ಸಮಾರೋಪ: ಅನ್ನ ಒಂದುಕ್ಷಣ ಸುಖ ಕೊಟ್ಟರೆ; ವಿದ್ಯೆ ಶಾಶ್ವತ ಸುಖ ನೀಡುವುದು- ರಾಜೇಶ್ವರ ಶ್ರೀಗಳು
ಸಮಾರೋಪ:
ಅನ್ನ ಒಂದುಕ್ಷಣ ಸುಖ ಕೊಟ್ಟರೆ; ವಿದ್ಯೆ ಶಾಶ್ವತ ಸುಖ ನೀಡುವುದು- ರಾಜೇಶ್ವರ ಶ್ರೀಗಳು
ಬಸವಕಲ್ಯಾಣ:ಜೀವನದ ಆಧ್ಯಾತ್ಮ ಗುರು ಇದ್ದರೆ ಸಾಮಾಜಿಕ ಗುರು ಅಂದರೆ ಶಿಕ್ಷಕ,ಕಾಡಿರುವ ವ್ಯಕ್ತಿಗೆ ಶಿಕ್ಷಣ ನೀಡಿ ಶಿಲ್ಪಿಯಾಗಿ ಶಿಕ್ಷಕ ನೀಡುತ್ತಾನೆ. ಅನ್ನದಾನವು ಸರ್ವ ಶ್ರೇಷ್ಠ ಅದು ಒಂದು ದಿನ ಸುಖ ಕೊಡುತ್ತದೆ ಅದೇ ಶಿಕ್ಷಕ ವಿದ್ಯೆ ನೀಡಿದರೆ ಅವನ ಜೀವನ ತುಂಬಾ ಸುಖ ಸರ್ವ ಶ್ರೇಷ್ಠ ವಾಗುತ್ತದೆಂದರು.ಆತ್ಮ ಸಮಾಧಾನವಾದರೆ ಎಲ್ಲವೂ ಸಮಾಧಾನವಾಗುತ್ತದೆಂದು ರಾಜೇಶ್ವರ ಹಿರೇಮಠದ ಷ.ಬ್ರ.ಪೂಜ್ಯ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು.
ತಾಯಿ ಇವತ್ತು ದೇವರಾಗ್ಯಾರ ಯಲ್ಲಾಲಿಂಗ ಆಶೀರ್ವಾ ದದಿಂದ ಶರಣೆ ಮಹಾದೇವಿ ಆಗಿದ್ದಾರೆ.
ಸರ್ವಾಧ್ಯಕ್ಷರ ನುಡಿ:
ಈ ಕ್ಷಣ ನಾನು ನಿಮ್ಮ ಮುಂದೆ ನಿಂತು ಈ ಶಿಕ್ಷಕ–ಕವಿ ಸಮ್ಮೇಳನದ ಸಮಾರೋಪ ನುಡಿಯನ್ನು ನುಡಿಸುವುದು ಅತ್ಯಂತ ಗೌರವ ಮತ್ತು ಸಂತೋಷದ ವಿಷಯವಾಗಿದೆ
ಇಂದು ನಡೆದ ಈ ಸಮ್ಮೇಳನವು ಕೇವಲ ಒಂದು ಕಾರ್ಯಕ್ರಮವಲ್ಲ ಇದು ಶಿಕ್ಷಣ ಮತ್ತು ಸಾಹಿತ್ಯ ಕೈಕೈ ಹಿಡಿದು ನಡೆದ ಸಾಂಸ್ಕೃತಿಕ ಯಾತ್ರೆ
ಚಾಕು ಹಿಡಿದ ಕೈಯಲ್ಲೇ ಪೆನ್ನು ಹಿಡಿದು,
ವಿದ್ಯಾರ್ಥಿಯ ಬುದ್ಧಿಗೆ ಬೆಳಕು ನೀಡುವ ಜೊತೆಗೆ
ಸಮಾಜದ ಅಂತರಂಗಕ್ಕೂ ಬೆಳಕು ಹಚ್ಚುವ
ಶಿಕ್ಷಕ–ಕವಿಗಳ ಶ್ರೇಷ್ಠತೆ ಇಲ್ಲಿ ಪ್ರತಿಫಲಿಸಿದೆ
ಶಿಕ್ಷಕನು ತರಗತಿಯಲ್ಲಿ ಪಾಠ ಹೇಳುತ್ತಾನೆ
ಕವಿಯಾದಾಗ ಜೀವನದ ಪಾಠ ಹೇಳುತ್ತಾನೆ
ಒಬ್ಬ ಶಿಕ್ಷಕ–ಕವಿ ಅಕ್ಷರ ಕಲಿಸುತ್ತಾನೆ ಮಾತ್ರವಲ್ಲ ಅಂತರಾತ್ಮ ಜಾಗೃತಗೊಳಿಸುತ್ತಾನೆ.ಇಂದು ಇಲ್ಲಿ ಕೇಳಿದ ಕವನಗಳು ಕೇವಲ ಸಾಲುಗಳಲ್ಲ ಅವು ಅನುಭವದ ನಾದಗಳು,ಸಮಾಜದ ನೋವಿನ ಪ್ರತಿಧ್ವನಿಗಳು, ಮಾನವೀಯತೆಯ ಮಿಡಿತಗಳು.ಈ ಸಮ್ಮೇಳನದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಶಿಕ್ಷಕ–ಕವಿಯೂ
ತಮ್ಮ ಚಿಂತನೆ, ಸಂವೇದನೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅಕ್ಷರಗಳ ಮೂಲಕ ನಮ್ಮ ಮುಂದೆ ಇಟ್ಟಿದ್ದಾರೆ.ಅದು ನಮ್ಮೆಲ್ಲರಿಗೂ ದಿಕ್ಕು ತೋರಿಸುವ ದೀಪವಾಗಿದೆ.ತಮ್ಮ ಕವನ–ಚಿಂತನೆಗಳಿಂದ ವೇದಿಕೆಯನ್ನು ಶ್ರೀಮಂತಗೊಳಿಸಿದ ಶಿಕ್ಷಕ–ಕವಿಗಳಿಗೆ,
ಮತ್ತು ಶ್ರದ್ಧೆಯಿಂದ ಕಾರ್ಯಕ್ರಮವನ್ನು ಆಲಿಸಿದ ಎಲ್ಲಾ ಶ್ರೋತೃಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ಭವಿಷ್ಯದಲ್ಲೂ ಇಂತಹ ಶಿಕ್ಷಕ–ಕವಿ ಸಮ್ಮೇಳನಗಳು
ನಿರಂತರವಾಗಿ ನಡೆಯಲಿ,ಶಿಕ್ಷಕ–ಕವಿಗಳ ಕಲಮಿನಿಂದ
ಸಮಾಜಕ್ಕೆ ಹೊಸ ಚೇತನ ಹರಿದು ಬರಲಿ,
ಮಾನವೀಯ ಮೌಲ್ಯಗಳು ಮತ್ತಷ್ಟು ಗಟ್ಟಿಯಾಗಲಿ ಎಂದು ಸಮ್ಮೇಳನಾಧ್ಯಕ್ಷರಾದ ಶಿವರಾಜ ಡಿ.ಮೇತ್ರೆ ನುಡಿದರು.
ಎಲ್ಲಾ ದಾಸೋಹಕ್ಕಿಂತ ಹೊಟ್ಟೆ ತುಂಬುವ ಮತ್ತು ನೆತ್ತಿ ತುಂಬುವ ಕೆಲಸ ದಾಸೋಹ ನಡೆದಿದೆ. ಯಲ್ಲಾಲಿಂಗ ಪ್ರಭುಗಳ ಆಧ್ಯಾತ್ಮ ಚಿಂತನೆ ಮೂಲಕ ಶ್ರದ್ಧೆ, ಭಕ್ತಿ ಮೂಲಕ ಜನರಲ್ಲಿ ಸದ್ಭಾವ ಜೊತೆ ಸಾಹಿತ್ಯ ಜ್ಞಾನ ತುಂಬುವ ಕೆಲಸ ನಡೆದಿದೆ ಎಂದು ಸಸ್ತಾಪೂರ ಶರಣ ಶಿವಲಿಂಗೇಶ್ವರ ಮಠದ ಪೂಜ್ಯಶ್ರೀ ಸದಾನಂದ ಅಪ್ಪಗಳು
ಆಶೀರ್ವಾದ ನುಡಿದರು.
ಕೌಡ್ಯಳಾ ಎಸ್ ದ ದೇವಿ ಗುಡಿಯ ಶ್ರೀ ಭಾಗ್ಯವಂತಿ , ಡಾ.ಶೋಭಾದೇವಿ ಚಕ್ಕಿ ವೇದಿಕೆಯಲ್ಲಿದ್ದರು.
ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಆಡಿದರು ಡಾ.ಸಂಜುಕುಮಾರ ನಡುಕರ ನಿರೂಪಿಸಿದರು ಸಿದ್ದಲಿಂಗ ಜಮಾದಾರ ವಂದಿಸಿದರು.ಖ್ಯಾತ ಕಲಾವಿದ ಚಿದಾನಂದ ಝಳಕಿ ಮತ್ತು ಜನಾರ್ಧನ ವಾಗಮ್ಮಾರೆ ಸಂಗೀತ ನಡೆಸಿಕೊಟ್ಟರು
ಶ್ರೀಮತಿ ಶಾಂತಾಬಾಯಿ ಅಂಬಾದಾಸ ನಿಲೆ ಗದ್ಲೇಗಾಂವ್ ಅವರಿಂದ ಪೂಜ್ಯ ಮಹಾದೇವಿ ತಾಯಿ ಅವರಿಗೆ ತುಲಾಭಾರ ಜರುಗಿತು.
