ಹೊಳಸಮುದ್ರ: ಒಳ್ಳೆ ಭವಿಷ್ಯ ರೂಪಿಸಲು ಶಿಕ್ಷಣ ಕಡ್ಡಾಯ ಬೇಕು: ದೇವಿದಾಸ ಮುಸ್ಕೆ

ಹೊಳಸಮುದ್ರ: ಒಳ್ಳೆ ಭವಿಷ್ಯ ರೂಪಿಸಲು ಶಿಕ್ಷಣ ಕಡ್ಡಾಯ ಬೇಕು:  ದೇವಿದಾಸ ಮುಸ್ಕೆ

        ಕಮಲನಗರ:ತಾಲೂಕಿನ ಹೊಳೆಸಮುದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದು ವಾರ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಜಿಲ್ಲಾ ಪಂಚಾಯತಿ ಬೀದರ ಹಾಗೂ ಗ್ರಾಮ ಪಂಚಾಯತ ಹೊಳೆಸಮುದ್ರ ಸಂಯುಕ್ತಾಶ್ರಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಸಾಮಾಜಿಕ ಪರಿಶೋಧನಾ ವತಿಯಿಂದ ಶಾಲಾ ಸಭೆ ಹಮ್ಮಿಕೊಳ್ಳಲಾಯಿತು.

  ಹೊಳಸಮುದ್ರ || ಒಳ್ಳೆ ಭವಿಷ್ಯ ರೂಪಿಸಲು ಶಿಕ್ಷಣ ಕಡ್ಡಾಯ ಬೇಕು: ದೇವಿದಾಸ ಮುಸ್ಕೆ

         ಈ ಸಭೆಯ ಅಧ್ಯಕ್ಷ ಸ್ಥಾನವನ್ನು ದೇವಿದಾಸ್ ಕದಂ ವಹಿಸಿಕೊಂಡಿರುತ್ತಾರೆ ಮತ್ತು ಸಭೆಯಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ದೇವದಾಸ್ ಮುಸ್ಕೆ ಮಾತನಾಡಿ ಕಲಿಕ ಪರಿಣಾಮ ಮಾಡಲು ಮತ್ತು ಫಲಿತಾಂಶ ಹೆಚ್ಚಾಗಲು ಶಿಕ್ಷಕರ ಮುಂದಾಗಬೇಕೆಂದು ನುಡಿದರು. ಗುಣಮಟ್ಟದ ಶಿಕ್ಷಣ ಒದಗಿಸುವುದು ಮತ್ತು ವಿದ್ಯಾರ್ಥಿಗಳ ಕಲಿಕೆಯಿಂದ ಮಾತ್ರ ಎಂದು ಹೇಳಿದರು. ಅದಕ್ಕೆ ಶಿಕ್ಷಕರು ಮುಂದಾಗಬೇಕು ಶಿಕ್ಷಣದಲ್ಲಿ ಸಾಮಾಜಿಕ ಅಸಾಮಾನತೆ ಮತ್ತು ಲಿಂಗ ತಾರತಮ್ಯ ಹೋಗಲಾಡಿಸಲು ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಶಿಕ್ಷಕ ಬೇಕು.ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆ 2009ರ ಅನುಷ್ಠಾನದಲ್ಲಿ ರಾಜ್ಯವನ್ನು ಬೆಂಬಲಿಸುವುದು ಈ ಸಮಿತಿಯು ಪಾತ್ರ ವಹಿಸುತ್ತದೆಂದು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಎಸ್ ಎಚ್ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಮಾಧಪ್ಪ ಮಡಿವಾಳ(ಸಿ ಆರ್ ಸಿ) ಸರ್ಕಾರಿ ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಶಾಂತ್ ಬಿರಾದಾರ್ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಪ್ರತಿಭಾ ಸೂರ್ಯವಂಶಿ ಗುರುಗಳಾದ ಶಾಲಿವನ್ ಗೋಪಾಳ ಸರ್ ವಿಜಯಕುಮಾರ್ ನೂದನುರೆ ಸಿದ್ರಾಮ್ ರಾಜೇಶ್ರೀ ನಂದ ತಾಯಿ ಅನುರಾಧ ಹಾಗೂ ಶಾಲಾ ಮಕ್ಕಳು ಪಾಲಕರಾದ ಜಗದೀಶ್ ಸುಜಿತ್ ಸೂರ್ಯವಂಶಿ ಪಪ್ಪು ಹುಣಸೂರು ಬಾಳು ಬಿರಾದಾರ್ ಈ ಸಭೆಗೆ ಪಾಲಕರು ಗ್ರಾಮಸ್ಥರು ಹಾಜರಿದ್ದರು.