ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ಉಚಿತ ತಪಾಸಣಾ ಶಿಬಿರ

ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ಉಚಿತ ತಪಾಸಣಾ ಶಿಬಿರ

ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ಉಚಿತ ತಪಾಸಣಾ ಶಿಬಿರ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗವು ಇಂದು ಚಿಕ್ಕ ಮಕ್ಕಳಿಗಾಗಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿತ್ತು

ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 146 ಮಕ್ಕಳು ಇದರ ಪ್ರಯೋಜನ ಪಡೆದುಕೊಂಡರು.ಸುಮಾರು 50 ಜನ ಮಕ್ಕಳು ನಗರದ ಅಂಧ ಮತ್ತು ಕಿವುಡ,ಮೂಗ ಶಾಲೆಗೆ ಸೇರಿದ ಮಕ್ಕಳಾಗಿದ್ದು ವಿಶೇಷವಾಗಿತ್ತು. 

ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತ , ಮೂತ್ರ ಪರೀಕ್ಷೆ, ಎಕ್ಸರೇ ಅಗತ್ಯವಿರುವ ಸ್ಕ್ಯಾನಿಂಗ್ ಹಾಗೂ ರೋಗಿಗಳಿಗೆ ಬೇಕಾಗಿರುವ ಔಷಧಿಗಳು ಸಂಪೂರ್ಣವಾಗಿ ಉಚಿತವಾಗಿ ಒದಗಿಸಲಾಗಿತ್ತು. ಇದೆ ಸಂದರ್ಭದಲ್ಲಿ ಮಾತನಾಡಿದ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ ರೂಪಾ ಮಂಗಶೆಟ್ಟಿ ನಮ್ಮ ಸಂಸ್ಥೆಯ ಅಧ್ಯಕ್ಷರು ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿಯವರು ಬಸವೇಶ್ವರ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತ ಸೌಲಭ್ಯಗಳನ್ನು ಒದಗಿಸಿ ಸದಾ ನಮಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ನಾವು ಇಂದು ಇಂತಹ ಹಲವಾರು ಶಿಬಿರಗಳನ್ನು ಏರ್ಪಡಿಸುತ್ತಿದ್ದವೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ನಮ್ಮ ಸಂಸ್ಥೆಯ ಅಧ್ಯಕ್ಷರು ನಮಗೆ ಸ್ಪೂರ್ತಿದಾಯಕರಾಗಿದ್ದಾರೆ ಎಂದು ಕೊಂಡಾಡಿದರು.ಮಕ್ಕಳಿಗೆ ಲಾಡು ಮತ್ತು ಸಮೋಸಾ ಹಂಚಲಾಯಿತು. ಈ ಶಿಬಿರದಲ್ಲಿ ಡಾ ಶರಣಗೌಡ ಪಾಟೀಲ್,ಡಾ ವಿ ಕಪ್ಪಿಕೇರಿ, ಡಾ ಎಸ್ ಎಂ ಅವಂತಿ, ಮಕ್ಕಳ ತಜ್ಞ ಡಾ ಶರಣಕುಮಾರ ಕಾಮರಟಗಿ,ಡಾ ಸಂಗೋಳಗಿ,ಡಾ ಬಸವರಾಜ ಪಿ,ಡಾ ಆರುಂಧತಿ,ಡಾ ಅಪೂರ್ವ,ಡಾ ಕಿರಣ್,ಡಾ ಮಿನಾಕ್ಷಿ,ಡಾ ರುದ್ರಾಕ್ಷಿ, ಭಾಗವಹಿಸಿ ಮಕ್ಕಳ ತಪಾಸಣೆಗೆ ಮಾಡಿದರು.