ಮತಗಳ್ಳತನ ವಿರೋಧಿ ಜನಜಾಗೃತಿ ಹೋರಾಟಕ್ಕೆ ಕಲಬುರಗಿಯಲ್ಲಿ ಬೆಂಬಲ

ಮತಗಳ್ಳತನ ವಿರೋಧಿ ಜನಜಾಗೃತಿ ಹೋರಾಟಕ್ಕೆ ಕಲಬುರಗಿಯಲ್ಲಿ ಬೆಂಬಲ

ಮತಗಳ್ಳತನ ವಿರೋಧಿ ಜನಜಾಗೃತಿ ಹೋರಾಟಕ್ಕೆ ಕಲಬುರಗಿಯಲ್ಲಿ ಬೆಂಬಲ

ಕಲಬುರಗಿ:ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ *ಮತಗಳ್ಳತನ ವಿರೋಧಿ ಜನಜಾಗೃತಿ ಹೋರಾಟ*ಕ್ಕೆ ಬೆಂಬಲವಾಗಿ, ಕಲಬುರಗಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರ ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ ಮೇಯರ್ ವರ್ಷಾ ರಾಜೀವ ಜಾನೆ, ಮುಖಂಡರಾದ ರಾಜಗೋಪಾಲರೆಡ್ಡಿ, ಲಾಲ ಅಹ್ಮದ್ ಬಾಂಬೆಸೇಠ, ಶಕೀಲ ಸರಡಗಿ, ಶಿವಾನಂದ ಹೊನಗುಂಟಿ, ಪರಶುರಾಮ ನಾಟೀಕಾರ, ದಶರಥಬಾಬು ವಂಟಿ, ರೇಣುಕಾ ಸಿಂಗೆ, ವಾಣಿಶ್ರೀ ಸಗರಕರ್ ಸೇರಿದಂತೆ ಅನೇಕ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಪಾಲ್ಗೊಂಡರು.

ಈ ವೇಳೆ ನಾಯಕರು ಮಾತನಾಡಿ, ಜನರ ಮತಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರ ಹೋರಾಟ ಮಹತ್ವದ್ದಾಗಿದೆ ಎಂದು ಹೇಳಿದರು. ಜನತೆಯ ಸಹಕಾರದ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಕೋರಿದರು.