ಕೆಂಭಾವಿ ಪಟ್ಟಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ 68ನೇಯ ಮಹಾಪರಿ ನಿರ್ವಾಣ ದಿವಸ್ ಆಚರಣೆ

ಕೆಂಭಾವಿ ಪಟ್ಟಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ  68ನೇಯ ಮಹಾಪರಿ ನಿರ್ವಾಣ ದಿವಸ್ ಆಚರಣೆ

ಕೆಂಭಾವಿ ಪಟ್ಟಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ 68ನೇಯ ಮಹಾಪರಿ ನಿರ್ವಾಣ ದಿವಸ್ ಆಚರಣೆ

ಕೆಂಭಾವಿ :ಮಹಾನಾಯಕ ಡಾ!!ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನವನ್ನು ಮಹಾನಾಯಕ ಅಂಬೇಡ್ಕರ್ ವೃತ್ತದಲ್ಲಿ ಆಚರಣೆಯನ್ನು ಮಾಡಲಾಯಿತು.

      ಈ ಸಂದರ್ಭದಲ್ಲಿ ಮಹಾನಾಯಕ ಭೀಮರಾವ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮತ್ತು ಜ್ಯೋತಿ ಬೆಳಗುವುದರ ಮುಖಾಂತರ ಗೌರವ ನಮನವನ್ನು ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ನಿರೀಕ್ಷಕರು ರಾಜಸಾಬ್ ಅವ್ರು ಮಾತನಾಡಿದರು ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಭೀಮ್ ರಾವ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ. ಡಿಸೆಂಬರ್ 6, 1956ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಹತ್ಯಾಗ ಮಾಡಿದರು.

    ಈ ಸಂದರ್ಭದಲ್ಲಿ ಭಾರತರತ್ನ ಡಾ.ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನಶಿಲ್ಪಿ ಮಾತ್ರವಲ್ಲದೇ, ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಅಂಬೇಡ್ಕರ್ ಅವರು ಇಲ್ಲದೇ ಇರುತ್ತಿದ್ದರೆ ದೇಶದಲ್ಲಿ ಇಂದಿಗೂ ಸಹಸ್ರಾರು ಮಂದಿ ನಿತ್ಯ ನರಕವನ್ನು ಅನುಭವಿಸುತ್ತಿದ್ದರು ಅನ್ನೋದು ವಾಸ್ತವ ಸತ್ಯ ಎಂದು ಹೇಳಿದ್ದರು ಮತ್ತು ಶಿವಶರಣಪ್ಪ ವಾಡಿ ಅವರು ಸಹ ಅಂಬೇಡ್ಕರ್ ಅನ್ನೋದು ಒಂದು ವಿಶ್ವವಿದ್ಯಾಲಯವಿದ್ದಂತೆ ಪುಟಗಳನ್ನು ತಿರುವಿ ಹೋದಂತೆ ಹೊಸ ಹೊಸ ವಿಚಾರಗಳು ತಿಳಿದುಕೊಳ್ಳಲೇಬೇಕಾದ ಕಟು ಸತ್ಯಗಳು, ಬದುಕಿಗೆ ಪ್ರೇರಣೆ ತುಂಬುವ ಘಟನೆಗಳು ಸಿಗುತ್ತವೆ ನಾನು ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದಲ್ಲಿ ಒಂದು ಸಮಾಜದ ಪ್ರಗತಿಯನ್ನು ಅಳೆಯ ಬಯಸುತ್ತೇನೆ’ ಎಂದು ಅಂಬೇಡ್ಕರ್ ಹೇಳಿದ್ದರು. ಈ ಸಂದರ್ಭದಲ್ಲಿ ಭಾಗವಹಿಸಿದವರು ಹರಿಚೇಂದ್ರ ಕಟ್ಟಿಮನಿ,ಶಿವಶಣಪ್ಪ ಮಾಳಳ್ಳಿಕರ್,ಲಾಲಪ್ಪ ಆಲ್ಹಾಳ,ಪಂಡಲಿಕ ಬಸರಿಗಿಡ,ಪರಶುರಾಮ್ ಬಳಬಟ್ಟಿ,ಅರುಣ್ ಚವಾಣ,ಪ್ರಕಾಶ್ ಬಗಲಿ,ಮುಜೆಜ್ ತಾಳಿಕೋಟಿ,ಭೀಮಣ್ಣ ದೊಡ್ಡಮನಿ,ಮರೆಪ್ಪ ಶಹಪುರ್,ಮೊನೇಶ್ ಮುಂಡಸ,ಕಾಶಿನಾಥಗೌಡ,ವ ಲಿಸಾಬ,ಮಲ್ಲಿಕಾರ್ಜುನ ಕರಡ್ಕಲ್,ಮಾಂತೇಶ ಮಾಳಳ್ಳಿಕರ್,ಬಸವಣ್ಣಪ್ಪ ಆರ್ ಮಾಳಳ್ಳಿಕರ್,ಅಂಬರೀಶ್ ಬೊಮ್ಮನಹಳ್ಳಿ,ಸುರೇಶ ಮಾಳಳ್ಳಿಕರ್,ಲಕ್ಷ್ಮಣ ಬಸರಿಗಿಡ,ಜೇಟ್ಟೆಪ್ಪ ಮುಷ್ಕಳ್ಳಿ,ಯಲಪ್ಪ ಬಾವಿಮನಿ,ಭೀಮಶಂಕರ್ ಸೋಮನಾಳಕರ,ರವಿಚಂದ್ರ ಹೇಮನೂರ,ಪರಶುರಾಮ್ ಮಾಳಳ್ಳಿಕರ್,ಮಲ್ಲಿಕಾರ್ಜುನ್ ಕಟ್ಟಿಮನಿ,ಲಕ್ಷ್ಮಣ ಭಾವಿಮನಿ,ಲಾಲಪ್ಪ ಮಾಳಳ್ಳಿಕರ್,ಪರಶುರಾಮ್ ಬಾಡ್ನಾಳ,ಸಿದ್ದು ಬಮ್ಮನಹಳ್ಳಿ,ಜುಮ್ಮಾಣ್ಣ ಕಟ್ಟಿಮನಿ,ಪ್ರಕಾಶ್ ಮಾಳಳ್ಳಿಕರ್,ಪರಶುರಾಮ್ ಕಟ್ಟಿಮನಿ,ಕೃಷ್ಣ ಪತ್ಯೆಪುರ,ಇನ್ನೂ ಅನೇಕ ಜನರು ಇದ್ದರು.

ವರದಿ ಜೆಟ್ಟೆಪ್ಪ ಎಸ ಪೂಜಾರಿ