ಡೆಲ್ಲಿ ಪಬ್ಲಿಕ್ ಶಾಲೆ, ಬೆಂಗಳೂರು ಉತ್ತರ ವಲಯ ಸ್ವಾತಂತ್ರ್ಯ ದಿನಾಚರಣೆ

ಡೆಲ್ಲಿ ಪಬ್ಲಿಕ್ ಶಾಲೆ, ಬೆಂಗಳೂರು ಉತ್ತರ ವಲಯ ಸ್ವಾತಂತ್ರ್ಯ ದಿನಾಚರಣೆ

ಡೆಲ್ಲಿ ಪಬ್ಲಿಕ್ ಶಾಲೆ, ಬೆಂಗಳೂರು ಉತ್ತರ ವಲಯ

ಸ್ವಾತಂತ್ರ್ಯ ದಿನಾಚರಣೆ 

ಡೆಲ್ಲಿ ಪಬ್ಲಿಕ್ ಶಾಲೆ, ಬೆಂಗಳೂರು ಉತ್ತರ ವಲಯದಲ್ಲಿ ಶುಕ್ರವಾರ ಭವ್ಯವಾಗಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಎನ್‌ಸಿಸಿ ವಿದ್ಯಾರ್ಥಿಗಳಿಂದ ನಡೆದ ಶಿಸ್ತಿನ ಹಾಗೂ ಆಕರ್ಷಕ ಮೆರವಣಿಗೆಯೊಂದಿಗೆ ಎಲ್ಲ ಗೌರವಾನ್ವಿತ ಗಣ್ಯರನ್ನು ಸ್ವಾಗತಿಸಲಾಯಿತು. ಶಾಲೆಯ ಗೌರವಾನ್ವಿತ ಪ್ರಾಂಶುಪಾಲರು ಹಾಗೂ ಮುಖ್ಯ ಅತಿಥಿಗಳಾದ ಲೆಫ್ಟಿನೆಂಟ್ ಕರ್ನಲ್ ಹಿಮಾಂಶು ವರ್ಮರವರು ರಾಷ್ಟ್ರಧ್ವಜವನ್ನು ಗೌರವದೊಂದಿಗೆ ಹಾರಿಸುವುದರ ಮೂಲಕ ಸಮಾರಂಭವನ್ನು ಭಾವಪೂರ್ಣವಾಗಿ ಪ್ರಾರಂಭಿಸಿದರು.

 ಕನ್ನಡ ವಿಭಾಗದ ಮುಖ್ಯಸ್ಥರಾದ ಗೌರವಾನ್ವಿತ ಶ್ರೀಮತಿ ಸುಮತಿ ಮೇಡಂ ಅವರು ಈ ದಿನದ ಐತಿಹಾಸಿಕ ಹಾಗೂ ರಾಷ್ಟ್ರೀಯ ಮಹತ್ವವನ್ನು ಮನೋಜ್ಞವಾಗಿ ವಿವರಿಸಿದರು.

ಕಾರ್ಯಕ್ರಮದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಶುಭ ದಿನದಂದು 6ರಿಂದ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೂ ಹುತಾತ್ಮರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವ ನೃತ್ಯಗಳನ್ನು ಉತ್ಸಾಹಭರಿತವಾಗಿ ಪ್ರದರ್ಶಿಸಿದರು. ಇತ್ತೀಚೆಗೆ ಪೆಹಲ್ಗಾಮ್‌ನಲ್ಲಿ ದೇಶಭಕ್ತಿ ಮೆರೆದ ಸಾಹಸಿ ಯೋಧರನ್ನು ನೆನೆಯುತ್ತಾ ಭಾವಪೂರ್ಣ ನೃತ್ಯಗಳನ್ನು ಪ್ರದರ್ಶಿಸಿದರು