ಅರಿವು ಶಿಕ್ಷಣ ಕೇಂದ್ರದಲ್ಲಿನಟ ಡಾ.ಪುನೀತ್ ರಾಜಕುಮಾರ್ ಅವರ 50ನೇಹುಟ್ಟುಹಬ್ಬ ಆಚರಣೆ

ಅರಿವು ಶಿಕ್ಷಣ ಕೇಂದ್ರದಲ್ಲಿನಟ ಡಾ.ಪುನೀತ್ ರಾಜಕುಮಾರ್ ಅವರ 50ನೇಹುಟ್ಟುಹಬ್ಬ ಆಚರಣೆ
ಆಳಂದ ಕಿಣ್ಣಿಸುಲ್ತಾನ ಗ್ರಾಮದಲ್ಲಿ ಅರಿವು ಶಿಕ್ಷಣ ಕೇಂದ್ರದಲ್ಲಿ ನಟ ಪುನೀತ್ ರಾಜಕುಮಾರ ರವರ 50 ನೇ ಹುಟ್ಟುಹಬ್ಬ ಆಚರಿಸಲಾಯಿತು. ಸಿದ್ಧಾರ್ಥ್ ಪಾಂಡುರಂಗ ಶೃಂಗೇರಿ ರವರು ಅರಿವು ಶಿಕ್ಷಣ ಕೇಂದ್ರದ ಮಕ್ಕಳಿಗೆ ನೋಟ್ ಬುಕ್ ಪೆನ್ನುವಿತರಣೆ ಮಾಡಿದರು ಕಾರ್ಯಕ್ರಮದಲ್ಲಿ ಹಣಮಂತ ಚಿಂಚೋಳಿ ಶಿಕ್ಷಕಿ ಪಲ್ಲವಿ ಎಚ್ ಚಿಂಚೋಳಿ ಅರಿವು ಶಿಕ್ಷಣ ಕೇಂದ್ರದ ಅಧ್ಯಕ್ಷರು ಮಲ್ಲಿಕಾರ್ಜುನ ಶೃಂಗೇರಿ ರವಿಕಾಂತ್ ಭಜನ್ ವಿಕ್ರಾಂತ ಶೃಂಗೇರಿ ಕೈಲಾಸ ಹಿರಿನಾಯಕ್ ಸಚಿನ್ ಖಂಡಪ್ಪ ಆದಿತ್ಯ ವಿಕಾಸ್ ಚಿಂಚೋಳಿ ಮುಂತಾದ ಗ್ರಾಮಸ್ಥರು ಭಾಗಿಯಾಗಿದ್ದರು ಕಾರ್ಯಕ್ರಮದ ಕುರಿತು ಅಧ್ಯಕ್ಷರು ಮಲ್ಲಿಕಾರ್ಜುನ್ ಶೃಂಗೇರಿ ಅವರು ಮಾತನಾಡಿ ಪುನೀತ್ ರವರ ಅಗಲಿಕೆ ಕರುನಾಡಿಗೆ ನಷ್ಟವಾಗಿದೆ ಅವರು ನೀಡಿದ ಕೊಡುಗೆ ಸಮಾಜಕ್ಕೆ ಅಮರ ಮತ್ತು ಅಪಾರ ಎಂದು ನುಡಿದರು. ಸಿದ್ದಾರ್ಥ್ ಅವರು ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾದರು ಹಣಮಂತ ಚಿಂಚೋಳಿಯವರು ಮಾತನಾಡಿ ಪುನೀತ್ ರಾಜಕುಮಾರ್ ಅವರ ಚಿತ್ರರಂಗದ ಸಾಧನೆಯ ಕುರಿತು ಮಾತನಾಡಿ ಅವರ ಬಾಲ್ಯದ ಸಾಧನೆಗಳನ್ನು ನೆನೆದರು. ಹಣಮಂತ ಚಿಂಚೋಳಿ ಸ್ವಾಗತಿಸಿದರು. ಖಂಡಪ್ಪ ಶೃಂಗೇರಿ ನಿರೂಪಿಸಿದರು. ವಿಕಾಸ ಶೃಂಗೇರಿ ವಂದಿಸಿದರು.
ವರದಿ ಡಾ. ಅವಿನಾಶ S ದೇವನೂರ ಆಳಂದ