ಕಾಡುಪೀರೆ ಅಂತಿರುವ ಮಡಾ ಹೈಬ್ರಿಡ್ ಕಾಯಿ
ಕಾಡುಪೀರೆ ಅಂತಿರುವ ಮಡಾ ಹೈಬ್ರಿಡ್ ಕಾಯಿ
ಕಾಡು ಪೀರೆ,ಕಾಟು ಪೀರೆ ಎಂದೆಲ್ಲಾ ಹೆಸರಿನಿಂದ ಕಾಡಿನಲ್ಲಿ ಬೆಳೆಯುತ್ತಿದ್ದ ಈ ತರಕಾರಿ ಇದೀಗ ಮಡಾ ಹಾಗಲಕಾಯಿ ಹೈಬ್ರಿಡ್ ತರಕಾರಿ ಇದೀಗ ಮಾರುಕಟ್ಟೆಗೆ ಬಂದಿದೆ. ಈ ಬಳ್ಳಿ ತರಕಾರಿಯನ್ನು ಇಂಗ್ಲೀಷ್ ನಲ್ಲಿ spiny gourd ಎಂದು ಕರೆಯುತ್ತಾರೆ ,ಇನ್ನೊಂದು ಹೆಸರು kantola(ಕಂಟೋಲ), ಎಂದುಹೆಸರಿದೆ..ಬಾಂಗ್ಲಾದಲ್ಲಿ ಕಾಕ್ರೊಲ್ ಎಂದು ಕರೆಯುತ್ತಾರೆ.
ಇದರಲ್ಲಿ ಔಷದೀಯ ಗುಣಗಳು ಹೇರಳವಾಗಿದೆ ವಿಟಮಿನ್ ಸಿ ದೇಹವನ್ನು ಸೋಂಕುಗಳಿಂದ ದೂರವಿಡುತ್ತದೆ ಫೈಬರ್ ,ವಿಟಮಿನ್ ,ಖನಿಜ ಮತ್ತು ಸಮೃದ್ಧವಾದ ಪೌಷ್ಟಿಕ ಪೋಷಕಾಂಶಗಳಿಂದ ಕೂಡಿದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಸಕ್ಕತ್ ಟೇಸ್ಟಿ ಸೂಪರ್ ಟೇಸ್ಟಿ ಪಲ್ಯ, ಸಾಂಬಾರ್, ಮೇಲಾರ (ಹುಳಿ) ಮೆಣಸಿನ ಕಾಯಿ, ಎಳೆಯದಾದರೆ ಪೋಡಿ, ಬಜ್ಜಿ,ಉತ್ತಮ ಆಹಾರ ಉತ್ತಮ ಜೀವನಕ್ಕಾಗಿದೆ.
ಮಡಿಕೇರಿಯಲ್ಲಿ ಇದು ಹೆಚ್ಚಾಗಿ ಇದೀಗ ಕಂಡು ಬರುತ್ತದೆ? ಘಟ್ಟದಲ್ಲಿ ಹೆಚ್ಚು ಬೆಳೆಯುತ್ತದೆ ಗಂಡು-ಹೆಣ್ಣು ಹೂ ಬೇರೆ ಬೇರೆ ಬಳ್ಳಿಯಲ್ಲಿ ಇರುತ್ತದೆ . ಗಡ್ಡೆಗಳು ಆಗುತ್ತವೆ ಮತ್ತೆ ಇದರಲ್ಲಿಯೇ ಗಿಡಗಳು ಹುಟ್ಟಿ ಬರುತ್ತವೆ.ಆಗಸ್ಟ್ ,ಸೆಪ್ಟೆಂಬರ್, ಅಕ್ಟೋಬರ್ ಮೂರು ತಿಂಗಳು ಹೆಚ್ಚು ತರಕಾರಿಗಳು ಆಗುತ್ತವೆ. ನಂತರ ಬಳ್ಳಿ ಒಣಗಿ ಮತ್ತೆ ಮಳೆಗಾಲದಲ್ಲಿ ಗಡ್ಡೆಯಿಂದ ಗಿಡಗಳು ಮೊಳಕೆ ಹೊಡೆದು ಬಳ್ಳಿಯಾಗಿ ಚಪ್ಪರದಲ್ಲಿ ತುಂಬಾ ಆಗುತ್ತದೆ.
ನೆಮ್ಮದಿ ಎಂಬುದು ನಮ್ಮ ಅಂಗೈಯಲ್ಲಿದೆ ಇದರಲ್ಲಿ ತರತರದ ಅಡುಗೆ ವೈವಿಧ್ಯ ರುಚಿ ಹಿಂದಿನ ಕಾಲದಿಂದಲೂ ಕಾಡುಹಾಗಲ ಕಾಡುಪಿರೆಯನ್ನು ಆಯುರ್ವೇದ ಔಷಧವಾಗಿ ಬಳಸುತ್ತಾ ಬಂದಿದ್ದಾರೆ. ತನ್ನೊಳಗೆ ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ಕಾಡುಪಿರೆ ಯನ್ನು ಹಳ್ಳಿಯಲ್ಲಿ ಇದು ಅನೇಕ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಜೊತೆ ಬೀಜವನ್ನು ಕಟುಮ್ ಕುಟುo ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ ಇದೆ.
ಇದು ಆಗುವ ಸಮಯದಲ್ಲಿ ಸಾಲು ಸಾಲು ಹಬ್ಬಗಳು ಹಿನ್ನೆಲೆ ನಾಗರ ಪಂಚಮಿ ,ಶ್ರೀ ಕೃಷ್ಣ ಜನ್ಮಾಷ್ಟಮಿ ,ಚೌತಿ ನವರಾತ್ರಿ, ದೀಪಾವಳಿ ಹೀಗೆ ಹಬ್ಬಗಳ ಸಂದರ್ಭ ತರಕಾರಿಯಾಗಿ ಉಪಯೋಗಕ್ಕೆ ಸಿಗುತ್ತದೆ ಇತ್ತೀಚಿನ ದಿನಗಳಲ್ಲಿ ಸಾವಯವ ಆಹಾರ ಮತ್ತು ಸಾವಯವ ಕೃಷಿಯ ಬಗೆಗೆ ಅತಿ ಹೆಚ್ಚು ಗಮನ ಮತ್ತು ಚರ್ಚೆ ಆಗುತ್ತಿದೆ ಸಾತ್ವಿಕ ಆಹಾರ ಪೂರ್ಣ ಆರೋಗ್ಯ ಸುಖ ಪ್ರೀತಿ ಹೆಚ್ಚುತ್ತದೆ
ಇದೀಗ ಮಾರುಕಟ್ಟೆಯಲ್ಲಿ ಇದರ ಬೆಲೆ 250 ತನಕ ಆಗಿದ್ದು ಕೃಷಿಕರಿಗೆ ಉತ್ತಮ ಲಾಭದಾಯಕ ತರಕಾರಿ ಯಾಗಿದೆ.
ಎಷ್ಟು ಬಗೆ ಬಗೆಯಾಗಿ ವರ್ಣಿಸಲು ವರ್ಣಿಸಿದರು ಸಾಲದು.ಉಪ್ಪು ರುಚಿಗೆ ತಕ್ಕಂತೆ ಇದ್ದರೆ ಸಾಂಬಾರು ಚೆಂದ ಮಾತು ಅವಶ್ಯಕತೆಗೆ ತಕ್ಕಂತೆ ಆಡಿದರೆ ಸಂಬಂಧಗಳು ಅಂದ ಪರಿಮಳ ಸಂಪ್ರದಾಯ ಸಂಪ್ರದಾಯ ಟೇಸ್ಟ್ ಆಹಾರ ಯಾವಾಗಲೂ ಗ್ರೇಟ್.
ಮಡಾ ಹಾಗಲಕಾಯಿಯನ್ನು ಬಂಟ್ವಾಳ ತಾಲೂಕಿನ ಮುಡಿಪು ಸುಬ್ರಮಣ್ಯ ಭಟ್ ಅವರಲ್ಲಿ ಬೆಳೆಸಿದ್ದು ಪ್ರಾರಂಭದಲ್ಲಿ ಮಡಿಕೇರಿಯಿಂದ ಇದರ ಗಡ್ಡೆಯನ್ನು ತಂದು ನೆಟ್ಟು ಬೆಳೆಸಿದಾಗ ಅದರಲ್ಲಿ ಹೆಣ್ಣು ಹೂ ಗಂಡು ಎಂಬ ವಿಭಾಗ ಕಂಡು ಬಂದು ಮತ್ತೆ ಕಾಡು ಪೀರೆಯ ಹೂವನ್ನು ತದನಂತರ ಇದರದ್ದೇ ಗಡ್ಡೆಯನ್ನು ಅಲ್ಲಿಂದ ತಂದು ಜೊತೆಯಲ್ಲಿ ಚಪ್ಪರ ತುಂಬಾ ಕಾಯಿಗಳು ಬೆಳೆಯುತ್ತವೆ.
ಸಗಣಿ ನೀರು ಹಾಕಿದರೆ ಬಳ್ಳಿ ಚೆನ್ನಾಗಿ ಬೆಳೆಯಿತು ಹಬ್ಬುತ್ತದೆ ಗಿಡ ತುಂಬಾ ಕಾಯಿಗಳು ಬೆಳೆಯುತ್ತವೆ ಕಾಡುಪಿರೆಯಲ್ಲಿ ಮೇಲ್ ಫೀಮೇಲ್ ಎಂದು ಬೇರೆ ಬೇರೆ ಹೂಗಳು ಇಲ್ಲ ಒಂದೇ ಬಳ್ಳಿಯಲ್ಲಿ ಆಗುತ್ತವೆ. ಹಾಗಾದರೆ ಹೂವಿನ ದಳಗಳನ್ನು ತೆಗೆದು
ಹಿಂದಗಡೆ ಕಾಯಿಗಳು ಇರುವ ಕೇಸರಿ ಬಾಗ ತಾಗಬೇಕು ಪರಾಗ ಸ್ಪರ್ಶ ಮಾಡ ಬೇಕು ಒಮ್ಮೆ ಮಾಡಿದರೆ ಸಾಕು 15 ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ .ವೈವಿದ್ಯಮಯ ಆರೋಗ್ಯದ ಅಡಿಗೆ ಸವಿಯಲು ಸಿದ್ದ .
ಚಿತ್ರ ಬರಹ: ಕುಮಾರ್ ಪೆರ್ನಾಜೆ ಪುತ್ತೂರು
ಪೆರ್ನಾಜೆ ಮನೆ ಪೆರ್ನಾಜೆ ಅಂಚೆ ಕಾವು ವಯ ಪುತ್ತೂರು ತಾಲೂಕು ದ.ಕ
ಮೋ:9480240643