ಕನ್ನಡಿಗರ ಮುಖವಾಣಿ ವೇದಿಕೆಯಾಗಲಿ- ವಿಜಯಕುಮಾರ

ಕನ್ನಡಿಗರ ಮುಖವಾಣಿ ವೇದಿಕೆಯಾಗಲಿ- ವಿಜಯಕುಮಾರ

ಕನ್ನಡಿಗರ ಮುಖವಾಣಿ ವೇದಿಕೆಯಾಗಲಿ- ವಿಜಯಕುಮಾರ

ಕಲಬುರಗಿ: ಕನ್ನಡ ನಾಡು ನುಡಿಗಾಗಿ ಹಲವು ಹಲವು‌ ಸಂಘಟನೆಗಳು ಇದ್ದರು ಸಾಲದು.ಸಿರಿಗನ್ನಡ ವೇದಿಕೆ ಕಲಬುರಗಿಯ ಕನ್ನಡಿಗರ ಮುಖ ವಾಣಿಯಾಗಿ ಬರಲಿ

ಎಂದು ಯುವ‌ ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ರಾಮಕೃಷ್ಣ ಅಭಿಮತ ವ್ಯಕ್ತಪಡಿಸಿದರು.

   ‌ ಪೃಥ್ವಿ ನರಸಿಂಗ ಕಾಲೇಜಿನ ಜಿ.ರಾಮಕೃಷ್ಣ ಸಭಾಂಗಣದಲ್ಲಿ ಪಿ.ವಿ.ಅಸರ್.ಶಿಕ್ಷಣ ಮತ್ತು ಚಾರಿಟೆ ಬಲ್ ಟ್ರಸ್ಟ್ ಆಶ್ರಯದಲ್ಲಿ ಸಿರಿಗನ್ನಡ ವೇದಿಕೆ ತಾಲೂ ಕಾ ಘಟಕ ಉದ್ಘಾಟಿಸಿ ಮಾತನಾಡಿ ಕನ್ನಡದ ಬಗ್ಗೆ ತಿಳಿ ದುಕೊಂಡು ಬೆಳೆಸಲು ಕರೆ ನೀಡಿದರು.ಸಾಹಿತಿ ,ಮಹಾ ಗಾಂವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲ ಡಾ.ಶರಣಪ್ಪ ಮಾಳಗೆಯವರು ವಿಶೇಷ ಉಪನ್ಯಾಸವನ್ನು ನೀಡುತ್ತ ಕನ್ನಡ ನಾಡು ನುಡಿಗೆ ತನ್ನ ದೇ ಆದ ಪರಂಪರೆ ವಿಶಿಷ್ಟತೆ ಇರುವ ನಾಡು.ಜಾತ್ಯ ತೀತ,ಧರ್ಮಾತೀತವಾಗಿ ಕನ್ನಡಿಗರು ಬಾಳಿದರು.ವಿದ್ಯಾ ರ್ಥಿಗಳಿಗೆ ಕನ್ನಡ ಮಾಧ್ಯಮದ ಭಾಷೆಯಾಗಿ ನಂತರ ಉಳಿದ ಭಾಷೆಗಳಿಗೆ ಆದ್ಯತೆ ನೀಡಲಿ ಕನ್ನಡ ಕಲಾ ಪರಂಪರೆ, ರಾಜ ಮನೆತನಗಳು ಆಳಿದ ಸಮಾನತೆ ನೀಡಿದೆ ಎಂದು ಕರೆ ನೀಡಿದರು.

ಅಧ್ಯಕ್ಷತೆಯನ್ನು ಸಿರಿಗನ್ನಡ ವೇದಿಕೆ ತಾಲೂಕಾಧ್ಯಕ್ಷ ಡಾ.ಸಿದ್ಧಲಿಂಗ ದಬ್ಬಾ ವಹಿಸಿ ಕನ್ನಡ ಪ್ರಾಚೀನ ಪರಂಪರೆ, ಭಾಷೆ,ಸಂಸ್ಕೃತಿ, ಜೊತೆಗೆ ಕನ್ನಡಿಗರ ಮೀಸಲಾತಿ, ಪ್ರತ್ಯೇಕ ಕೂಗಿನ ಮಧ್ಯ ಕನ್ನಡ ಅಸ್ಮಿತೆ ಉಳಿಸಿಕೊಂಡು ಬಂದಿದೆ ಎಂದರು.ಆಶಯ ನುಡಿ ಆಡಿದ ಜಿಲ್ಲಾ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ನಮ್ಮ ಕನ್ನಡ ಭಾಷೆ,ಸಾಹಿತ್ಯ-ಸಾಹಿತಿಗಳನ್ನು ಗುರುತಿಸುವ ಕನ್ನಡ ಅಂಕಿ ಬಳಸುವ ನಿಟ್ಟಿನಲ್ಲಿ ವೇದಿಕೆ ಕೆಲಸ ಮಾಡಲಿದೆ ಎಂದರು.

ಪ್ರಾಂಶುಪಾಲರಾದ ಡಾ.ಸುದಿನಾ ವಿ.ಗುಂಡಪ್ಪ,‌ವೀರೇಶ ಉಪಸ್ಥಿತರಿದ್ದರು.

ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕ‌ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸೋನಿಕಾ ಮಹಾಂತೇಶ,ಸೋನಿಯಾ ಸಂಜೀವ ,ರೇಣುಕಾ ಶರಣಪ್ಪ,ರೇಣುಕಾ ಮಲ್ಲಿಕಾರ್ಜುನ,ಕುಶಾಲ ಬಸವರಾಜ ಅವರಿಗೆ ಸನ್ಮಾನಿಸಲಾಯಿತು

ಪೃಥ್ವಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆಂಜನೇಯ ಸಿಂಗನೋಡಿ ಸ್ವಾಗತಿಸಿದರು ವಿದ್ಯಾರ್ಥಿಗಳು ಪ್ರಾರ್ಥಿ ಸಿದರು ಡಾ.ಸಿದ್ಧಪ್ಪ ಹೊಸಮನಿ ಅತಿಥಿಗಳ ಪರಿ ಚಯಿ ಸಿದರು.ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು.ವಂದನಾರ್ಪಣೆ