ಚಿಂಚೋಳಿ ಸರಕಾರಿ ಆಸ್ಪತ್ರೆಯಲ್ಲಿ ಸರಕಾರಿ ಮುದ್ರಿತ ಇಲ್ಲದ 110 ರು ಮುಖ ಬೆಲೆಯ ಟಾನಿಕ್ ರೋಗಿಗೆ ವಿತರಣೆ, ಕಾಳ ಸಂತೆಯಲ್ಲಿನ ಮೆಡಿಕಲ್ ಅಂಗಡಿಗಳಿಗೆ ಮಾರಾಟವಾಗು ಶಂಕೆ

ಚಿಂಚೋಳಿ ಸರಕಾರಿ ಆಸ್ಪತ್ರೆಯಲ್ಲಿ  ಸರಕಾರಿ ಮುದ್ರಿತ ಇಲ್ಲದ 110 ರು ಮುಖ ಬೆಲೆಯ ಟಾನಿಕ್ ರೋಗಿಗೆ ವಿತರಣೆ,  ಕಾಳ ಸಂತೆಯಲ್ಲಿನ ಮೆಡಿಕಲ್ ಅಂಗಡಿಗಳಿಗೆ ಮಾರಾಟವಾಗು ಶಂಕೆ

ಚಿಂಚೋಳಿ ಸರಕಾರಿ ಆಸ್ಪತ್ರೆಯಲ್ಲಿ ಸರಕಾರಿ ಮುದ್ರಿತ ಇಲ್ಲದ 110 ರು ಮುಖ ಬೆಲೆಯ ಟಾನಿಕ್ ರೋಗಿಗೆ ವಿತರಣೆ, 

ಕಾಳ ಸಂತೆಯಲ್ಲಿನ ಮೆಡಿಕಲ್ ಅಂಗಡಿಗಳಿಗೆ ಮಾರಾಟವಾಗು ಶಂಕೆ 

ಚಿಂಚೋಳಿ :ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ವಿತರಿಸುವ ಕೆಮ್ಮು, ನೆಗಡಿ ಮತ್ತು ಕಫಾ ಹೋಗಲಾಡಿಸುವ ಸಂಭಂದಿಸಿದ ಕಾಯಿಲೆಗೆ ನೀಡುವ ಲೆವೊಸಲ್ಬುಟಮಾಲ್ ಸಲ್ಫೇಟ್, ಆಂಬ್ರೋಕ್ಸೋಲ್ ಹೈಡ್ರೋಕ್ಲೋರೈಡ್ ಮತ್ತು ಗ್ವೈಫೆನೆಸಿನ್ ಸಿರಪ್ ಮುಡ್ರಿತಗೊಂಡಿರುವ Amrox-LS 100 ml ನ ಟಾನಿಕ್ ಮೇಲೆ 110 ರು ಬೆಲೆಯ ಮೊತ್ತದೊಂದಿಗೆ ಮುದ್ರಿಸಿರುವ ಟಾನಿಕ್ ಆಸ್ಪತ್ರೆಗೆ ಬಂದ ರೋಗಿಗಳಿಗೆ ವಿತರಿಸಲಾಗುತ್ತಿರುವುದನ್ನು ಕಂಡು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. 

ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ವಿತರಿಸುವ ಪ್ರತಿಯೊಂದು ಔಷಧಿಗಳ ಮೇಲೆ ಸರಕಾರದ ಚಿನ್ನೆ ಹಾಗೂ ಇದು ಮಾರಾಟಕಿಲ್ಲ. ಉಚಿತ ಎಂದು ಮುದ್ರಿತಗೊಂಡಿರುತ್ತವೆ. ಈ ಯಾವ ಅಂಶಗಳು ಆ ವಿತರಿಸಿದ ಟಾನಿಕ್ ನ ಮೇಲೆ ರೋಗಿಗೆ ಕಂಡಿಲ್ಲದ್ದರಿಂದ ಅಚ್ಚರಿಪಟ್ಟಿದ್ದಾನೆ. ವಿತರಕರು ರೋಗಿಯ ಬಳಿ ಔಷಧಿಗೆ ಯಾವುದೇ ಹಣ ಪಡೆದಿಲ್ಲ. ಆದರೆ ಸರಕಾರಿ ಟಾನಿಕ್ ಎಂದು ತೋರಪಡಿಸುವ ಯಾವುದೇ ಮುದ್ರೆ ಇಲ್ಲದಿರುವುದರಿಂದ ಸರಕಾರಿ ಆಸ್ಪತ್ರೆಗೆ ಬಂದ ಗ್ರಾಮೀಣ ಭಾಗದ ಬಡ ಮೂಲ ರೋಗಿಗಳಿಗೆ ಔಷಧಿ ಸಿಗದೇ, ಔಷಧಿಗಳು ಕಾಳ ಸಂತೆ ಖಾಸಗಿ ಮೆಡಿಕಲ್ ಮಾಲ್ ಅಂಗಡಿಗಳಿಗೆ ಮಾರಾಟವಾಗಿ ಸೇರಿಕೊಂಡು ಆಸ್ಪತ್ರೆಗೆ ಟಾನಿಕ್ ಗಳ ಶೇಖರಣೆ ಕೊರತೆ ಉಂಟಾಗಬಹುದು ಎಂದು ತಾಲೂಕ ಆಡಳಿತದ ನಡತೆಯ ಮೇಲೆ ಸಾರ್ವಜನಿಕರಲ್ಲಿ ಶಂಕೆ ವ್ಯಕ್ತವಾಗಿದೆ.