ಶಾಸಕ ಅಲ್ಲಮಪ್ರಭು ಪಾಟೀಲ ಸಚಿವರಾಗಲಿ :ವಳಕೇರಿ
ಶಾಸಕ ಅಲ್ಲಮಪ್ರಭು ಪಾಟೀಲ ಸಚಿವರಾಗಲಿ :ವಳಕೇರಿ
ಕಲಬುರಗಿ. ಡಿ.5- ಕಲಬುರಗಿ ದಕ್ಷಿಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ಮುಂಬರುವ ದಿನಗಳಲ್ಲಿ ಸಚಿವರಾಗಲಿ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಪ್ರಗತಿಪರ ವಿಚಾರವಾದಿ ಪವನಕುಮಾರ ವಳಕೇರಿ ಹೇಳಿದರು. ಕಲಬುರ್ಗಿ ನಗರದ ಹೊರವಲಯದಲ್ಲಿರುವ ಮತೋಶ್ರೀ ಅಂಬುಬಾಯಿ ಅಂಧ ಬಾಲಕರ ಶಾಲೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಪ್ರಸಾದ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ಶಾಸಕ ಅಲ್ಲಮ ಪ್ರಭು ಪಾಟೀಲ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ದುಡಿಯುತ್ತಿದ್ದಾರೆ, ಅವರ ಸೇವೆ ಪ್ರತಿಯೊಬ್ಬರಿಗೂ ಸಿಗಲಿ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರ ಹುಟ್ಟು ಹಬ್ಬದ ನಿಮಿತ್ಯ ಎಲ್ಲಾ ಅಂಧ ಬಾಲಕರಿಗೆ ಸಿಹಿ ತಿಂಡಿ ತಿನಿಸುವುದರೊಂದಿಗೆ ಕಾರ್ಯಕ್ರಮವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಯುವ ಮುಖಂಡ ಅಭಿಷೇಕ್ ಅಲ್ಲಮಪ್ರಭು ಪಾಟೀಲ, ಸುರೇಶ ಹಾದಿಮನಿ ದಲಿತ ಸಂಘರ್ಷ ಸಮಿತಿಯ ಸಂಚಾಲಕರು , ಶಿವರಾಜ ಡಿಗ್ಗಾವಿ ಕಾರ್ಯದರ್ಶಿ ಶ್ರೀ ಗುರು ವಿದ್ಯಾಪೀಠ , ಚಂದ್ರಕಾಂತ ಸೀತನೂರ್ ಅಧ್ಯಕ್ಷರು ಗ್ರಾ ಪಂ ನಂದಿಕುರ್ , ಶರಣು ಸುಬೆದಾರ, ಲಿಂಗರಾಜ್ ಕಣ್ಣಿ ಅಧ್ಯಕ್ಷರು ದಕ್ಷಿಣ ಮತಕ್ಷೇತ್ರ ,ಲಕ್ಷ್ಮಣ ಪೂಜಾರಿ ಕರ್ನಾಟಕ ರಾಜ್ಯ ಕುರುಬ ಸಂಘದ ಕಲ್ಬುರ್ಗಿ ತಾಲೂಕ ಅಧ್ಯಕ್ಷರು , ರವಿಕಿರಣ ವಳಕೇರಿ,ಶರಣಗೌಡ ಕಣ್ಣಿ, ಸಂಸ್ಥೆಯ ಮುಖ್ಯಸ್ಥ ದತ್ತು ಅಗಾರವಾಲ್, ಸೇರಿದಂತೆ ಉಪಸ್ಥಿತರಿದ್ದರು.