ಕಲಬುರಗಿಯಲ್ಲಿ ಮಹಿಳಾ ನೌಕರರ ಹಿತಕ್ಕಾಗಿ ವಿಶ್ರಾಂತಿ ಕೋಣೆ ಹಾಗೂ ಗ್ರಂಥಾಲಯ ಉದ್ಘಾಟಿಸಿದ-ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿಯಲ್ಲಿ ಮಹಿಳಾ ನೌಕರರ ಹಿತಕ್ಕಾಗಿ ವಿಶ್ರಾಂತಿ ಕೋಣೆ ಹಾಗೂ ಗ್ರಂಥಾಲಯ ಉದ್ಘಾಟಿಸಿದ- ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಉದ್ಯೋಗದಲ್ಲಿ ಮಹಿಳೆಯರು ಎದುರಿಸುವ ಸವಾಲು ಅನೇಕ. ಉದ್ಯೋಗಸ್ಥ ಮಹಿಳೆಯರ ಹಿತದೃಷ್ಟಿಯಿಂದ ಸರ್ಕಾರ ಹೆಚ್ಚಿನ ಗಮನ ನೀಡಿ ಪ್ರೋತ್ಸಾಹಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಿರ್ಮಿಸಲಾದ ಮಹಿಳಾ ನೌಕರರ ವಿಶ್ರಾಂತಿ ಕೋಣೆ ಹಾಗೂ ಸಾರ್ವಜನಿಕ ಗ್ರಂಥಾಲಯವನ್ನು ಅವರು ಉದ್ಘಾಟಿಸಿದರು.
ಮಹಿಳಾ ನೌಕರರಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ಬಾರಿಗೆ ವಿಶ್ರಾಂತಿ ಕೋಣೆ ನಿರ್ಮಾಣವಾಗಿದ್ದು, ಈ ಕಾರ್ಯ ಜಿಲ್ಲಾಡಳಿತದ ಶ್ಲಾಘನೀಯ ಹೆಜ್ಜೆಯಾಗಿದೆ. ವಿಶೇಷವಾಗಿ ತಾಯಂದಿರಿಗೆ ಮಗುವಿಗೆ ಹಾಲುಣಿಸಲು ಪ್ರತ್ಯೇಕ ವಿಭಾಗವನ್ನು ಒದಗಿಸಿರುವುದು ಗಮನಾರ್ಹವಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, “ಪ್ರತಿಯೊಬ್ಬರೂ ಗ್ರಂಥಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಜ್ಞಾನಸಂಪತ್ತಿನ ಪ್ರಯೋಜನ ಪಡೆಯಬೇಕು. ಗ್ರಂಥಾಲಯಗಳು ಜ್ಞಾನವಿಕಾಸದ ತಾಣವಾಗಿದ್ದು, ಎಲ್ಲರೂ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಮಹಿಳಾ ನೌಕರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
