ಗಾಂಧೀಜಿ ಪ್ರತಿಪಾದಿಸಿದ ಜೀವನ ಮೌಲ್ಯಗಳ ಪುನರುತ್ಥಾನ ಯುವ ಜನರಿಂದ ಸಾಧ್ಯ ಕರ್ನಾಟಕ ಸರ್ವೋದಯ ಮಂಡಳ ಅಧ್ಯಕ್ಷ ಡಾ.ಹೆಚ್. ಎಸ್ ಸುರೇಶ್ ಅಭಿಮತ

ಗಾಂಧೀಜಿ ಪ್ರತಿಪಾದಿಸಿದ ಜೀವನ ಮೌಲ್ಯಗಳ ಪುನರುತ್ಥಾನ ಯುವ ಜನರಿಂದ ಸಾಧ್ಯ  ಕರ್ನಾಟಕ ಸರ್ವೋದಯ ಮಂಡಳ ಅಧ್ಯಕ್ಷ ಡಾ.ಹೆಚ್. ಎಸ್ ಸುರೇಶ್ ಅಭಿಮತ
ಗಾಂಧೀಜಿ ಪ್ರತಿಪಾದಿಸಿದ ಜೀವನ ಮೌಲ್ಯಗಳ ಪುನರುತ್ಥಾನ ಯುವ ಜನರಿಂದ ಸಾಧ್ಯ  ಕರ್ನಾಟಕ ಸರ್ವೋದಯ ಮಂಡಳ ಅಧ್ಯಕ್ಷ ಡಾ.ಹೆಚ್. ಎಸ್ ಸುರೇಶ್ ಅಭಿಮತ

ಗಾಂಧೀಜಿ ಪ್ರತಿಪಾದಿಸಿದ ಜೀವನ ಮೌಲ್ಯಗಳ ಪುನರುತ್ಥಾನ ಯುವ ಜನರಿಂದ ಸಾಧ್ಯ

 ಕರ್ನಾಟಕ ಸರ್ವೋದಯ ಮಂಡಳ ಅಧ್ಯಕ್ಷ ಡಾ.ಹೆಚ್. ಎಸ್ ಸುರೇಶ್ ಅಭಿಮತ 

 ಬೆಂಗಳೂರು ಹೆಸರಘಟ್ಟ ಮುಖ್ಯ ರಸ್ತೆಯ ಸಿಡೇದ ಹಳ್ಳಿಯಲ್ಲಿ ಶಿಕ್ಷಣ ತಜ್ಞ ಡಾ. ಉದಯರತ್ನ ಕುಮಾರ್ ರವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ನಿಸರ್ಗ ವಿದ್ಯಾನಿಕೇತನ ಶಾಲೆಯ ರಜತ ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ವೋದಯ ಮಂಡಲ ಸಹಯೋಗದೊಂದಿಗೆ ಆಯೋಜಿಸಿದ್ದ ಚರ್ಚಾ ಸ್ಪರ್ಧೆ ಯನ್ನು ಆಚಾರ್ಯ ವಿನೋಬಾ ಭಾವೆಯವರ 131ನೇ ಜಯಂತಿಯ ದಿನದಂದು ರಾಷ್ಟ್ರೀಯ ಸೇವಾ ಯೋಜನೆ ಯ ನಿವೃತ್ತ ಸಲಹೆಗಾರ, ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ.ಎಚ್.ಎಸ್ ಸುರೇಶ್ ಉದ್ಘಾಟಿಸಿ ಮಾತನಾಡುತ್ತಾ ಭವ್ಯ ಭಾರತದ ಭವಿಷ್ಯದ ಪೀಳಿಗೆಯ ಯುವಜನರಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಜೀವನ ಮೌಲ್ಯಗಳು ಪುನರುತ್ಥಾನವಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

 ಮಾನವೀಯತೆ ಇಲ್ಲದ ವಿಜ್ಞಾನ, ತತ್ವ ರಹಿತ ರಾಜಕೀಯ, ಚರಿತ್ರೆವಿಲ್ಲದ ಶಿಕ್ಷಣ , ನೀತಿ ಇಲ್ಲದ ವ್ಯಾಪಾರ, ದುಡಿಮೆ ಇಲ್ಲದ ಸಂಪತ್ತು ಈ ವಿಚಾರಗಳ ಕುರಿತು ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮಾತನಾಡಿದರು.

 ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶ್ರಾವಣಿ ಆರ್ ಗೌಡ ಪ್ರಥಮ ಬಹುಮಾನ, ಡಿಂಪಲ್ ಮತ್ತು ನಿರೀಕ್ಷ ಎರಡನೇ ಬಹುಮಾನವನ್ನು ಸಮನಾಗಿ ಹಾಗೂ ಸಂತೋಷ್ ಮೂರನೇ ಬಹುಮಾನಕ್ಕೆ ಭಾಜನರಾದರು.

 ಕರ್ನಾಟಕ ಸರ್ವೋದಯ ಮಂಡಲದ ಗೌ.ಕಾರ್ಯದರ್ಶಿ ಡಾ.ಯ.ಚಿ.ದೊಡ್ಡಯ್ಯ, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯನಿ ಜಯಮಾಲಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಶಾಲೆಯ ಆಡಳಿತಾಧಿಕಾರಿ ಧನುಷ್ ಕುಮಾರ್ ವೇದಪುರಿ, ಉಪಸ್ಥಿತರಿದ್ದರು, ಅಧ್ಯಾಪಕರಾದ ಆರಿಫ್ ಪಾಷಾ ಮತ್ತು ಮಮತಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕು. ಭುವನ ಪ್ರಾರ್ಥನೆ ಮತ್ತು ಸಾವಿತ್ರಮ್ಮನವರು ನಿರೂಪಣೆ ನಡೆಸಿಕೊಟ್ಟರು.