಪ್ತ ರಾಜು ಕಪನುರ್ ಎನ್ನುವ ವ್ಯಕ್ತಿ ಸಿದ್ದಲಿಂಗ ಸ್ವಾಮೀಜಿಯವರ ಕೊಲೆ ಯೋಜನೆ ಮಾಡುವುದರ ಕುರಿತು ಉಲ್ಲೇಖವಾದ ಕಾರಣ ಕೂಡಲೇ ಈ ಆರೋಪಿಗಳನ್ನು ಬಂಧನ ಮಾಡಬೇಕು ಹಿಂದೂ ಹೋರಾಟಗಾರ ಸಿದ್ದಲಿಂಗ ಸ್ವಾಮೀಜಿಯವರಿಗೆ ಕಾನೂನಿನ ಭದ್ರತೆ ಒದಗಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು
ವರದಿ ಜೇಟ್ಟೆಪ್ಪ ಎಸ್ ಪೂಜಾರಿ