ಸಾಮಾಜಿಕ ನ್ಯಾಯದ ರೂವಾರಿ ದೇವರಾಜ ಅರಸು
ಸಾಮಾಜಿಕ ನ್ಯಾಯದ ರೂವಾರಿ ದೇವರಾಜ ಅರಸು
ಆಳಂದ: ಭೂಸುಧಾರಣೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಡಿ.ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ರೂವಾರಿ ಯಾದರು ಎಂದು ಉಪನ್ಯಾಸಕ ಸಂಜಯ ಎಸ್ ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು
ಆಡಳಿತ ಭವನದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು 109ನೇ ಜಯಂತಿಯಲ್ಲಿ ಮಾತನಾಡಿದರು.
ಜೀತ ಪದ್ದತಿ ನಿರ್ಮೂಲನೆ, ಮೇಲೆ ಹೋರುವ ಪದ್ಧತಿ ರದ್ದು ಸೇರಿದಂತೆ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೈಗೊಂಡ ಪ್ರಗತಿಪರ ಕಾಯಿದೆಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಿದ್ದು, ವಿಶೇಷವಾಗಿ ಹಿಂದುಳಿದ ವರ್ಗಗಳ ಸಂಘಟನೆಗೆ ಶಕ್ತಿ ತುಂಬುವ ಮೂಲಕ ಸಣ್ಣ ಸಮುದಾಯ ಜಾಗೃತಿಗೆ ಅಡಿಪಾಯ ಹಾಕಿದರು ಎಂದರು.
ತಹಶೀಲ್ದಾರ್ ಅಣ್ಣಾರಾಯ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ ಸಾಮಾಜಿಕ ಬದಲಾವಣೆ ಹರಿಕಾರರಾದ ಡಿ . ದೇವರಾಜ ಅರಸು ಅವರ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ತಮ್ಮದೆಯಾದ ಕೊಡುಗೆ ನೀಡಿದರು, ವಿಶೇಷವಾಗಿ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸಾಧನೆ ಮಾಡಿದರೆ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯವಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಜಿ ಹಳ್ಳದ, ಬಿ.ಜಿ.ಕುದುರಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶರಣಬಸಪ್ಪ ಪಾಟೀಲ, ತಾಪಂ ಮಾಜಿ ಸದಸ್ಯ ಸಾತಲಿಂಗಪ್ಪ ಪಾಟೀಲ, ದಯಾನಂದ ಶೇರಿಕಾರ, ಪಂಡಿತ ಖಾನಾಪುರೆ, ಅಣವೀರಪ್ಪ ಪತ್ತಾರ, ಪ್ರಕಾಶ್, ವಿಜಯಕುಮಾರ ಬಿರಾದಾರ, ಗಜಾನಂದ ಬುಕ್ಕಾ, ಸಿದ್ದಪ್ಪಾ ಪುಜಾರಿ, ಕವಿತಾ ಬಿರಾದಾರ, ಬಸಮ್ಮ ಸಜ್ಜನ, ಸುನೀತಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ವಸತಿ ನಿಲಯದಲ್ಲಿ ಇರುವ ವಿದ್ಯಾರ್ಥಿಗಳಿಗಾಗಿ ಭಾಷಣ, ಗಾಯನ, ಪ್ರಬಂಧ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಲ್ಯಾಣಿ ಬಿಜ್ಜರಗಿ ನಿರೂಪಿಸಿದರು, ಅಣವೀರಪ್ಪ ಪತ್ತಾರ ಸ್ವಾಗತಿಸಿದರು.