ಹಿಂದುಗಳು ವೀರಶೈವರಲ್ಲ , ವೀರಶೈವರು ಲಿಂಗಾಯಿತರಲ್ಲ .....? ಪ್ರೊ.ಶಿವರಾಜ ಪಾಟೀಲ
ಹಿಂದುಗಳು ವೀರಶೈವರಲ್ಲ , ವೀರಶೈವರು ಲಿಂಗಾಯಿತರಲ್ಲ .....?ಪ್ರೊ.ಶಿವರಾಜ ಪಾಟೀಲ
ಲಿಂಗಾಯತ ಧರ್ಮ ಸರ್ವತಂತ್ರ ಸ್ವತಂತ್ರ ಧರ್ಮವಾಗಿದೆ ಇದು ಸ್ವತಂತ್ರ ಹಾಗೂ ಸ್ವಾಭಿಮಾನದಿಂದ ಕೂಡಿದ ಧರ್ಮವಾಗಿದೆ ಅನೇಕ ಹೊಸ ಹೊಸ ವಿಚಾರಗಳನ್ನು ಕರಗತ ಮಾಡಿ ಕೊಂಡು ಸ್ವತಂತ್ರ ಧರ್ಮವಾಗಿ ರೂಪುಗೊಂಡಿದೆ ಪ್ರಗತಿಪರ ಚಿಂತನೆಗಳು ಹೋರಾಟದ ದಾರಿಗಳು ಹೊಸ ಹೊಸ ವಿಷಯಗಳ ಆವಿಷ್ಕಾರ ಈ ಧರ್ಮದಲ್ಲಿವೆ ಪರಂಪರೆಯಿಂದ ಬಂದ ಸನಾತನವೆಂದು ಹೇಳಲಾದ ಹಿಂದೂ ಧರ್ಮ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ಮತ್ತು ಅವುಗಳನ್ನು ಸವಾಲಾಗಿ ಸವಾಲಾಗಿ ಸ್ವೀಕರಿಸಿ ನಿಂತ ಧರ್ಮವೇ ಲಿಂಗಾಯತ ಧರ್ಮ ಇಲ್ಲಿ ವರ್ಣಾಶ್ರಮವಿಲ್ಲ ಜಾತಿ ಮತಗಳ ಭೇದವಿಲ್ಲ ಹೆಣ್ಣು ಗಂಡು ಎಂಬ ಭಾವನೆಗಳಿಲ್ಲ ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಎಂಬ ನೀತಿ ಇದೆ ಸಹೋದರತೆ ಸಮಾನತೆ ಪ್ರೀತಿ ಇದೆ ಲಿಂಗಾಯತ ಧರ್ಮ ಪ್ರಗತಿಪರ ಧರ್ಮವೆಂದು ಈ ಧರ್ಮದ ಅನುಯಾಯಿಗಳಿಗೆ ಪ್ರಗತಿಪರ ಚಿಂತಕರೆಂದು ಕರೆಯುತ್ತಾರೆ
ಪರಂಪರೆಯಿಂದ ಬಂದ ಸಂಪ್ರದಾಯಗಳನ್ನು ಧಿಕ್ಕರಿಸಿ ಮೂಡನಂಬಿಕೆಗಳನ್ನು ತಿರಸ್ಕರಿಸಿ ಅಂದ ಶೃದ್ದೆಗಳ ವಿರುದ್ಧ ಹೋರಾಡಿದಂತ ಧರ್ಮವಾಗಿದೆ ಇಲ್ಲಿ ಬಹುದೇವತಾರಾಧನೆ ಇಲ್ಲ ಪೂಜಾರಿ ವ್ಯವಸ್ಥೆ ಇಲ್ಲ ಧರ್ಮದ ದಲಾಲರ ಸಂಖ್ಯೆ ಇಲ್ಲ ನೇರವಾಗಿ ಇಷ್ಟಲಿಂಗವನ್ನು ಪೂಜಿಸುವ ಶ್ರೇಷ್ಠ ಧರ್ಮವಾಗಿದೆ ಇಲ್ಲಿ ನರನು ಹರನಾಗುತ್ತಾನೆ ಅಂಗನು ಲಿಂಗನಾಗುತ್ತಾನೆ ಮಾನವನು ಮಹದೇವನಾಗುತ್ತಾನೆ ಜೀವನು ಶಿವನಾಗುತ್ತಾನೆ ಹೀಗಾಗಿ ಈ ಧರ್ಮ ತನ್ನ ಅನುಭವದ ಬೆಳಕಿನಲ್ಲಿ ಬದುಕು ಎಂದು ಹೇಳುತ್ತದೆ ಸ್ವತಂತ್ರವಾಗಿ ಜೀವಿಸು ಎನ್ನುತ್ತದೆ ಬದಲಿಗೆ ಅವನನ್ನು ಯಾರದೇ ಅನುಯಾಯಿಗಳನ್ನಾಗಿ ಮಾಡಲು ಬಿಡುವುದಿಲ್ಲ ನಿನ್ನ ಅನುಭವದ ಬೆಳಕಿನಲ್ಲಿ ನೀನು ಬಾಳು ನಿನ್ನ ಅರಿವೇ ನಿನಗೆ ಗುರು ಎಂದು ಹೇಳಿದ ಧರ್ಮವಾಗಿದೆ ಸ್ಥಾವರ ಲಿಂಗಗಳನ್ನು ದೂರ ಬಿಟ್ಟು ಬೆಟ್ಟದ ಲಿಂಗಗಳನ್ನು ಬದಿಗಿರಿಸಿ ಕೊರಳಲ್ಲಿ ಕಟ್ಟಿಕೊಂಡ ಶ್ರೇಷ್ಠ ಲಿಂಗವೇ ಪೂಜಿಸು ಎಂದು ಹೇಳುವುದೇ ಲಿಂಗಾಯತ ಧರ್ಮದ ಗುರಿಯಾಗಿದೆ ಮೊದಲು ನಾವು ಗೋಪುರ ಗಡಿಯಾರ ನೋಡುತ್ತಿದ್ದೆವು ನಂತರ ಗೋಡೆ ಮೇಲಿನ ಗಡಿಯಾರ ನೋಡುತ್ತಿದ್ದೆವು ಅನಂತರ ಕೈಗಡಿಯಾರವನ್ನು ನೋಡುವುದನ್ನು ಕಲಿತೆವು ಹಾಗೆ ಬೆಟ್ಟದ ಲಿಂಗಗಳು ಮತ್ತು ದೇವಾಲಯಗಳಲ್ಲಿ ಸ್ಥಾಪನೆಯಾದ ಊರಲಿಂಗಗಳು ಬಿಟ್ಟು ಕೊರಳಲ್ಲಿ ಕಟ್ಟುವ ಇಷ್ಟ ಲಿಂಗವೇ ಶ್ರೇಷ್ಠವಂದು ಹೇಳಿ ಅಂಗದ ಮೇಲೆ ಲಿಂಗವ ಧರಿಸಿರುವುದು ಅತ್ಯಧಿಕಂ ಅತ್ಯಧಿಕಂ ಶಿ ವಾದವ ಎಂದು ಮಗ್ಗೆ ಮಾಯಿ ದೇವರು ಹೇಳಿದ್ದಾರೆ ಕಟ್ಟಿದ ಲಿಂಗವ್ವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಅಡ್ಡ ಬೀಳುವ ಲೊಟ್ಟ ಮೂಳೆಯರನ್ನು ಕಂಡರೆ ಎಡಗಾಲಿನ ಪಾದರಕ್ಷೆಯನ್ನು ತೆಗೆದುಕೊಂಡು ಲಟ ಲಟನೆ ಹೊಡೆಯಂದ ನಮ್ಮ ಅಂಬಿಗರ ಚೌಡಯ್ಯ ಎಂದು ಹೇಳಿದರು ಬಸವ ಣ್ಣನವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕುರಿತು ಹೇಳುವಾಗ ಡಾಕ್ಟರ್ ಬಾಬಾ ಸಾಹೇಬರು ಹೇಳಿದರು ನಾನು ಹಿಂದುವಾಗಿ ಹುಟ್ಟಿರಬಹುದು ಅಸ್ಪೃಶ್ಯ ಕುಟುಂಬದಲ್ಲಿ ಜನಿಸಿರಬಹುದು ಆದರೆ ಹಿಂದೂವಾಗಿ ಸಾಯಲಾರೆ ಎಂದರು ಅದೇ ರೀತಿ ಬಸವಣ್ಣನವರು ಹಿಂದುವಾಗಿ ಜನಿಸಿದರು ಮುಂದಿನ ದಿನಗಳಲ್ಲಿ ಲಿಂಗಾಯತರಾಗಿ ಕೊನೆಗೆ ಲಿಂಗೈಕ್ಯರಾದರು ಈ ಇಬ್ಬರು ಮಾನ್ಯರು ಹಿಂದೂ ಧರ್ಮದಲ್ಲಿ ಹುಟ್ಟಿದರು ಬಸವಣ್ಣ ಶ್ರೇಷ್ಠ ಕುಲದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೂದ್ರ ಕುಲದಲ್ಲಿ ಜನಿಸಿದರು ಇವರಿಬ್ಬರು ಹಿಂದುಗಳಾಗಿದ್ದರು ಮುಂದೆ ಹೊಸ ಪರಿಕಲ್ಪನೆ ಯೊಂದಿಗೆ ಬಸವಣ್ಣನವರು ಲಿಂಗಾಯಿತರಾದರು ಡಾಕ್ಟರ್ ಬಾಬಾ ಸಾಹೇಬರು ಬುದ್ಧಿಷ್ಟರಾದರೂ ಇದು ಬದಲಾವಣೆ ಇಂತಹ ಬದಲಾವಣೆ ತರುವ ನಮ್ಮ ಅನುಭವದ ಬೆಳಕಿನಲ್ಲಿ ನಾವು ಬದುಕುವ ಅನುಭವ ಮಂಟಪವನ್ನು ಕಟ್ಟಿದ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮವಾಗಿದೆ ಅಂಗದ ಮೇಲೆ ಲಿಂಗವನ್ನು ಧರಿಸಿ ದವರೆಲ್ಲರೂ ಲಿಂಗಾಯಿತರೆಂದು ಕೂಡಲಸಂಗಮನಾಥರೆಂದು ಹೇಳುವ ವಿಶಾಲತೆ ಇಲ್ಲಿದೆ ಅನುಭವ ಮಂಟಪ ಒಂದು ಹೊಸ ಪರಿಕಲ್ಪನೆ ನಮ್ಮ ಲೋಕಸಭೆ ವಿಧಾನಸಭೆಗಳಲ್ಲಿ ನಡೆಯುವ ಚರ್ಚೆಯಂತೆ ಇಲ್ಲಿ ಧಾರ್ಮಿಕ ವಿಷಯಗಳನ್ನು ಕುರಿತು ಚರ್ಚಿಸುವ ಇದೊಂದು ಧಾರ್ಮಿಕ ಸಂಸತ್ತಾಗಿದೆ ಇಂತಹ ಸಂಸತ್ತನ್ನು ಭಾರತದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದವರು ವಿಶ್ವಗುರು ಬಸವಣ್ಣನವರು ಇಂತಹ ಬುದ್ಧ ಬಸವ ಅಂಬೇಡ್ಕರ್ರ ವಿಚಾರಧಾರೆಯಲ್ಲಿ ನಡೆಯುವ ಶ್ರೇಷ್ಠ ಸಂಪ್ರದಾಯ ಲಿಂಗಾಯತ ಧರ್ಮದಲ್ಲಿ ಒಳಗೊಂಡಿದೆ ಹಿಂದೂ ವೀರಶೈವ ಲಿಂಗಾಯತ ಈ ಮೂರು ಒಂದಕ್ಕೊಂದು ಸಂಧಿಸುವುದಿಲ್ಲ ಇವು ಪೂರಕವೂ ಅಲ್ಲ ಎಣ್ಣೆ ಸೀಗೆಕಾಯಿ ಹಾಗೆ ಅಂತರ ಕಾಪಾಡಿಕೊಳ್ಳುವ ಧರ್ಮಗಳಾಗಿವೆ ಮೂರು ಒಂದೇ ರೀತಿಯಾಗಿ ಕಂಡರೂ ಒಳನೋಟದಲ್ಲಿ ಮತ್ತು ಅಂತರಂಗದಲ್ಲಿ ತಾತ್ವಿಕ ಸೈದ್ಧಾಂತಿಕ ನಿಲುವುಗಳಿಂದ ಸಂಪೂರ್ಣ ಭಿನ್ನವಾಗಿವೆ ಆದ್ದರಿಂದ ಹಿಂದುಗಳು ವೀರಶೈವರಲ್ಲ ವೀರಶೈವರು ಲಿಂಗಾಯತರಲ್ಲ ಲಿಂಗಾಯತವು ಒಂದು ಸ್ವತಂತ್ರ ಧರ್ಮವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಬಹುದಾಗಿದೆ ಪ್ರೊಫೆಸರ್ ಶಿವರಾಜ್ ಪಾಟೀಲ್, ಚಿಂತಕರು ಕಲಬುರಗಿ