ವಾಡಿ ಯಲ್ಲಿ 68ನೇ ಮಹಾಪರಿನಿರ್ವಾಣ ದಿನ ಆಚರಣೆ
ವಾಡಿ ಯಲ್ಲಿ 68ನೇ ಮಹಾಪರಿನಿರ್ವಾಣ ದಿನ ಆಚರಣೆ
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೆಬ್ ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಮುಖಂಡರುಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಭಾರತ ರತ್ನ ಡಾ ಅಂಬೇಡ್ಕರ್ ಅವರ ಆಲೋಚನೆ ಮತ್ತು ಅಭಿಪ್ರಾಯಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ. ನಮ್ಮ ದೇಶದ ಬಗ್ಗೆ ಇಟ್ಟಿದ ಅವರ ಕನಸನ್ನು ಈಡೇರಿಸಲು ನಮ್ಮ ಬದುಕು ಮುಡುಪಾಗಿಡುವುದು ನಮ್ಮ ಕರ್ತವ್ಯ ಎಂದರು.
ಡಾ ಬಿ ಆರ್ ಅಂಬೇಡ್ಕರ್ ಅವರು ನಿಧನ ಹೊಂದಿದ ದಿನ ಪ್ರತಿವರ್ಷ ಡಿಸೆಂಬರ್ 6ನ್ನು ಮಹಾಪರಿನಿರ್ವಾಣ ದಿವಸವೆಂದು ಆಚರಿಸುತ್ತೇವೆ. ಭಾರತ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅವರು ಒಬ್ಬ ಖ್ಯಾತ ನ್ಯಾಯವಾದಿಗಳು,ಆರ್ಥಿಕ ತಜ್ಞರು, ರಾಜಕೀಯ ಮತ್ತು ಸಮಾಜ ಸುಧಾರಕರಾಗಿ ಕೂಡ ಗುರುತಿಸಿಕೊಂಡಿದ್ದರು, ದೇಶದಲ್ಲಿ ಸಮಾನತೆಗಾಗಿ, ಮಹಿಳೆಯರ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು.
ಶೋಷಿತರ ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾಮಾಜಿಕ ಸಾಮರಸ್ಯದ ಅಮರ ಹೋರಾಟಗಾರರಾಗಿದ್ದಾರೆ.
ಅವರ ಸ್ವಾಭಿಮಾನ
ಹೋರಾಟದ ಜೀವನದಿಂದ ಇಂದು ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ,ಅವರ ತತ್ವ ಆದರ್ಶಗಳೊಂದಿಗೆ ನಮ್ಮ ಪ್ರಧಾನಿ ಮೋದಿಜಿ ದೇಶವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಸಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ರಾಜು ಮುಕ್ಕಣ್ಣ,ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ,
ನಗರ ಎಸ್ ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ,ಮುಖಂಡರಾದ ರಮೇಶ ಕಾರಬಾರಿ, ಭೀಮರಾವ ದೊರೆ, ಕಿಶನ ಜಾಧವ,ಶಿವಶಂಕರ ಕಾಶೆಟ್ಟಿ, ಅಂಬದಾಸ ಜಾಧವ,ಆನಂದ ಇಂಗಳಗಿ, ರಿಚರ್ಡ್ ಮಾರೆಡ್ಡಿ,ಪ್ರೇಮ ರಾಠೊಡ,
ದತ್ತಾ ಖೈರೆ,ಯಂಕಮ್ಮ ಗೌಡಗಾಂವ,ಉಮಾಭಾಯಿ ಗೌಳಿ ಸೇರಿದಂತೆ ಇತರರು ಇದ್ದರು.