ನಾಗಯ್ಯಸ್ವಾಮಿ ಅಲ್ಲೂರ ಸ್ಮರಣಾರ್ಥ ಪ್ರಶಸ್ತಿ ಸ್ಥಾಪನೆಗೆ ಪತ್ರಕರ್ತ ಸಂಘದ ಅಧ್ಯಕ್ಷ ಯಡ್ರಾಮಿ ನಿರ್ಧಾರ

ನಾಗಯ್ಯಸ್ವಾಮಿ ಅಲ್ಲೂರ ಸ್ಮರಣಾರ್ಥ ಪ್ರಶಸ್ತಿ ಸ್ಥಾಪನೆಗೆ ಪತ್ರಕರ್ತ ಸಂಘದ ಅಧ್ಯಕ್ಷ ಯಡ್ರಾಮಿ ನಿರ್ಧಾರ
ಚಿತ್ತಾಪುರ, ಎಪ್ರಿಲ್ 6: ಚಿತ್ತಾಪುರ ತಾಲೂಕಿನಲ್ಲಿರುವ ಹೆಸರಾಂತ ಪತ್ರಕರ್ತ ಮತ್ತು ಸಾಹಿತಿ ನಾಗಯ್ಯಸ್ವಾಮಿ ಅಲ್ಲೂರ ಅವರ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಸಾಮಾಜಿಕ ಹಿತೈಷಿಗಳು ಹಾಗೂ ಪತ್ರಕರ್ತರು ಭಾಗವಹಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪತ್ರಕರ್ತ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಅವರು ಮಾತನಾಡುತ್ತಾ, "ನಾಗಯ್ಯಸ್ವಾಮಿ ಅಲ್ಲೂರ ಅವರ ಸಾಧನೆಯು ಅಮೂಲ್ಯ. ಅವರ ಕೊಡುಗೆಯನ್ನು ನೆನಪಿಸಲು ಅವರ ಹೆಸರಿನಲ್ಲಿ ವಿಶೇಷ ಪ್ರಶಸ್ತಿಯನ್ನು ಸ್ಥಾಪಿಸಲು ಪತ್ರಕರ್ತ ಸಂಘ ಮುಂದಾಗಿದೆ" ಎಂದು ಹೇಳಿದರು.
ಅಂತ್ಯಕ್ರಿಯೆಯಲ್ಲಿ ಚಿತ್ತಾಪುರ ಪೂಜ್ಯರು, ಮಳಖೇಡ ಪೂಜ್ಯರು, ನಾಗರೆಡ್ಡಿ ಪಾಟೀಲ್, ಭೀಮಣ್ಣ ಸಾಲಿ, ಚಂದ್ರಶೇಖರ್ ಅಂವಟಿ, ಸಿದ್ದರಾಮ ಹೊನ್ಕಲ್, ಬಿ.ಎಚ್. ನಿರಗುಡಿ, ಶರಣಗೌಡ ಪಾಳಾ, ದೇವೇಂದ್ರ ಆವಂಟಿ, ಮಹಿಪಾಲರೆಡ್ಡಿ ಮುನ್ನೂರು, ಸುಭಾಷ್ ಬಣಗಾರ, ನಾಗಲಿಂಗಯ್ಯ ಮಠಪತಿ ಮತ್ತು ನೂರಾರು ಜನ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ನಾಗಯ್ಯಸ್ವಾಮಿ ಅಲ್ಲೂರ ಅವರು ತಮ್ಮ ಜೀವನದ ಅತಿಹೆಚ್ಚು ಕಾಲವನ್ನು ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದವರು. ಅವರ ಅಗಲಿಕೆಯು ಜಿಲ್ಲೆಗೆ ಅಪಾರ ನಷ್ಟವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು